ಶಿವಮೊಗ್ಗ 10: ಸಾಮಾನ್ಯರಂತೆ ಜನಸಿ, ಕೌಟುಂಬಿಕ ಕಷ್ಟ, ನೋವು, ದುಮ್ಮಾನಗಳನ್ನು ಸಹಿಸುಕೊಂಡು ಸಹನೆ ಮತ್ತು ಶಾಂತಿಯ ಮೂಲಕ ಸಮಾಜಕ್ಕೆ ಒಳಿತನ್ನು ನೀಡಿದವರು ಶಿವಶರಣೆ ಮಲ್ಲಮ್ಮ ಎಂದು ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಸಂಘದ ಕಾರ್ಯದರ್ಶಿ ಶಶಿಕುಮಾರ್ ಬಣ್ಣಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಸಮಾಜ, ಶಿವಮೊಗ್ಗ ಘಟಕ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಕುವೆಂಪು ರಂಗಮಂದಿರದಲ್ಲಿ ಇಂದು ಏರ್ಪಡಿಸಲಾಗಿದ್ದ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮವನ್ನು ಅವರ ಭಾವಚಿತ್ರಕ್ಕೆ ಪುಷ್ಪವನ್ನುಅರ್ಪಿಸುವ ಮೂಲಕ ಸರಳವಾಗಿ ಆಚರಿಸಲಾಯಿತು.
ಕಠಿಣವಾದ ತಪಸ್ಸನು ಮಾಡಿ, ಮಲ್ಲಿಕಾರ್ಜುನರ ಮೇಲೆ ಅಗಾಧವಾದ ಭಕ್ತಿಯನ್ನು ಹೊಂದಿದ್ದ ಮಲ್ಲಮ್ಮನವರನ್ನು 598 ವರ್ಷ ಕಳೆದರು ಕೂಡ ಇಂದಿಗೂ ಸ್ಮರಿಸಲು ಕಾರಣ ಅವರ ವಿಚಾರಧಾರೆಗಳು ಮತ್ತು ಚಿಂತನೆಗಳು ಎಂದರು.
ಡಿಸಿ ಕಚೇರಿಯ ತಹಶೀಲ್ದಾರ್ ಚನ್ನಪ್ಪ ಮಾತನಾಡಿ ನಮ್ಮ ನೆಲದಲ್ಲಿ ಅನೇಕ ಶಿವ ಶರಣರು ಜನ್ಮತಾಳಿದ್ದಾರೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರು ನಡೆಯಬೇಕು ಎಂದು ಹೇಳಿದರು.
ಸಮಾಜದ ಅಧ್ಯಕ್ಷ ಎನ್.ಕುಮಾರಸ್ವಾಮಿ ಮಾತನಾಡಿ, ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಅವರ ಜಯಂತಿಯನ್ನು ಮುಂದಿನ ದಿನಗಳಲ್ಲಿ ಅದ್ದೂರಿಯಾಗಿ ಆಚರಿಸುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಹೆಚ್.ಉಮೇಶ್, ಸಮಾಜದ ಮುಖಂಡರು ಸೇರಿದಂತೆ ಹಲವರು ಭಾಗಿಯಾಗಿದ್ದರು.