ಶಿವಮೊಗ್ಗ 16 ಮೇ 2022, ಪ್ರತಿ ವರ್ಷ ಮೇ 17ರಂದು ವಿಶ್ವದಾದ್ಯಂತ ಅಧಿಕ ರಕ್ತದೊತ್ತಡ ನಿರ್ಮೂಲನಾ ದಿನವನ್ನಾಗಿ ಆಚರಿಸಲಾಗುತ್ತಿದೆ. ಆಸ್ಪತ್ರೆಯ ವತಿಯಿಂದ ಕಳೆದ 4 ದಿನಗಳಿಂದ ನಗರದ ವಿವಿಧ ಭಾಗಗಳಲ್ಲಿ ಬೆಳಗಿನ ಜಾವ ವಾಕಿಂಗ್ ಮಾಡುವವರಿಗೆ ಉಚಿತ ರಕ್ತದೊತ್ತಡ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು ಸುಮಾರು 1,500 ಕ್ಕೂ ಹೆಚ್ಚಿನ ಜನರು ಇದರ ಉಪಯೋಗವನ್ನು ಪಡೆದುಕೊಂಡು ತಮ್ಮ ರಕ್ತದೊತ್ತಡದ ಬಗ್ಗೆ ಮಾಹಿತಿಯನ್ನು ತಿಳಿದು ಕೊಂಡಿದ್ದಾರೆ. ಕೇವಲ ಇಂಥಹ ವಿಶೇಷ ದಿನಗಳಲ್ಲಿ ಮಾತ್ರವಲ್ಲದೆ ಆಸ್ಪತ್ರೆಯು ಸತತವಾಗಿ ಜನಪರ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ನಡೆಸುತ್ತಾ ಬಂದಿದೆ ಎಂದು ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ವರ್ಗೀಸ್ ಪಿ. ಜಾನ್ ರವರು ತಿಳಿಸಿದರು.
ಆಸ್ಪತ್ರೆಯ ಹಿರಿಯ ವೈದ್ಯರಾದ ಡಾ|| ಗೋಪಾಲ್ ಡಿ. ಮತ್ತು ಡಾ|| ಕಿರಣ್ ವಿ.ಹೆಚ್. ರವರು ಸಾರ್ವಜನಿಕರಿಗೆ ಉತ್ತಮ ಆರೋಗ್ಯ ನಿರ್ವಹಣೆಯಲ್ಲಿ ರಕ್ತದೊತ್ತಡವು ಪ್ರಮುಖ ಪಾತ್ರ ವಹಿಸುತ್ತದೆ. ವಯಸ್ಸಿಗೆ ಅನುಗುಣವಾಗಿ ಮತ್ತು ನಿಯಮಿತವಾಗಿ ಆರೋಗ್ಯ ತಪಾಸಣೆಗಳನ್ನು ಮಾಡಿಸಿಕೊಂಡು ಉತ್ತುಮ ಆರೋಗ್ಯ ಮತ್ತು ಜೀವನ ಶೈಲಿಯನ್ನು ರೂಢಿಸಿಕೊಳ್ಳಬೇಕು. ಪ್ರತೀ ದಿನ ನಿಯಮಿತ ನಡಿಗೆ, ವ್ಯಾಯಾಮ, ಯೋಗ, ಧ್ಯಾನ, ಉತ್ತಮ ಆಹಾರ ಪದ್ದತಿ ಹಾಗೂ ಸಾಕಷ್ಟು ನೀರು ಕುಡಿಯುವುದು ಇವು ಉತ್ತಮ ಆರೋಗ್ಯಕ್ಕೆ ಮೂಲ ಸೂತ್ರಗಳು ಎಂದು ಸಲಹೆ ನೀಡಿ ಸರ್ವೇ ಜನ ಸುಖಿನೋ ಭವತು ಎಂದು ಹೇಳಿದರು.

error: Content is protected !!