ಗ್ರಾಮಗಳ ಅಭಿವೃದ್ದಿಯಲ್ಲಿ ಯುವಕರ ಹಾಗೂ ಸ್ವಯಂ ಸೇವಕರ ಪಾತ್ರ ಮಹತ್ವವಾಗಿದೆ. ಗ್ರಾಮ ವಾಸ್ತವ್ಯವು ವಿದ್ಯಾರ್ಥಿಗಳಿಗೆ ಜೀವನದಲ್ಲಿ ಶಿಸ್ತನ್ನು ಅಳವಡಿಸಿಕೊಳ್ಳಲು ಸಹಕಾರಿ” ಎಂದು ಶಿವಮೊಗ್ಗದ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ, ಆರ್ ರವರು ಅಭಿಪ್ರಾಯ ಪಟ್ಟರು. 
 ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರ್ ನ ಆಂಗ ಸಂಸ್ಥೆ  ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗದ ವತಿಯಿಂದ 10 ದಿನಗಳವರೆಗೆ ವೀರಣ್ಣನ ಬೆನವಳ್ಳಿಯಲ್ಲಿ ಹಮ್ಮಿಕೊಳ್ಳಲಾದ 2021-22 ಸಾಲಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು. 
ನಂತರ ಡಾ. ವಿಕ್ರಮ ಅಮಟೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ಇವರು ಮಾತನಾಡಿ, “ನಾನೂ ಸಹ ಪಶು ವೈದ್ಯಕೀಯ ಪದವೀಧರನಾಗಿದ್ದು ಎನ್.ಎಸ್.ಎಸ್ ಶಿಬಿರದಲ್ಲಿ ಕಾಲೇಜು ದಿನಗಳಲ್ಲಿ ಭಾಗವಹಿಸಿದ್ದೆ. ನಾಯಕತ್ವದ ಗುಣಗಳನ್ನು ಪಡೆಯಲು ಈ ರೀತಿಯ ಶಿಬಿರಗಳು ಸಹಕಾರಿ. ಪಶುವೈದರು ಹಾಗೂ ರೈತರ ಒಡನಾಟವು ಪಶುಪಾಲನೆಯ ಕೇಂದ್ರ ಬಿಂದು.” ಎಂದು ಎನ್.ಎಸ್.ಎಸ್ ಗ್ರಾಮ ವಾಸ್ತವ್ಯದ ದಿನಗಳನ್ನು ನೆನಪುಮಾಡಿಕೊಂಡರು. 
ಉದ್ಘಾಟನಾ ಸಮಾರಂಭದಂದು ಉಪಸ್ಥಿತರಿದ್ದ ಪಶು ವೈದ್ಯಕೀಯ ವiಹಾವಿದ್ಯಾಲಯದ ಡೀನ್ ರವರಾದ ಪ್ರೋ.ಎನ್.ಪ್ರಕಾಶ್, ರವರು ಶಿಬಿರದ ರಚನಾತ್ಮಕ ಕಾರ್ಯಕ್ರಮಗಳನ್ನು ವಿವರಿಸಿದರು.
 ಶಿಬಿರದ ಕಾರ್ಯಕ್ರಮಾಧಿಕಾರಿಗಳು ಡಾ.ಧೂಳಪ್ಪ, ಎಂ. ಮತ್ತು ಡಾ.ವೆಂಕಟೇಶ,ಎಂ.ಎಂ., ಸಹ ಶಿಬಿರಾಧಿಕಾರಿಗಳು ಡಾ.ಗಿರಿಧರ್,ಕೆ.ಎಸ್. ಮತ್ತು ಡಾ. ಅರುಣ್, ಎಸ್.ಜೆ. ಹಾಗೂ ಶಿಬಿರದ ಕ್ರೀಡಾಧಿಕಾರಿಗಳು ಡಾ. ಎಸ್. ನಾಗರಾಜ್‍ರವರು ಕಾರ್ಯಕ್ರಮವನ್ನು ಆಯೋಜಿಸಿದ್ದರು. 

ರಚನಾತ್ಮಕ ಕಾರ್ಯಕ್ರಮಗಳಲ್ಲಿ ಪ್ರಮುಖವಾಗಿ, ಸಾಮಾಜಿಕ-ಆರ್ಥಿಕ ಸ್ಥಿತಿಗತಿಗಳ ಬಗ್ಗೆ ಸಮೀಕ್ಷೆ, ಗ್ರಾಮೀಣ ನೈರ್ಮಲಿಕರಣ, ಶ್ರಮದಾನ, ಆರೋಗ್ಯ ತಪಾಸಣೆ, ಕಣ್ಣಿನ ತಪಾಸಣೆ ಮತ್ತು ಸಲಹೆ, ರಕ್ತ ಗುಂಪು ತಪಾಸಣೆ ಮತ್ತು ರಕ್ತದಾನ ಶಿಬಿರ, ಜಾನುವಾರುಗಳ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ, ಕರುಗಳ ಪ್ರದರ್ಶನ, ಮಕ್ಕಳಿಗೆ ರಸಪ್ರಶ್ನೆ, ಯವಕ ಯುವತಿಯರಿಗೆ ಗ್ರಾಮೀಣ ಕ್ರೀಡೆಗಳು, ಪಶುಸಂಗೋಪನೆ, ಕೃಷಿ ಮತ್ತು ತೋಟಗಾರಿಕೆ ಪೂರಕ ಚಟುವಟಿಕೆಗಳು, ಯುವಜನತೆ ಮತ್ತು ಸಾಮಾಜಿಕ ಬದ್ಧತೆ, ಯುವಕರಿಗೆ ಸ್ವಯಂ ಪ್ರೇರಿತ ಕಾರ್ಯಕ್ರಮಗಳಿಗೆ ಪ್ರೇರೇಪಣೆ, ಮಹಿಳೆ ಮತ್ತು ಸ್ವಾವಲಂಬನೆ ಬಗ್ಗೆ ಅರಿವು, ಪ್ರತಿ ದಿನ ತಜ್ಞರಿಂದ ಶಿಕ್ಷಣ ಮತ್ತು ಪರಿಸರ ಸಂರಕ್ಷಣೆಯ ಅರಿವು ಮೂಡಿಸುವ ಕಾರ್ಯಕ್ರಮಗಳ ಜೊತೆಗೆ ಸಮತೋಲನ ಪಶು ಆಹಾರದ ತಯಾರಿಕೆ, ಪ್ರಾತ್ಯಕ್ಷತೆ, ರಸಮೇವು ತಯಾರಿಕೆ ಮತ್ತು ಒಣ ಮೇವಿನ ಪೌಷ್ಟಿಕರಣ, ಹಾಲಿನ ಉತ್ಪನ್ನಗಳ ಮೌಲ್ಯವರ್ಧನೆ, ಪ್ರಾತ್ಯಕ್ಷಿತೆ ಹಾಗೂ ಹಾಲಿನ ಗುಣಮಟ್ಟ ಮತ್ತು ಕಲಬೆರೆಕೆ ಪತ್ತೆ ಹಚ್ಚುವ ವಿಧಾನಗಳ ಪ್ರಾತ್ಯಕ್ಷಿತೆಗಳನ್ನು ಆಯೋಜಿಸಲಾಗಿತ್ತು.
ಶ್ರೀ ಪಿ.ಮಂಜಪ್ಪ, ಸದಸ್ಯರು, ವೀರಣ್ಣನ ಬೆನವಳ್ಳಿ, ಗ್ರಾಮ ಪಂಚಾಯಿತಿ ಆಯನೂರು ಇವರು ಶಿಬಿರದ ಅಧ್ಯಕ್ಷತೆ ವಹಿಸಿದ್ದರು. ಶ್ರೀಮತಿ ಶಕುಂತಲಾ ಮಹೇಶ್ವರಪ್ಪ, ನಿಕಟ ಪೂರ್ವ ತಾ.ಪಂ.ಸದಸ್ಯರು, ಆಯನೂರು ಹಾಗೂ ಊರಿನ ಜನರು ಉಪಸ್ಥಿತಿದ್ದರು. 

error: Content is protected !!