ಪಶ್ಚಿಮ ಘಟ್ಟದ ಶ್ರೇಣಿಯಲ್ಲಿ ಕಾಣಸಿಗುವ ಉಭಯವಾಸಿ ಜೀವಿಗಳಲ್ಲಿ ಕಪ್ಪೆ ತನ್ನ ಜೀವನ ಕ್ರಮದಿಂದಲೇ ಎಲ್ಲರ ಗಮನ ಸೆಳೆಯುತ್ತಿದೆ ಜಿಟಿಜಿಟಿ ಮಳೆಗೆ ಅಂಗಳದಲ್ಲಿ ಕಪ್ಪೆಗಳ ಸಾಲುಸಾಲು ಕಾಣುತ್ತಿದ್ದವು ಈಗ ಅವೆಲ್ಲ ಮಾಯವಾಗುತ್ತದೆ ಉಳಿಸಿಕೊಳ್ಳಬೇಕು ಎನ್ನುವ ಆಲೋಚನೆ ಪದ ವನ್ಯಜೀವಿ ಇಲಾಖೆ ಕಾರ್ಗಲ್ ವಲಯ ಜೊತೆಗೂಡಿ ಮನೆಯ ಕನ್ನಡದಲ್ಲಿ ಕಪ್ಪೆ ಹಬ್ಬವನ್ನು ಡಿಸೆಂಬರ್ 18 ಮತ್ತು 19ರಂದು ಕಾರ್ಯಕ್ರಮಕ್ಕೆ ಅರಣ್ಯ ಇಲಾಖೆಯ ಪ್ರಧಾನ ಮುಖ್ಯ ಅರಣ್ಯ ರಕ್ಷಣಾಧಿಕಾರಿ ಮತ್ತು ಅರಣ್ಯ ಪಡೆ ಮುಖ್ಯಸ್ಥ ಸಂಜಯ್ ಮೋಹನ್ ಚಾಲನೆ ನೀಡಿದರು ಕಪ್ಪೆಯ ಮಹತ್ವವನ್ನು ಕುರಿತು ಮಾಹಿತಿ ಮತ್ತು ತಂತ್ರಜ್ಞಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ರೀತು ಕಕ್ಕರ್ ಮಾಹಿತಿ ನೀಡಿದರು .
ಕಪ್ಪೆಗಳ ಚಿತ್ರಗಳು ಸಾಕ್ಷಿ ಚಿತ್ರಗಳು ಪುಸ್ತಕ ಪ್ರದರ್ಶನ ಕಾಡಿನಲ್ಲಿ ಕಪ್ಪೆ ಮತ್ತು ಚಿಟ್ಟೆಗಳ ಮಾರ್ಗಗಳ ಮಾಹಿತಿ ಅಧ್ಯಾನ ಎರಡು ದಿನಗಳ ಕಾಲ ನಡೆಯಿತು ರಾಜ್ಯದ ವಿವಿಧೆಡೆಗಳಿಂದ ಪರಿಸರ ಆಸಕ್ತರು ತಜ್ಞರು ಅರಣ್ಯ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.
ನಾಗರಾಜ್ dfo ವನ್ಯಜೀವಿ ವಿಭಾಗ ಶಿವಮೊಗ್ಗ
ಪಶ್ಚಿಮಘಟ್ಟದ ಶ್ರೇಣಿಗಳಲ್ಲಿ ಕಾಣಸಿಗುವ ಕಪ್ಪೆ ಅಪರೂಪದ ಉಭಯವಾಸಿ ಇದರ ಬಗ್ಗೆ ಅಧ್ಯಯನ ನಡೆಯಬೇಕಾದ ಅವಶ್ಯಕತೆ ಇದೆ ನಮ್ಮ ಇಲಾಖೆಯ ವತಿಯಿಂದ ಪಶ್ಚಿಮಘಟ್ಟದ ಪತಂಗ ವಿವಿಧ ಹಾವುಗಳು ಕಪ್ಪೆ ಕೀಟಗಳ ಬಗ್ಗೆ ಜನರ ಸಹಕಾರವನ್ನು ಪಡೆದು ಅಧ್ಯಾನ ನಡೆಸುವ ಚಿಂತನೆ ನಡೆಯುತ್ತಿದೆ .
ಚಂದ್ರಕಾಂತ್ ನಾಯಕ್ , ಉಪ ವಲಯ ಅರಣ್ಯ ಅಧಿಕಾರಿ ಹುಲಿ ಸಂರಕ್ಷಣಾ ಕೇಂದ್ರ ಕರಾವಳಿ ತೀರದಲ್ಲಿ ಗುರುತಿಸಿದ ಕಪ್ಪೆಗಳಿವೆ ಅವುಗಳ ಬಗ್ಗೆ ಅಧ್ಯಯನ ನಡೆಸುವ ಕೆಲಸ ಮಾಡುತ್ತಿದ್ದೇವೆ ನಾನು ಕಂಡುಹಿಡಿದ ಕರಾವಳಿಯ ಚಿಮ್ಮುವ ಕಪ್ಪೆಯ ಕುರಿತು ವಿಶೇಷ ಅಧ್ಯಯನ ನಡೆದಿದೆ .
ಗೋಪಾಲ ಕೃಷ್ಣ ಹೆಗಡೆ , ಕಪ್ಪೆ ತಜ್ಞ ಮಳೆಗಾಲ ಆರಂಭದಲ್ಲಿ ಕಪ್ಪೆಗಳು ಹೆಚ್ಚು ಕಾಣಸಿಗುತ್ತದೆ ಇತ್ತೀಚಿನ ದಿನಗಳಲ್ಲಿ ಅದನ್ನು ಕಳ್ಳ ಮಾರಾಟ ಮಾಡುವ ಪ್ರಕರಣಗಳು ಕಂಡು ಬರುತ್ತದೆ ಅರಣ್ಯ ಇಲಾಖೆಯ ಜೊತೆ ಕೈಜೋಡಿಸಿ ಈ ಜೀವಿಗಳನ್ನು ಉಳಿಸಿಕೊಳ್ಳಬೇಕಾದ ಅವಶ್ಯಕತೆ ಇದೆ
ಶಶಿ ಸಂಪಳ್ಳಿ ಪರಿಸರ ಬರಹಗಾರರು ಅರಣ್ಯ ಇಲಾಖೆ ಇದೇ ಮೊದಲ ಬಾರಿಗೆ ಕಪ್ಪೆ ಹಬ್ಬ ಆಚರಿಸಿ ಸಕಲ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಉಪಯುಕ್ತ ಕೆಲಸ ಮಾಡುತ್ತಿದೆ ಇದು ನಿರಂತರವಾಗಿ ನಡೆಯಬೇಕು ..
ವನ್ಯಜೀವಿ ಸಂಶೋಧಕ ಕಾರ್ತಿಕ್ ಯಾವುದೇ ಪ್ರಭೇದ ಹೆಚ್ಚು ಕಾಣಿಸಿಕೊಂಡಾಗ ಅದನ್ನುತಾತ್ಸರ ಕಣ್ಣುಗಳಿಂದ ನೋಡುತ್ತೇವೆ ಕಪ್ಪೆ ಸಂಶೋಧನೆ ಮತ್ತು ಅಧ್ಯಯನಕ್ಕೆ ಸವಾಲು ನೀಡುತ್ತಿರುವ ಜೀವಿಯಾಗಿದೆ ಶಿಬಿರಗಳ ಮೂಲಕ ಅದನ್ನು ತಿಳಿದುಕೊಳ್ಳುವ ಅವಶ್ಯಕತೆ ಇದೆ.
ಆಧುನಿಕ ತಂತ್ರಜ್ಞಾನವನ್ನು ಬಳಸಿ ಕಪ್ಪೆಯ ಧ್ವನಿ ಜೀವನ ಕ್ರಮ ಮತ್ತು ಪಶ್ಚಿಮಘಟ್ಟದ ವೈವಿಧ್ಯತೆಯನ್ನು ದಾಖಲಿಸುವ ಕುರಿತು ತಜ್ಞರಾದ ಡಾ ಕೆ.ವಿ ಗುರುರಾಜ್ ತಂಡ ಶಿಬಿರಾರ್ಥಿಗಳಿಗೆ ಮಾಹಿತಿ ನೀಡಿದರು .