ಕಾನೂನು ಬಾಹಿರವಾಗಿ ಶಿವಮೊಗ್ಗ ಜಿಲ್ಲೆಯಲ್ಲಿ ಅನಾನುಕೂಲ ಪರಿಸ್ಥಿತಿ ಮತ್ತು ದುರ್ಬಲ ವರ್ಗದ ವಲಸೆ ಮಕ್ಕಳ ಕೋಟಾದ ಅಡಿಯಲ್ಲಿ ಮಕ್ಕಳನ್ನು ಸಂಬ0ಧಪಟ್ಟ ಅಧಿಕಾರಿಗಳು ಅನಧಿಕೃತವಾಗಿ ಆರ್.ಟಿ.ಇ ಸೀಟ್ ಹಂಚಿಕೆ ಮಾಡಿರುವ ಕುರಿತು ಸಂಬ0ದಪಟ್ಟ ಅಧಿಕಾರಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಿ ಬೇಕಂದು ಒತ್ತಾಯಿಸಲಾಯಿತು.

2012 ರಿಂದ ಇದುವರೆಗೂ ರಾಜ್ಯದಲ್ಲಿ ವಲಸೆ ಅನಾನುಕೂಲ ಪರಿಸ್ಥಿತಿ ಮತ್ತು ದುರ್ಬಲ ವಿಭಾಗದ ಕೋಟಾದ ಆರ್.ಟಿ.ಇ ಸೀಟ್ ಹಂಚಿಕೆಯಾಗಿರುವ ಬಗ್ಗೆ ಸಂಪೂರ್ಣ ತನಿಖೆ ಮಾಡುವ ಬಗ್ಗೆ, ಶಿವಮೊಗ್ಗ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಕರುನಾಡ ವಿಜಯಸೇನೆಯ, ಶಿವಮೊಗ್ಗ ಘಟಕದ ವತಿಯಿಂದ ಜಿಲ್ಲಾಧ್ಯಕ್ಷರಾದ ಶ್ರೀ. ತ್ಯಾಗರಾಜ್ ಜಿ. ಹಾಗು ಗೌರವಾಧ್ಯಕ್ಷರಾದ ಶ್ರೀ. ಶಂಕರ್ ಹೆಚ್. ರವರ ನೇತೃತ್ವದಲ್ಲಿ ಮನವಿ ಪತ್ರವನ್ನು ಸಲ್ಲಿಸಲಾಯಿತು.

ಈ ಸಂಧರ್ಭದಲ್ಲಿ ಉಪಾಧ್ಯಕ್ಷರಾದ ಶ್ರೀ. ರವಿಕುಮಾರ್ ಎಸ್. ಪ್ರಧಾನ ಕಾರ್ಯದರ್ಶಿ ಬಿ.ಟಿ.ಜಯಚಂದ್ರ ಅಧ್ಯಕ್ಷರಾದ ಶ್ರೀಮತಿ. ಸೌಮ್ಯ ಶ್ರೀನಿವಾಸ್ ಹಾಗು ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!