ಶಿವಮೊಗ್ಗ: ಮೇ-19 :ಕರ್ನಾಟಕ ವಾರ್ಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯು 2021-22ನೇ ಸಾಲಿನಲ್ಲಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯ ಅಭಿವೃದ್ಧಿ ಕಾರ್ಯಕ್ರಮದಡಿ ಜಾನುವಾರುಗಳ ರಬ್ಬರ್ ನೆಲಹಾಸು (Rubber Cow Mat) ಗಳನ್ನು ವಿತರಿಸಲು ಅರ್ಜಿಗಳನ್ನು ಆಹ್ವಾನಿಸಿದೆ.
ಹೈನುಗಾರಿಕೆಯಲ್ಲಿ ಅನುಭವವುಳ್ಳವರಾಗಿದ್ದು, ಕನಿಷ್ಟ 2 ರಾಸುಗಳನ್ನು ಹೊಂದಿರಬೇಕು ಹಾಗೂ ಸ್ಥಳೀಯ ಪಶುವೈದ್ಯರಿಂದ ದೃಢೀಕರಣ ಪತ್ರ ಪಡೆದಿರಬೇಕು. ಪ್ರತಿ ಫಲಾನುಭವಿಯು ಗುರುತಿನ ಸಂಖ್ಯೆಯನ್ನು ಹೊಂದಿರಬೇಕು. ಸರ್ಕಾರದ ನಿಯಮಾನುಸಾರ ಮಹಿಳೆಯರಿಗೆ, ಅಂಗವಿಕಲರಿಗೆ ಹಾಗೂ ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡಲಾಗುವುದು.
ಆಸಕ್ತರು ನಿಗಧಿತ ನಮೂನೆ ಅರ್ಜಿಯನ್ನು ಆಯಾ ತಾಲೂಕಿನ ಮುಖ್ಯ ಪಶುವೈದ್ಯಾಧಿಕಾರಿಗಳ ಕಚೇರಿಯಿಂದ ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ಸೂಕ್ತ ದಾಖಲೆಗಳನ್ನು ಲಗತ್ತಿಸಿ ದಿ: 05/06/2022 ರೊಳಗಾಗಿ ಸಲ್ಲಿಸುವಂತೆ ಪಶುಪಾಲನಾ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಶಿವಮೊಗ್ಗ -9482635093, ಭದ್ರಾವತಿ-9986624123, ತೀರ್ಥಹಳ್ಳಿ – 9448792886, ಹೊಸನಗರ- 9448165747, ಸಾಗರ-9448007542, ಸೊರಬ-9481255897 ಹಾಗೂ ಶಿಕಾರಿಪುರ -9482635093 ಆಯಾ ತಾಲೂಕು ಮುಖ್ಯ ಪಶುವೈದ್ಯಾಧಿಕಾರಿಗಳನ್ನು ಸಂಪರ್ಕಿಸುವುದು.