ಇಂದು ಕೇಂದ್ರೀಯ ವಿತ್ತೀಯ ಸಚಿವರಾದ ಸನ್ಮಾನ್ಯ ಶ್ರೀಮತಿ ನಿರ್ಮಲ ಸೀತಾರಾಮನ್ ರವರು ಭಾರತ ದೇಶವು 75ನೇ ವರ್ಷದ ಅಮೃತ ಮಹೋತ್ಸವ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಮುಂದಿನ ಶತಮಾನೋತ್ಸವ ಆಚರಿಸುವ ಸಂದರ್ಭದಲ್ಲಿ ಭಾರತ ದೇಶ ಯಾವ ರೀತಿ ಪ್ರಗತಿ ಹೊಂದಬೇಕೆಂಬ ದೂರದೃಷ್ಟಿಯ ಆಯವ್ಯಯ ಮಂಡಿಸಿದ್ದಾರೆ.
ಭವ್ಯ ಭಾರತ ಕನಸು ಕಂಡ ಪ್ರಧಾನಿ ಶ್ರೀ ನರೇಂದ್ರ ಮೋದೀಜಿಯವರ ನೇತೃತ್ವದ ಕೇಂದ್ರ ಸರ್ಕಾರದ ಈ ವರ್ಷದ ಆಯವ್ಯಯದಲ್ಲಿ ದೇಶದ ಕಟ್ಟ ಕಡೆಯ ವ್ಯಕ್ತಿಗೂ ಸಹ ಅನುಕೂಲ ಕಲ್ಪಿಸುವುದರೊಂದಿಗೆ ದೇಶದ ಜಿ.ಡಿ.ಪಿ. ಪ್ರಮಾಣವನ್ನು 10%ಗೆ ಏರಿಕೆಯಾಗುವ ನಿಟ್ಟಿನಲ್ಲಿ ಸ್ಪಷ್ಟ ಯೋಜನೆಗಳನ್ನು ಘೋಷಿಸಿದ್ದಾರೆ.
ಪಿ.ಎಂ. ಗತಿಶಕ್ತಿ ಯೋಜನೆ, ಎಲ್ಲರನ್ನೂ ಒಳಗೊಂಡ ಸಮಗ್ರ ಅಭಿವೃದ್ಧಿ, ಉತ್ಪಾದನಾ ವಲಯಕ್ಕೆ ವೇಗ ನೀಡಿಕೆ ಹಾಗೂ ಬಂಡವಾಳ ಹೂಡಿಕೆಗೆ ಕ್ರಮ ಈ ರೀತಿಯ 4 ಆಧಾರ ಸ್ತಂಭಗಳಿನ್ನಟ್ಟುಕೊಂಡು 2022ರ ಬಜೆಟ್ ಗೆ ಘೋಷಣೆ ಮಾಡಲಾಗಿದೆ.
ರೈಲ್ವೆ ವಲಯದಲ್ಲಿ ಮುಂದಿನ 3 ವರ್ಷಗಳಲ್ಲಿ 400 ವಂದೇ ಭಾರತ್ ಹೊಸ ರೈಲುಗಳು
25 ಸಾವಿರ ಕಿ.ಮೀ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ದಿ
ಸಾರಿಗೆ ಮೂಲಭೂತ ಸೌಕರ್ಯಕ್ಕೆ 20 ಸಾವಿರ ಕೋಟಿ
2023 ವರ್ಷವನ್ನು ಅಂತರ್ ರಾಷ್ಟ್ರೀಯ ಸಿರಿಧಾನ್ಯ ವರ್ಷವೆಂದು ಘೋಷಣೆ
ರಾಸಾಯನಿಕ ಮುಕ್ತ ನೈಸರ್ಗಿಕ ಕೃಷಿಗೆ ಆದ್ಯತೆ
ಮೂಲಸೌಕರ್ಯ ಅಭಿವೃದ್ಧಿಗೆ 20 ಸಾವಿರ ಕೋಟಿ
ನದಿಗಳ ಜೋಡಣೆ ಯೋಜನೆಯಡಿ ಕಾವೇರಿ – ಪೆನ್ನಾರ್, ಗೋದಾವರಿ – ಕೃಷ್ಣ, ಕೃಷ್ಣ-ಪೆನ್ನಾರ್, ನರ್ಮದಾ-ಗೋದಾವರಿ ನದಿಗಳ ಜೋಡಣೆಗೆ ಸಮ್ಮತಿ
50 ರಿಂದ 60 ಲಕ್ಷ ಉದ್ಯೋಗ ಸೃಷ್ಟಿಗೆ ಕ್ರಮ
ಭೂ ದಾಖಲೆಗಳ ಡಿಜಲೀಕರಣ -ಔಓಇ ಓಂಖಿIಔಓ-ಔಓಇ ಖಇಉISಖಿಖಂಖಿIಔಓ
ವಿಶ್ವದರ್ಜೆಯ ಡಿಜಿಟಲ್ ವಿಶ್ವವಿದ್ಯಾಲಯ ಸ್ಥಾಪನೆ
ಶೈಕ್ಷಣಿಕ ಅಭಿವೃದ್ಧಿಗೆ ಒನ್ ಕ್ಲಾಸ್ ಒನ್ ಚಾನೆಲ್-200 ಚಾನೆಲ್ ಗಳು.
2 ಲಕ್ಷ ಅಂಗನವಾಡಿಗಳು ಅಡಿಯೋ ವೀಡಿಯೋ ವ್ಯವಸ್ಥೆಯೊಂದಿಗೆ ಮೇಲ್ದರ್ಜೆಗೆರಿಸುವುದು.
ಹರ್ ಘರ್ ನಲ್ ಜಲ್ ಯೋಜನೆ- ಪ್ರತಿ ಮನೆಗೆ ನಲ್ಲಿ ನೀರು 60 ಸಾವಿರ ಕೋಟಿ ಮೀಸಲು
ಪಿ.ಎಂ.ಆವಾಸ್ ಯೋಜನೆಗೆ 48 ಸಾವಿರ ಕೋಟಿ-80 ಲಕ್ಷ ಮನೆಗಳ ನಿರ್ಮಾಣದ ಗುರಿ.
75 ಜಿಲ್ಲೆಗಳಲ್ಲಿ 75 ಡಿಜಿಟಲ್ ಬ್ಯಾಂಕ್ ಗಳ ಸ್ಥಾಪನೆ.
ಪೋಸ್ಟ್ ಆಫೀಸ್ ಗಳನ್ನು ಬ್ಯಾಂಕ್ ವ್ಯವಸ್ಥೆಗೆ ಜೋಡಣೆ.(ಅoಡಿe ಃಚಿಟಿಞiಟಿg Sಥಿsಣem)
ಹೊಸ ತಂತ್ರಜ್ಞಾನದೊಂದಿಗೆ ಇ-ಪಾಸ್ ಪೋರ್ಟ್ ಜಾರಿ
ಎಲೆಕ್ಟ್ರಿಕ್ ವಾಹನಗಳಿಗೆ ಒತ್ತು – ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿ ಬದಲಾವಣೆ ಕೇಂದ್ರ ಸ್ಥಾಪನೆ
8 ಭಾಷೆಗಳಲ್ಲಿ ಏಕರೂಪ ಒನ್ ನೇಷನ್ – ಒನ್ ರಿಜಿಸ್ಟ್ರೇಷನ್ ಆಸ್ತಿ ನೋಂದಣಿ ಯೋಜನೆ
5ಜಿ ತರಂಗಾಂತರ ಪ್ರಾರಂಭ.
ದೇಶದ ಪ್ರತಿ ಹಳ್ಳಿಗೆ ಆಪ್ಟಿಕಲ್ ಫೈಬರ್
ಡಿ.ಆರ್.ಡಿ.ಒ. ಜೊತೆ ಖಾಸಗಿ ಕಂಪನಿಗಳ ಸಹಭಾಗಿತ್ವ-ರಕ್ಷಣಾ ಇಲಾಖೆಯಲ್ಲಿ ಶೇ.68ರಷ್ಟು ಸ್ಥಳೀಯವಾಗಿ/ ದೇಶಿಯವಾಗಿ ಖರೀದಿ
1400 ಕೋಟಿ ವೆಚ್ಚದಲ್ಲಿ ಸೋಲಾರ್ ಪ್ರಾಜೆಕ್ಟ್ ಗೆ ಆದ್ಯತೆ
ಉಧ್ಯಮ ಸರಳೀಕರಣಕ್ಕೆ ಏಕ ಗವಾಕ್ಷಿ ಯೋಜನೆ
ಸಹಕಾರಿ ಸಂಘಗಳ ಮೇಲಿನ ಸರ್ ಚಾರ್ಜ್ 12 ರಿಂದ 7% ಗೆ ಇಳಿಕೆ..
ಕರ್ನಾಟಕದ ನಿಮಾನ್ಸ್ ಆಸ್ಪತ್ರೆ ಮೇಲ್ದರ್ಜೆಗೇರಿಕೆ.
ವಿತ್ತ ಮಂತ್ರಿ ಶ್ರೀಮತಿ ನಿರ್ಮಲ ಸೀತಾರಾಮನ್ ರವರು ಬಡ್ಜೆಟ್ ಭಾಷಣವನ್ನು ಟ್ಯಾಬ್ ಮೂಲಕ ಮಂಡಿಸುವುದರೊಂದಿಗೆ, ಕಾಗದ ರಹಿತ ವ್ಯವಸ್ಥೆಗೆ ಮುನ್ನುಡಿ ಇಟ್ಟು ಡಿಜಿಟಲಿಕರಣದ ಮಹತ್ವ ಸಾರಿದ್ದಾರೆ.
ಕಳೆದ ಎರಡು ವರ್ಷಗಳಿಂದ ಕೋವಿಡ್ ಸಂಕಷ್ಟದಿಂದಾಗಿ ನಲುಗಿದ ಆರ್ಥಿಕತೆಗೆ ಬಲ ನೀಡುವ ಎಲ್ಲಾ ರೀತಿಯ ಕ್ರಮಗಳನ್ನು ವಿತ್ತ ಮಂತ್ರಿಗಳು ಕೈಗೊಂಡಿದ್ದಾರೆ.
ಇದಕ್ಕಾಗಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದೀಜಿಯವರು ಮತ್ತು ಕೇಂದ್ರ ಅರ್ಥ ಮಂತ್ರಿ ಶ್ರೀಮತಿ ನಿರ್ಮಲ ಸೀತಾರಾಮನ್ ರವರಿಗೆ ಜನತೆಯ ಪ್ರವಾಗಿ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸ ಬಯಸುತ್ತೇನೆ.ಎಂದರು