ಶಿವಮೊಗ್ಗ ಮೇ 18: 2022-23 ನೇ ಸಾಲಿನಲ್ಲಿ ಮೀನುಗಾರಿಕೆ ಇಲಾಖೆ ವತಿಯಿಂದ ಜಿಲ್ಲಾ ಪಂಚಾಯತ್ ವಲಯ ಮತ್ತು ರಾಜ್ಯ ವಲಯದಲ್ಲಿ ವಿವಿಧ ಯೋಜನೆಗಳಡಿ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಜಿ.ಪಂ ವಲಯ : ಜಲಾಶಯ/ನದಿಭಾಗ/ಕೆರೆಗಳ ವ್ಯಾಪ್ತಿಯ ವೃತ್ತಿಪರ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಮೀನುಗಾರರು/ಮೀನು ಕೃಷಿಕರಿಗೆ ಮೀನು ಹಿಡಿಯುವ ಬಲೆ ಅಥವಾ ಫೈಬರ್‍ಗ್ಲಾಸ್ ಹರಿಗೋಲು ಖರೀದಿಗೆ ಸಹಾಯಧನ(ಸೇವಾ ಸಿಂಧು ಪೋರ್ಟಲ್ ಮೂಲಕ) ಹಾಗೂ ಮೀನು ಮಾರಾಟದಲ್ಲಿ ತೊಡಗಿರುವ ಮೀನುಗಾರರಿಗೆ ದ್ವಿಚಕ್ರ ವಾಹನ ಖರೀದಿಗೆ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ರಾಜ್ಯ ವಲಯ : ಜಲಾಶಯ/ನದಿಭಾಗ/ಕೆರೆಗಳ ವ್ಯಾಪ್ತಿಯ ವೃತ್ತಿಪರ ಮೀನುಗಾರರಿಗೆ ಮೀನು ಹಿಡಿಯುವ ಬಲೆ ಅಥವಾ ಫೈಬರ್‍ಗ್ಲಾಸ್ ಹರಿಗೋಲು ಖರೀದಿಗೆ ಸಹಾಯಧನ, ಮೀನುಮರಿ ಖರೀದಿಸಲು ನೆರವು ಯೋಜನೆ(ಸೇವಾ ಸಿಂಧು ಪೋರ್ಟಲ್ ಮೂಲಕ), ಕೆರೆ/ಜಲಾಶಯಗಳ ಅಂಚಿನ ಕೊಳಗಳಲ್ಲಿ ಮೀನುಮರಿ ಪಾಲನೆಗೆ ನೆರವು ಹಾಗೂ ಕೆರೆಗಳನ್ನು ಗುತ್ತಿಗೆಗೆ ಪಡೆದ ಮೀನುಗಾರಿಕೆ ಸಹಕಾರ ಸಂಘಗಳಿಗೆ ಮೀನುಮರಿ ಬಿತ್ತನೆಗೆ ನೆರವು.
ಆಸಕ್ತರು ಜೂನ್ 10 ರೊಳಗೆ ಅಗತ್ಯ ದಾಖಲೆಗಳೊಡನೆ ಆಯಾ ತಾಲ್ಲೂಕಿನ ಮೀನುಗಾರಿಕೆ ಇಲಾಖೆಯ ಕಚೇರಿಯನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಆಯಾ ತಾಲ್ಲೂಕುಗಳ ಮೀನುಗಾರಿಕೆ ಸಹಾಯಕ ನಿರ್ದೇಶಕರವರ ಕಚೇರಿಯನ್ನು ಸಂಪರ್ಕಿಸಬಹುದೆಂದು ಮೀನುಗಾರಿಕೆ ಉಪನಿರ್ದೇಶಕರು ತಿಳಿಸಿದ್ದಾರೆ.

error: Content is protected !!