ಶಿವಮೊಗ್ಗ ಜೂನ್ 02 : ಆತ್ಮನಿರ್ಭರ ಭಾರತ ಅಭಿಯಾನದ ಅಂಗವಾಗಿ ಪ್ರಧಾನಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ದಗೊಳಿಸುವಿಕೆ(ಪಿಎಂಎಫ್‍ಎಂಇ) ಯೋಜನೆಯು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಒಂದು ಪ್ರಮುಖ ಯೋಜನೆಯಾಗಿರುತ್ತದೆ.
ಈ ಯೋಜನೆಯಡಿ ಒಂದು ಜಿಲ್ಲೆ ಒಂದು ಉತ್ಪನ್ನ(ಒಡಿಒಪಿ)- ಅನಾನಸ್ ಬೆಳೆಗೆ ಕಾರ್ಯಕ್ರಮವನ್ನು ಸೀಮಿತಗೊಳಿಸಲಾಗಿತ್ತು. ಪ್ರಸ್ತುತ ಮಾರ್ಪಡಿಸಿದ ಕಾರ್ಯಕ್ರಮದಂತೆ ಅನಾನಸ್ ಬೆಳೆಯನ್ನು ಒಳಗೊಂಡು ಜಿಲ್ಲೆಯಲ್ಲಿ ಹೊಸದಾಗಿ ಯಾವುದೇ ಆಹಾರ ಸಂಸ್ಕರಣಾ ಘಟಕ ಸ್ಥಾಪಿಸುವ ಹಾಗೂ ಹಾಲಿ ಕಾರ್ಯ ನಿರ್ವಹಿಸುತ್ತಿರುವ ಅಸಂಘಟಿತ ಆಹಾರ ಸಂಸ್ಕರಣ ಉದ್ದಿಮೆಗಳ ಉನ್ನತೀಕರಣಕ್ಕೆ ಮತ್ತು ವಿಸ್ತರಣೆಗೆ ಅತ್ಯುತ್ತಮ ಅವಕಾಶ ಕಲ್ಪಿಸಲಾಗಿದೆ.
ಈ ಯೋಜನೆಯಡಿ ಪ್ರತಿ ಘಟಕಕ್ಕೆ ಶೇ.35 ರಷ್ಟು ಗರಿಷ್ಟ ರೂ.10 ಲಕ್ಷಗಳ ಸಹಾಯಧನದೊಂದಿಗೆ ರಾಜ್ಯ ಸರ್ಕಾರದಿಂದ ಹೆಚ್ಚುವರಿ ಶೇ.15 ರಷ್ಟು ಗರಿಷ್ಟ ರೂ.5 ಲಕ್ಷ ಸಹಾಯಧನ ನೀಡಿ ಒಟ್ಟು ಸಹಾಯಧನ ಶೇ.50 ಕ್ಕೆ(ಗರಿಷ್ಟ ರೂ.15 ಲಕ್ಷ ಮಿತಿಗೊಳಪಟ್ಟು) ಹೆಚ್ಚಿಸಲಾಗಿರುತ್ತದೆ.
ಈ ಸಹಾಯಧನವು ಹೊಸದಾಗಿ ಆಹಾರ ಸಂಸ್ಕರಣಾ ಘಟಕ ಸ್ಥಾಪಿಸುವ ಮತ್ತು ಹಾಲಿ ಕಾರ್ಯ ನಿರ್ವಹಿಸುತ್ತಿರುವ ವೈಯಕ್ತಿಕ ಉದ್ದಿಮೆದಾರರು ಹಾಗೂ ಗುಂಪುಗಳಿಗೆ (FPOs, SHGs, NGOs, Pvt.Ltd.Companies, Cooperatives)ಅನ್ವಯಿಸುತ್ತದೆ. ಆಸಕ್ತ ಫಲಾನುಭವಿಗಳು ಪಿಎಂಎಫ್‍ಎಂಇ ವೆಬ್‍ಸೈಟ್ ಲಿಂಕ್ http://pmfme.mofpi.gov.in ಪೋರ್ಟಲ್ ಮೂಲಕ ಅರ್ಜಿ ನೋಂದಾಯಿಸಿ ಯೋಜನೆಯ ಲಾಭ ಪಡೆದುಕೊಳ್ಳಲು ಕೋರಲಾಗಿದೆ.
ಹೆಚ್ಚಿನ ಮಾಹಿತಿಗೆ ಜಿಲ್ಲಾ ಜಂಟಿ ಕೃಷಿ ನಿರ್ದೇಶಕರು ಅಥವಾ ತೋಟಗಾರಿಕಾ ಉಪ ನಿರ್ದೇಶಕರನ್ನು ಅಥವಾ ಕೃಷಿ ಇಲಾಖೆಯು ನೇಮಿಸಿಕೊಂಡಿರುವ ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳನ್ನು ಸಂಪರ್ಕಿಸಬಹುದು. ಫಲಾನುಭವಿಗಳ ದಾಖಲೆಗಳ ಕ್ರೋಢೀಕರಣವೂ ಸೇರಿದಂತೆ ವಿಸ್ತøತ ಯೋಜನೆ ವರದಿ ತಯಾರಿಕೆ ಹಾಗೂ ಇತರೆ ತಾಂತ್ರಿಕ ಮಾರ್ಗದರ್ಶನಕ್ಕಾಗಿ ಲಕ್ಷ್ಮೀನಾರಾಯಣ 9448786634, ವಾಣಿಶ್ರೀ ಸಾಗರ 7892346281, ಜಯರಾಂ ಭಟ್ 9448218871, ಶ್ವೇತ ಎನ್ ಜಿ 8861413437 ಇವರನ್ನು ಸಂಪರ್ಕಿಸಬಹುದೆಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.