ಭಾರತ ಸರ್ಕಾರ ಜಲಾಶಯಗಳನ್ನು ನಿರ್ಮಾಣ ಮಾಡುವ ಸಂದರ್ಭಗಳಲ್ಲಿ ಅದರ ದಂಡೆಗಳ ಮೇಲೆ ಉದ್ಯಾನವನಗಳನ್ನು ನಿರ್ಮಿಸಿ ಪ್ರವಾಸೋದ್ಯಮದ ಅಭಿವೃದ್ಧಿಗೂ ಚಿಂತನೆ ನಡೆಸಿದೆ. ಕರ್ನಾಟಕದಲ್ಲಿಯೂ ಇಂತಹ ಅನೇಕ ನೀತಿ ತಿಳಿಸುವ (ಥೀಮ್ ಪಾರ್ಕ್)
ಗಳನ್ನು ನಿರ್ಮಾಣ ಮಾಡಲಾಗಿದೆ.
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಅಂಜನಾಪುರ ಜಲಾಶಯದ ಮೇಲ್ಭಾಗದಲ್ಲಿ ನೀರಾವರಿ ಇಲಾಖೆಯು ಥೀಮ್ ಪಾರ್ಕ್ ನಿರ್ಮಿಸಿದೆ. ಆರು ಎಕರೆ 34 ಗುಂಟೆ ವಿಸ್ತೀರ್ಣದಲ್ಲಿ ಈ ಉದ್ಯಾನವನ ನಿರ್ಮಾಣವಾಗಿದ್ದು, ಕುಮುದ್ವತಿ ನದಿಗೆ ಅಡ್ಡಲಾಗಿ ಸೇತುವೆ ಕಟ್ಟಿ ಜಲಾಶಯ ನಿರ್ಮಾಣ ಮಾಡಲಾಗಿದ್ದು, 2018ರಲ್ಲಿ 6 ಕೋಟಿ ರೂ. ವೆಚ್ಚದಲ್ಲಿ ಥೀಮ್ ಪಾರ್ಕ್ ನಿರ್ಮಿಸಲಾಗಿದೆ.
ಅಂಜನಾಪುರ ಉದ್ಯಾನವನ ಸುಂದರ ಕಾರಂಜಿಗಳಿಂದ ಕೂಡಿದೆ. ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಅಂದೋಲನದ ಶಿಕಾರಿಪುರ ತಾಲೂಕಿನ ಈಸೂರಿನ ಸ್ವಾತಂತ್ರ್ಯ ಹೋರಾಟದ ಕಥನಗಳನ್ನು ತಿಳಿಸುವ ಪ್ರತಿಮೆಗಳು ಅನಾವರಣಗೊಂಡಿದೆ. ಜಾನಪದ ವಾದ್ಯಗಳ ದಂಡು, ಅನ್ನದಾತನ ಬದುಕಿನ ವಿವಿಧ ಮಜಲುಗಳು, ಕೃಷಿ ಸಂಬಂಧಿ ಚಟುವಟಿಕೆಗಳು ಇಲ್ಲಿ ಅನಾವರಣಗೊಂಡಿವೆ.
ಸ್ವಾತಂತ್ರ್ಯ ಬಂದು 75 ವರ್ಷ ಆಗುತ್ತಿರುವ ಸಂದರ್ಭದಲ್ಲಿ ಉದ್ಯಾನವನಕ್ಕೆ ಮತ್ತಷ್ಟು ಮಹತ್ವ ಹೆಚ್ಚಿದೆ. ದೂರದ ಊರುಗಳಿಂದ ಈಸೂರು ಸ್ವಾತಂತ್ರ್ಯ ಹೋರಾಟದ ಕಥನಗಳನ್ನು ತಿಳಿದುಕೊಳ್ಳಲು ಸಾರ್ವಜನಿಕರು ವಿದ್ಯಾರ್ಥಿಗಳು ಆಗಮಿಸುತ್ತಿದ್ದಾರೆ.
ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಶಿಕಾರಿಪುರದ ಅಂಜನಾಪುರ ಡ್ಯಾಂ ಎದುರು ಸುಂದರವಾದ ಉದ್ಯಾನವನ ನಿರ್ಮಾಣಕ್ಕೆ ಕಾರಣರಾಗಿದ್ದಾರೆ.
ಕಲಂದರ್, ಸ್ಥಳೀಯ ನಿವಾಸಿ ಮಾತನಾಡಿ ಅಂಜನಾಪುರದಲ್ಲಿ ನಿರ್ಮಾಣವಾಗಿರುವ ಉದ್ಯಾನವನ ಹಲವು ವಿಶೇಷತೆಗಳಿಂದ ಕೂಡಿದೆ. ಜಲಾಶಯದ ಮೇಲ್ಭಾಗದಲ್ಲಿರುವ ಉದ್ಯಾನವನ ನಮ್ಮ ಪ್ರದೇಶದ ಸ್ವಾತಂತ್ರ್ಯ ಹೋರಾಟದ ಸಂದರ್ಭಗಳನ್ನು ನೆನಪಿಸುವ ಕಲಾಕೃತಿಗಳನ್ನು ಒಳಗೊಂಡಿದೆ.ಎಂದು ತಿಳಿಸಿದರು
ಮಂಜುನಾಥ್, ಸಹಾಯಕ ಕಾರ್ಯಪಾಲಕ ಅಭಿಯಂತರ ನೀರಾವರಿ ಇಲಾಖೆ, ಶಿಕಾರಿಪುರ ಮಾತನಾಡಿ ಸುಮಾರು ಆರು ಕೋಟಿ ರೂ. ವೆಚ್ಚದಲ್ಲಿ ಉದ್ಯಾನವನ ನಿರ್ಮಾಣ ಮಾಡಲಾಗಿದೆ. ಅಂಜನಾಪುರ ಜಲಾಶಯ ಅನ್ನದಾತರ ಜಮೀನುಗಳಿಗೆ ನೀರುಣಿಸುತ್ತದೆ. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಶಿಕಾರಿಪುರದಲ್ಲಿ ನಡೆದ ಘಟನೆಗಳನ್ನು ನೆನಪಿಸುವ ಕಲಾಕೃತಿಗಳನ್ನು ಮಾಡಲಾಗಿದೆ.
ಶಿವಪ್ಪ, ಮತ್ತಿಘಟ್ಟ ಪ್ರತಿಕ್ರಿಯೆ ವ್ಯಕ್ತಪಡಿಸಿ ಪ್ರತಿ ದಿನ ಉದ್ಯಾನವನ ನೋಡಲು ಸಾವಿರಾರು ಸಂಖ್ಯೆಯಲ್ಲಿ ಜನರು ಬರುತ್ತಾರೆ. ಇಲ್ಲಿಯ ಸುಂದರ ಪರಿಸರ ಜನರನ್ನು ಆಕರ್ಷಿಸುವುದಲ್ಲದೇ ಜನರಿಗೆ ಸ್ವಾತಂತ್ರ್ಯ ಹೋರಾಟದ ಅರಿವು ಮತ್ತು ತಿಳವಳಿಕೆ ನೀಡುವ ಕಲಾಕೃತಿಗಳನ್ನು ಅನಾವರಣಗೊಂಡಿವೆ.
ನಾಗರಾಜ್, ಇಂಜಿನಿಯರ್ ಮಾತನಾಡಿ ಉದ್ಯಾನವನವನ್ನು ನೋಡಲು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ಉಚಿತ ಪ್ರವೇಶವಿದ್ದು, ಜನರಿಗೆ ಮುಕ್ತವಾಗಿ ತಿಳವಳಿಕೆ ನೀಡಲಾಗುತ್ತಿದೆ. ವಿಶೇಷ ಕಾರ್ಯಕ್ರಮಗಳು ಇಲ್ಲಿ ನಡೆಯುತ್ತಿವೆ.ಎಂದರು
ಪ್ರಕಾಶ್ ನಾಯಕ್ ಅಂಜನಾಪುರ ಮಾತನಾಡಿ ಉದ್ಯಾನವನದಲ್ಲಿ ಈಸೂರು ದಂಗೆ ಪರಿಚಯಿಸುವ ವಿಶೇಷ ಚಿತ್ರಣಗಳಿವೆ. ಸರ್ಕಾರ ಉತ್ತಮ ಉದ್ಯಾನವನ್ನು ನಿರ್ಮಿಸಿದ್ದು, ಇದರ ಅಭಿವೃದ್ಧಿಗೆ ಇನ್ನಷ್ಟು ಸಹಕಾರ ನೀಡಬೇಕು ಎಂದರು.