ಕೃಷಿ ಮಹಾವಿದ್ಯಾಲಯ, ನವಿಲೆ, ಶಿವಮೊಗ್ಗ ವತಿಯಿಂದ ಬೇಕರಿ ಘಟಕದಲ್ಲಿ ಮೂರು ದಿನಗಳ ಬೇಕರಿ ಉತ್ಪನ್ನಗಳ ತರಬೇತಿಯ ಉದ್ಘಾಟನಾ ಕಾರ್ಯಕ್ರಮನ್ನು ಹಮ್ಮಿಕೊಳ್ಳಲಾಗಿತ್ತು.

ಈ ತರಬೇತಿಗೆ, ಡಾ. ಆರ್. ಸಿ ಜಗದೀಶ್, ಡೀನ್ (ಕೃಷಿ), ಕೃಷಿ ಮಹಾವಿದ್ಯಾಲಯ, ನವಿಲೆ, ಶಿವಮೊಗ್ಗ ಇವರು ಉದ್ಘಾಟಕರಾಗಿ ಆಗಮಿಸಿ, ಬೇಕರಿ ಉತ್ಪನ್ನಗಳ ಮಹತ್ವ ಹಾಗೂ ತರಬೇತಿಯ ಉದ್ದೆಶವನ್ನು ವಿವರಿಸಿದರು. ಇಂದಿನ ದಿನನಿತ್ಯದ ಜೀವನದಲ್ಲಿ ಬೇಕರಿ ಉತ್ನನ್ನಗಳ ಪಾತ್ರವೆನು ಮತ್ತು ಬೇಕರಿ ಉತ್ಪನ್ನಗಳಲ್ಲಿ ಸಿರಿಧಾನ್ಯಗಳನ್ನು ಉಪಯೋಗಿಸಿಕಂಡು ಉತ್ತಮ ಆರೋಗ್ಯವನ್ನು ಹೆಗೆ ಪಡೇಯಬಹುದು ಎಂದು ಹೇಳಿ ಶಿಬಿರಾರ್ಥಿಗಳಿಗೆ ತರಬೇತಿಯ ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.


ಡಾ. ಕೆ.ಸಿ. ಶಶಿಧರ ಮುಖ್ಯಸ್ಥರು, ಕೃಷಿ ಇಂಜಿನೀಯರಿಂಗ್ ವಿಭಾಗ, ಕೃಷಿ ಮಹಾವಿದ್ಯಾಲಯ, ನವಿಲೆ, ಶಿವಮೊಗ್ಗ ಇವರು ಅಧ್ಯಕ್ಷತೆ ವಹಿಸಿ, ಬೇಕರಿ ಉದ್ದಿಮೆಯ ಬಗ್ಗೆ ವಿವರಿಸಿ, ಜಂಕ್ ಪುಡ್ ಮತ್ತು ಉತ್ತಮ ಆಹಾರ ಶೈಲಿಯ ಬಗ್ಗೆ ಮಾಹಿತಿಯನ್ನು ನೀಡಿದರು. ಆಹಾರವನ್ನು ತಯಾರಿಸುವ ವಿಧಾನ ಹಾಗೂ ಉಪಯೋಗಿಸುವ ಸಾಮಗ್ರಿಗಳನ್ನು ಆಧರಿಸಿ ಆರೋಗ್ಯಕ್ಕೆ ಉತ್ತಮವಾದ ಆಹಾರವನ್ನು ತಯಾರಿಸುವುದು ಹೇಗೆ ಎಂದು ಮಾಹಿತಿ ನೀಡಿದರು. ಅದೆ ರಿತಿಯಾಗಿ ಈ ಬೇಕರಿ ಹೇಗೆ ಕ್ರಿಯಾಶೀಲವಾಗಿ ಸಣ್ಣ ಉದ್ಯಮದ ಭಾಗವಾಗಿ ಮತ್ತು ಸಣ್ಣ ಪ್ರಮಾಣದಿಂದ ದೊಡ್ಡ ಪ್ರಮಾಣದ ಉದ್ಯಮವನ್ನಾಗಿ ಹೇಗೆ ಪರಿವರ್ತಿಸಬಹುದು ಎಂಬುದರ ಕುರಿತು ಮಾಹಿತಿ ನೀಡಿದರು.


ಡಾ. ಜಯಶ್ರಿ. ಎಸ್, ಸಹ ಪ್ರಾದ್ಯಾಪಕರು, ಆಹಾರ ಮತ್ತು ಪೊಷಣೆ ವಿಭಾಗ ಇವರು ಕಾರ್ಯಕ್ರಮಕ್ಕೆ ಆಗಮಿಸಿದ ಅಥಿತಿಗಳನ್ನು ಸ್ವಾಗತಿಸಿ ತಮ್ಮ ಪ್ರಾಸ್ಥಾವಿಕ ನುಡಿಯಲ್ಲಿ ಬೇಕರಿ ಘಟಕವನ್ನು ಸ್ಥಾಪಿಸಿದ ಉದ್ದೆಶ ಮತ್ತು ಬೇಕರಿ ಉತ್ಪನ್ನಗಳ ಪ್ರಾಮುಖ್ಯತೆಯನ್ನು ತಿಳಿಸಿದರು.


ಡಾ. ಶಿವಲೀಲಾ ಪಾಟೀಲ ತರಬೇತುದಾರರು ಇವರು ಕಾರ್ಯಕ್ರಮವನ್ನು ನೀರೂಪಿಸಿದರು. ತರಬೇತಿಯಲ್ಲಿ ಒಟ್ಟು 12 ಜನ ಶಿಬಿರಾರ್ತಿಗಳು ಭಾಗವಹಿಸಿದ್ದರು ಹಾಗೂ ಅಂತಿಮ ವರ್ಷದ ಬಿ. ಎಸ್ಸಿ (ಕೃಷಿ) ವಿದ್ಯಾರ್ಥಿಗಳು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

error: Content is protected !!