ಕಾರ್ಡಿಸೆಪ್ ಮಿಲಿಟರಿಸ್
- ಕಾರ್ಡಿಸೆಪ್ ಮಿಲಿಟರಿಸ್ ಅಣಬೆಯ ಸಂಪೂರ್ಣ ಮಾಹಿತಿ
ಇದರ ಪೂರ್ಣ ಹೆಸರು ಕಾರ್ಡಿಸೆಪ್ ಮಿಲಿಟರಿಸ್… ಇದು ಮೂಲತಹ ಹಿಮಾಲಯದ ಕೆಲವು ಭಾಗಗಳಲ್ಲಿ ಸತತವಾಗಿ ಬೆಳೆಯುತ್ತದೆ. ಇದೊಂದು ಶಿಲೀಂದ್ರಗಳ ಪ್ರಕಾರ. ಇದಕ್ಕೆ ಸಾವಿರಾರು ವರ್ಷದ ಔಷಧೀಯ ಗುಣಧರ್ಮಗಳ ಇತಿಹಾಸವಿದೆ. ಇದನ್ನು ಪ್ರಯೋಗಾಲಯಗಳಲ್ಲಿ ನಿರ್ದಿಷ್ಟವಾದ ವಾತಾವರಣದಲ್ಲಿ ಪೂರ್ಣ ಸಸ್ಯಹಾರಿ ವಿಧಾನಗಳಿಂದ ಬೆಳೆಯಬಹುದು.
- ಇದು ಮುಖ್ಯವಾಗಿ ಯಾವ ಯಾವ ರೋಗಗಳಿಗೆ ಮತ್ತು ಚಿಕಿತ್ಸೆಗಳಿಗೆ ಉಪಯೋಗಿಸಲ್ಪಡುತ್ತದೆ?
ಇದೊಂದು ಔಷಧೀಯ ಗುಣಧರ್ಮ ಗಳಿರುವ ಉತ್ಕೃಷ್ಟ ಆಹಾರ ಪೂರಕ. ಇದು ಅನೇಕ ರೋಗಗಳಿಗೆ ಸಂಜೀವಿನಿಯಾಗಿ ಉಪಯೋಗಿಸಲ್ಪಡುತ್ತಿದೆ. ಮುಖ್ಯವಾಗಿ ಡಯಾಬಿಟಿಸ್, ಕೊಲೆಸ್ಟ್ರಾಲ್, ವಿಟಮಿನ್ ಡಿ ಕೊರತೆ, ಶ್ವಾಸಕೋಶದ ಕಾಯಿಲೆಗಳು, ಕುಂಠಿತ ಲೈಂಗಿಕ ಕ್ರಿಯಾಶೀಲತೆ ಮುಂತಾದವುಗಳ ಚಿಕಿತ್ಸೆಗಾಗಿ ಉಪಯೋಗಿಸಬಹುದು. ಇದಲ್ಲದೆ ಕಿಡ್ನಿ ರೋಗಗಳು ಕ್ಯಾನ್ಸರ್ ಟ್ಯೂಮರ್ ಚಿಕಿತ್ಸೆ ಗಳಿಗೂ ಉಪಯೋಗಕಾರಿ. ಇದು ದೇಹದಲ್ಲಿ ಉತ್ಕೃಷ್ಟ ನಿರೋಧಕ ಶಕ್ತಿಯನ್ನು ಉತ್ಪತ್ತಿಮಾಡಿ ರೋಗನಿರೋಧಕತೆಯನ್ನು ವೃದ್ಧಿಸುತ್ತದೆ.
- ಇದರಲ್ಲಿ ಇರುವ ಮುಖ್ಯವಾದ ಅಂಶಗಳು ಯಾವವು?
ಇದರಲ್ಲಿ ಅನೇಕ ನ್ಯೂಕ್ಲಿಯೋಸೈಡ್ ಗಳು, ಅಮೈನೋ ಆಮ್ಲಗಳು ಮತ್ತು ಉಪಯುಕ್ತ ಪ್ರೋಟೀನ್ ಗಳು ಅಡಕವಾಗಿವೆ. ಮುಖ್ಯ ಧಾತುವಾದ ಕಾರ್ಡಿಸೇಪಿನ್ ಅಥವಾ 3-ಡಿಆಕ್ಸಿ ಅಡಿನೋಸಿನ್ ಇದು ಅತ್ಯಂತ ಪರಿಣಾಮಕಾರಿ. ಇದರ ಜೊತೆಗೆ ಇನ್ನೊಂದು ಧಾತುವಾದ ಆಡಿನೋ ಸಿನ್ ಸ್ನಾಯು ವರ್ಧನೆ ಯನ್ನು ಹೆಚ್ಚಿಸುತ್ತದೆ.
ಮತ್ತೊಂದು ಧಾತುವಾದ ಕಾರ್ಡಿಸಿಪಿಕ್ ಆಸಿಡ್ ಶ್ವಾಸಕೋಶಗಳ ಪುನಶ್ಚೇತನಕ್ಕೆ ತುಂಬಾ ನೆರವಾಗುತ್ತದೆ.
- ಈಗ ಬಂದಿರುವ ಮಹಾಮಾರಿ ಕರೋನ ಕ್ಕ ಇದು ಏನಾದರೂ ಉಪಯೋಗವಾಗುತ್ತ?
2013ರಲ್ಲಿ ಕರೋನಾದ ಮೊದಲ ಪ್ರಕಾರವಾದ ಸಾರ್ಸ್ ಕಾಯಿಲೆಯು ಬಂದಿತ್ತು. ಪ್ರಯೋಗಾಲಯಗಳಲ್ಲಿ ಇಲಿಗಳು ಮತ್ತು ಮನುಷ್ಯನ ಶ್ವಾಸಕೋಶದ ಅಂಗಾಂಶಗಳ ಮೇಲೆ ಈ ಕಾಯಿಲೆಗಾಗಿ ಕಾರ್ಡಿಸೆಪ್ ಚಿಕಿತ್ಸೆ ಮಾಡಲಾಯಿತು. ಇದು ತುಂಬಾ ಫಲಕಾರಿ ಫಲಿತಾಂಶ ನೀಡಿತು. ಕರೋನಾ-ಪೂರ್ವ ಪ್ರತಿರೋಧ ಶಕ್ತಿಯನ್ನು ವೃದ್ಧಿಸಲು ಇದು ತುಂಬಾ ಪರಿಣಾಮಕಾರಿಯಾಗಿದೆ. ಇಲ್ಲಿಯವರೆಗೆ ನಮ್ಮ ಕಾರ್ಡಿಸೆಪ್ ತೆಗೆದುಕೊಳ್ಳುತ್ತಿರುವ ಗ್ರಾಹಕರಿಗೆ ಯಾರಿಗೂ ಕರೋನ ಬಂದಿಲ್ಲ.
- ಇದರ ಮೇಲೆ ಯಾವುದಾದರೂ ಸಂಶೋಧನೆಗಳು ಮತ್ತು ವೈದ್ಯಕೀಯ ಪ್ರಯೋಗಗಳು ನಡೆದಿದೆಯಾ?
ಜಗತ್ತಿನಾದ್ಯಂತ ಪ್ರಖ್ಯಾತ ವಿಶ್ವವಿದ್ಯಾಲಯಗಳು ಮತ್ತು ಪ್ರಯೋಗಾಲಯಗಳಲ್ಲಿ ಇದರ ಮೇಲೆ ಅನೇಕ ಸಂಶೋಧನೆಗಳು ನಡೆದಿದ್ದು ಇದರ ಪೂರ್ಣ ಔಷಧೀಯ ಗುಣಧರ್ಮಗಳು ಸಾಬೀತಾಗಿದೆ. ಪ್ರಾಣಿ ಮತ್ತು ಮನುಷ್ಯರ ಮೇಲು ಪ್ರಯೋಗಗಳು ನಡೆದಿವೆ.
- ಇದರ ಬಗ್ಗೆ ನಮಗೆ ಜಾಗತಿಕವಾಗಿ ಮತ್ತು ವೈಜ್ಞಾನಿಕವಾಗಿ ಮಾಹಿತಿ ಸಿಗುತ್ತಾ?
ಅಂತರ್ಜಾಲದಲ್ಲಿ ನೀವು ಸಾವಿರಾರು ಅನ್ವೇಷಣಾ ಲೇಖನಗಳು ಮತ್ತು ಸಾಕ್ಷ್ಯಚಿತ್ರಗಳನ್ನು ನೋಡಬಹುದು. ಇವುಗಳಲ್ಲಿ ಕಾರ್ಡಿಸೆಪ್ ನ ವೈಜ್ಞಾನಿಕವಾಗಿ ಅಣು ಪರಮಾಣು ಹಂತದ ವಿಶ್ಲೇಷಣೆಯನ್ನು ನೋಡಬಹುದು.
- ಇದನ್ನ ಯಾರೆಲ್ಲಾ ಸೇವಿಸಬಹುದು?
ಮುಖ್ಯವಾಗಿ ಹತ್ತು ವರ್ಷದ ಕೆಳಗಿನ ಮಕ್ಕಳು ಮತ್ತು ಗರ್ಭಿಣಿಯರು ಬಿಟ್ಟರೆ ಎಲ್ಲರೂ ಸೇವಿಸಬಹುದು. ಇದನ್ನು ಒಳ್ಳೆಯ ರೋಗಪ್ರತಿರೋಧವುಳ್ಳ ಆರೋಗ್ಯಕ್ಕಾಗಿ ಸಾಮಾನ್ಯ ಜನರು ಸೇವಿಸಬಹುದು. ಡಯಾಬಿಟಿಸ್, ಕೊಲೆಸ್ಟರಾಲ್, ವಿಟಮಿನ್ ಡಿ ಮುಂತಾದ ಕಾಯಿಲೆಗಳಿಂದ ಬಳಲುತ್ತಿರುವವರು ಉಪಯೋಗಿಸಬಹುದು. ಕಿಡ್ನಿ ಹೃದಯ ಕಾಯಿಲೆ ಮತ್ತು ಕ್ಯಾನ್ಸರ್ನಂತಹ ಕಾಯಿಲೆ ಪೀಡಿತರು ವೈದ್ಯರ ಸಲಹೆ ಪಡೆದು ಉಪಯೋಗಿಸಬಹುದು.
- ನಿಮ್ಮ ಈ ಪ್ರಾಡಕ್ಟ್ ನಲ್ಲಿ ಕಾರ್ಡಿಸೆಪ್ ಹೊರತಾಗಿ ಬೇರೆ ಏನಾದರೂ ಬೆರೆಸಲ್ಪಟ್ಟಿದಯಾ?
ಇದು ನಿಸರ್ಗದತ್ತ ಸ್ವಾಭಾವಿಕ ರೂಪದಲ್ಲಿ ಬೆಳೆಯುವ ಆಹಾರ ಪೂರಕ. ಇದರಲ್ಲಿ ಬೇರೆ ಏನು ನಾವು ಬೆರೆಸುವುದಿಲ್ಲ.
- ಇದು ಮಧುಮೇಹ ರೋಗಿಗಳಿಗೆ ಹೇಗೆ ಉಪಯೋಗಕಾರಿಯಾಗಿದೆ?
ಕಾರ್ಡಿಸೆಪ್ ಇನ್ಸುಲಿನ್ ನನ್ನು ಮಿಮಿಕ್ ಮಾಡುತ್ತದೆ. ಟೈಪ್ 2 ಡಯಾಬಿಟೀಸ್ ನವರಿಗೆ ಇದು ಪ್ಯಾಂಕ್ರಿಯಸ್ ಪುನಶ್ಚೇತನಗೊಳಿಸಲು ಸಹಾಯ ಮಾಡುತ್ತದೆ. ಟೈಪ್ 1 ಡಯಾಬಿಟೀಸ್ ನವರಿಗೆ ದೇಹದಲ್ಲಿನ ಇನ್ಸುಲಿನ್ ಪ್ರತಿರೋಧವನ್ನು ಕಡಿಮೆ ಮಾಡುತ್ತದೆ. ಇದರಿಂದ ಮಧುಮೇಹ ಉಳ್ಳವರು ತುಂಬಾ ಉಪಯೋಗ ಪಡೆಯುತ್ತಿದ್ದಾರೆ.
- ಇದು ಗ್ಯಾಂಗ್ರಿನ್ ನಂತಹ ಕಾಯಿಲೆಗಳಿಗೆ ಹೇಗೆ ಚಿಕಿತ್ಸಾ ದಾಯಕವಾಗಿದೆ?
ನಾವು ಎರಡು ಪ್ರಕರಣಗಳಲ್ಲಿ, ಮಧುಮೇಹದಿಂದಾದ ಗ್ಯಾಂಗ್ರೀನ್ ರೋಗಿಗಳಿಗೆ ಕಾರ್ಡಿಸೆಪ್ ಕೊಡಲಾಗಿ ಗಣನೀಯ ಪ್ರಮಾಣದಲ್ಲಿ ಚೇತರಿಕೆ ಕಂಡುಬಂದಿದೆ. ಇದು ಖಂಡಿತವಾಗಿ ಗ್ಯಾಂಗ್ರಿನ್ ಚಿಕಿತ್ಸೆಗೆ ಉಪಯೋಗಿಸಲ್ಪಡುತ್ತದೆ.
- ಕಿಡ್ನಿ ರೋಗಗಳಿಂದ ಬಳಲುತ್ತಿರುವ ರೋಗಿಗಳಿಗೆ ಇದರಿಂದ ಅನುಕೂಲವಾಗುತ್ತಾ?
ಇದರಲ್ಲಿನ ಕಾರ್ಡಿಸೆಪಿನ್ ಧಾತು ಕಿಡ್ನಿಯಲ್ಲಿರುವ ಜಿಂಗ್ ಎನರ್ಜಿಯನ್ನು ಉತ್ತೇಜಿಸಿ ಕಿಡ್ನಿಯ ಜೀವಕೋಶಗಳನ್ನು ಪುನಶ್ಚೇತನಗೊಳಿಸುತ್ತದೆ. ಈಗ ನಮ್ಮ ಗ್ರಾಹಕರಲ್ಲಿ ಕೆಲವು ಕಿಡ್ನಿ ರೋಗದಿಂದ ಬಳಲುತ್ತಿರುವವರು ಕಾರ್ಡಿಸೆಪ್ ಬಳಸುತ್ತಿದ್ದು, ಅವರ ಕ್ರಿಯಾಟಿನಿನ್ ಪ್ರಮಾಣ ಗಣನೀಯವಾಗಿ ಕೆಳಗಿಳಿದಿದೆ.
- ವಿಟಮಿನ್ ಡಿ ಹೆಚ್ಚಿಸುವುದಕ್ಕೆ ಇದು ಏನಾದರೂ ಪ್ರಯೋಜನಕಾರಿಯಾಗಿದೆಯಾ?
ಸಾಮಾನ್ಯವಾಗಿ ಅಣಬೆಗಳು ವಿಟಮಿನ್-ಡಿ ಪೂರಕವಾಗಿರುತ್ತವೆ. ಈ ನಮ್ಮ ಕಾರ್ಡಿಸೆಪ್ ವಿಟಮಿನ್ ಡಿ ಹೆಚ್ಚಿಸುವುದಕ್ಕೆ ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.
- ಇದು ಸ್ನಾಯು ಶಕ್ತಿವರ್ಧನೆಗೆ ಹೇಗೆ ಕೆಲಸ ಮಾಡುತ್ತದೆ?
ಆಡಿನೋಸಿನ್ ನಮ್ಮ ದೇಹದ ಜೀವಕೋಶಗಳಲ್ಲಿ ಶಕ್ತಿ ಉತ್ಪಾದನೆಗೆ ತುಂಬಾ ಅವಶ್ಯಕ. ಕಾರ್ಡಿಸೆಪ್ ನಲ್ಲೆ ಆಡಿನೋಸಿನ್ ಪ್ರಮುಖವಾಗಿರುವ ಅಂಶ. ಆದ್ದರಿಂದ ಸ್ನಾಯ ವರ್ಧನೆಗೆ ಇದು ತುಂಬಾ ಪರಿಣಾಮಕಾರಿ. ಕಸರತ್ತು ಮತ್ತು ವ್ಯಾಯಾಮ ಮಾಡುವವರು ಇದನ್ನು ಸೇವಿಸಿದರೆ ಅವರ ವ್ಯಾಯಾಮ ಮತ್ತಷ್ಟು ಪರಿಣಾಮಕಾರಿಯಾಗುವುದು.
- ಇದು ಲೈಂಗಿಕ ಶಕ್ತಿ ವರ್ಧನೆಗೆ ಉಪಯೋಗವಾಗುತ್ತದೆ ಎಂದು ಕೇಳಿದ್ದೇವೆ ಅದರ ಬಗ್ಗೆ ವಿವರಿಸುತ್ತೀರಾ?
ಇದನ್ನು ಹಿಮಾಲಯದ ವಯಾಗ್ರ ಎಂದೇ ಕರೆಯುತ್ತಾರೆ. ಕಾರ್ಡಿಸೆಪಿನ್ ಗಂಡಸರಲ್ಲಿರುವ ಟೆಸ್ಟೋಸ್ಟಿರಾನ್ ಹಾರ್ಮೋನ್ ನನ್ನು ಉತ್ತೇಜಿಸುತ್ತದೆ. ಇದರಿಂದ ಲೈಂಗಿಕ ಕ್ರಿಯಾಶೀಲತೆ ಯಾವುದೇ ಸೈಡ್ ಎಫೆಕ್ಟ್ ಇಲ್ಲದೆ ಸುಧಾರಿಸುತ್ತದೆ. ವೀರ್ಯಾಣುಗಳ ಕ್ಷಮತೆ ಮತ್ತು ಕಾರ್ಯಶೀಲತೆ ಉತ್ತೇಜನಗೊಳ್ಳುತ್ತದೆ.
- ಅಸ್ತಮಾದಂತಹ ಶ್ವಾಸಕೋಶದ ಕಾಯಿಲೆಗಳಿಗೆ ಇದು ಉಪಯೋಗಕಾರಿಯಾಗಿದೆಯಾ?
ಇದರಲ್ಲಿನ ಕಾರ್ಡಿಸೇಪಿಕ್ ಆಸಿಡ್ ಶ್ವಾಸಕೋಶಗಳ ಪುನಶ್ಚೇತನಕ್ಕೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಎಷ್ಟೋ ಅಸ್ತಮಾ ಮತ್ತು ಶ್ವಾಸಕೋಶದ ಸಮಸ್ಯೆಯಿದ್ದವರು ಗಣನೀಯ ಲಾಭ ಪಡೆದುಕೊಂಡಿದ್ದಾರೆ.
- ಇದನ್ನು ಬೆಳೆಯುವುದರಲ್ಲಿ ಕೀಟ ಮತ್ತು ಯಾವುದಾದರೂ ಪ್ರಾಣಿ ಪಶುಗಳನ್ನು ಉಪಯೋಗಿಸುತ್ತಾರಾ?
ನಾವು ಪ್ರಯೋಗಾಲಯದಲ್ಲಿ ಪ್ರಮುಖವಾಗಿ ಅಕ್ಕಿಯ ಮೇಲೆ ಇದನ್ನು ಬೆಳೆಸಲಾಗುತ್ತದೆ. ಇದಕ್ಕೆ ಬಳಸುವ ಅನ್ಯ ಪೋಷಕಾಂಶಗಳು ಎಲ್ಲವೂ ಸಸ್ಯಹಾರಿಗಳು.
- ಇದು ಬೆಳೆಯಬೇಕಾದರೆ ಯಾವುದಾದರೂ ರಸಾಯನಿಕಗಳನ್ನು ಬಳಸುತ್ತೀರಾ?
ಇಲ್ಲಿ ನಾವು ಯಾವುದೇ ಹಾನಿಕಾರಕ ರಾಸಾಯನಿಕಗಳನ್ನು ಬಳಸುವುದಿಲ್ಲ. ಪ್ರೊಟೀನ್ ಮತ್ತು ವಿಟಮಿನ್ ಗಳಂಥ ಪೌಷ್ಟಿಕಾಂಶಗಳ ವಸ್ತುಗಳನ್ನು ಮಾತ್ರ ಬಳಸುತ್ತೇವೆ.
- ಇದನ್ನ ಪ್ರಯೋಗಾಲಯದಲ್ಲಿ ಹೇಗೆ ಬೆಳೆಸುತ್ತಿರಿ?
ನಾವು ಪ್ರಯೋಗಾಲಯದಲ್ಲಿ ಸ್ಪಾನ್ ಎಂದರೆ ದ್ರವರೂಪದ ಬೀಜಅಂಶಗಳನ್ನು ತಯಾರು ಮಾಡಿಕೊಳ್ಳುತ್ತೇವೆ. ಆಮೇಲೆ ಅಕ್ಕಿ ಮತ್ತು ಪೋಷಕಾಂಶಗಳ ಮಿಶ್ರಣದ ಮೇಲೆ ಬೀಜವನ್ನು ಬಿತ್ತುತ್ತೇವೆ. ಹೀಗೆ ತಯಾರು ಮಾಡಿದ ಡಬ್ಬಿಗಳನ್ನು ನಿರ್ದಿಷ್ಟವಾದ ಉಷ್ಣತೆ, ಆರ್ದ್ರತೆ ಬೆಳಕು ಮತ್ತು ಆಮ್ಲಜನಕ ಗಳ ನಿಯಂತ್ರಣ ಹೊಂದಿರುವ ಪ್ರಯೋಗಾಲಯದ ಕೊಠಡಿಯಲ್ಲಿ 65 ದಿನ ಬೆಳೆಸುತ್ತೇವೆ. ಆಮೇಲೆ ಬಂದ ಬೆಳೆಯನ್ನು ಕಟಾವು ಮಾಡಿ ಒಣಗಿಸುತ್ತೇವೆ.
- ಇದನ್ನು ಯಾವ ಮಾತ್ರದಲ್ಲಿ ಮತ್ತು ಹೇಗೆ ಉಪಯೋಗಿಸಬಹುದು?
ಸಾಮಾನ್ಯವಾಗಿ ಒಬ್ಬ ವಯಸ್ಕ ವ್ಯಕ್ತಿಯ ದಿನಕ್ಕೆ ಒಂದು ಗ್ರಾಂ ಸೇವಿಸಿದರೆ ಸಾಕು. ಬೇಕಾದರೆ 6 ಗ್ರಾಂ ವರೆಗೂ ಸಹ ಸೇವಿಸಬಹುದು. ಇದು ಒಣಗಿಸಿದ ಪುಡಿ ಅಥವಾ ರೂಪದಲ್ಲಿ 1 ಗ್ರಾಂ ಸ್ಯಾಚೆಟ್ ಗಳಲ್ಲಿ ದೊರೆಯುತ್ತದೆ. 70 ಡಿಗ್ರಿ ನಷ್ಟು ಬಿಸಿಯಾಗಿರುವ ಒಂದು ಲೋಟ ನೀರಿನಲ್ಲಿ 1 ಸಾಕೆಟ್ ಮಿಶ್ರಣ ಮಾಡಿ ಸುಮಾರು ಮೂರರಿಂದ ಐದು ನಿಮಿಷ ಕಾಯಬೇಕು. ನೀರು ಕೇಸರಿ ಬಣ್ಣಕ್ಕೆ ತಿರುಗುತ್ತದೆ. ಆಮೇಲೆ ಇದನ್ನು ಚಹಾ ಕುಡಿದ ಹಾಗೆ ಕುಡಿಯಬೇಕು.
- ಇದರ ರುಚಿ ಹೇಗಿರುತ್ತೆ?
ಕೆಲವು ಜನ ಕಾರ್ಡಿಸೆಪ್ ನ ರುಚಿಯನ್ನು ತುಂಬಾ ಇಷ್ಟಪಡುತ್ತಾರೆ. ಇದಕ್ಕೆ ಏನು ಬೆರೆಸದೆ ಸೇವಿಸುತ್ತಾರೆ. ಕೆಲವರು ಇದರ ಜೊತೆ ಸ್ವಲ್ಪ ಶುಂಠಿ ಅಥವಾ ನಿಂಬೆ ಹಣ್ಣಿನ ರಸವನ್ನು ಸೇರಿಸಿ ಕುಡಿಯುತ್ತಾರೆ.
- ಇದು ಸ್ವಲ್ಪ ಜಾಸ್ತಿ ಬೆಲೆ ಇರುವ ಆಹಾರ ಪೂರಕ. ಇದು ಯಾಕೆ?
ಇದು ಕೊಡುತ್ತಿರುವ ಮಹತ್ವದ ಆರೋಗ್ಯದ ಲಾಭಾಂಶಗಳ ಮುಂದೆ ಇದರ ಬೆಲೆ ದೊಡ್ಡದಲ್ಲ. ಇದನ್ನು ಬೆಳೆಯುವುದು ತುಂಬಾ ಕ್ಲಿಷ್ಟಕರ. ತುಂಬಾ ಖರ್ಚುದಾಯಕ. ಒಂದು ಪ್ರಯೋಗಾಲಯದಲ್ಲಿ ತಿಂಗಳಿಗೆ ಸುಮಾರು ಮೂರರಿಂದ ಐದು ಕೆಜಿ ಮಾತ್ರ ಬೆಳೆಯುತ್ತದೆ. ಆದ್ದರಿಂದ ಇದರ ಬೆಲೆ ಜಾಸ್ತಿ ಅನ್ನಿಸಬಹುದು.
- ಇದನ್ನು ಔಷಧಿ ಎಂದು ಪರಿಗಣಿಸಬಹುದಾ?
ಇದು ಔಷಧೀಯ ಗುಣವುಳ್ಳ ನೈಸರ್ಗಿಕವಾಗಿ ಬೆಳೆದ ಆಹಾರ ಪೂರಕ. ಚೀನಾ ದೇಶದಲ್ಲಿ ಇದನ್ನು ಅಧಿಕೃತವಾಗಿ ಔಷಧಿಯ ರೂಪದಲ್ಲಿ ಬಳಸುತ್ತಾರೆ.
- ಇದನ್ನು ಯಾರು ಯಾರು ಸೇವಿಸಬಾರದು?
ಗರ್ಭಿಣಿ ಸ್ತ್ರೀಯರು, ಹತ್ತುವರ್ಷದ ಕೆಳಗಿರುವ ಮಕ್ಕಳು ಮತ್ತು ಆಟೋ ಇಮ್ಯೂನ್ ರೋಗ ಉಳ್ಳವರು ಇದನ್ನು ಸೇವಿಸಬಾರದು.
ಹೃದಯ ಕಾಯಿಲೆ ಉಳ್ಳವರು, ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡವರು, ಬ್ಲಡ್ ಥಿನಿಂಗ್ ಔಷಧಿ ತೆಗೆದುಕೊಳ್ಳುವವರು ಮತ್ತು ಪಾಲಿಸಿಸ್ಟಿಕ್ ಕಿಡ್ನಿ ರೋಗವುಳ್ಳವರು ವೈದ್ಯರ ಸಲಹೆ ಪಡೆದು ಇದನ್ನು ಸೇವಿಸಬೇಕು.
- ಇದನ್ನು ಒಣಗಿಸಿದ ನಂತರ ಎಷ್ಟು ದಿನಗಳವರೆಗೆ ಶೇಖರಿಸಿಡಬಹುದು?
ಇದರ ಶೆಲ್ಫ್ ಲೈಫ್ ಒಣಗಿಸಿದ ನಂತರ ಸುಮಾರು ಒಂದುವರೆ ವರ್ಷ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಜೆಬಿಯು ಮಶ್ರೂಮ್ಸ್
2ನೇ ಮಹಡಿ
ಶ್ರೀ ರೇಣುಕಾಂಬ ಕಾಂಪ್ಲೆಕ್ಸ್
ಬಾಳೆಬೈಲು, ತೀರ್ಥಹಳ್ಳಿ ತಾಲೂಕು.
ಶಿವಮೊಗ್ಗ ಜಿಲ್ಲೆ.
ಮೊಬೈಲ್ ಸಂಖ್ಯೆ: 99729 95267