ಇಂದು ನಡೆದ ಚುನಾವಣೆಯ ಮತ ಎಣಿಕೆಯಲ್ಲಿ ಶಿವಮೊಗ್ಗ ವಿಧಾನ ಪರಿಷತ್ ಡಿ.ಎಸ್.ಅರುಣ್ 350 ಕ್ಕೂ ಅಧಿಕ ಮತಗಳಿಂದ ಜಯಶೀಲರಾಗಿದ್ದಾರೆ.
ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಮತಣಿಕೆ ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ರವರ ನೇತೃತ್ವದಲ್ಲಿ ಶಾಂತಿಯುತವಾಗಿ ನಡೆಯಿತು.
ಡಿ.ಎಸ್.ಅರುಣ್ ವಿಜೇತ ಅಭ್ಯರ್ಥಿ ಮಾತನಾಡಿ
ನನ್ನ ಗೆಲವು ಪಕ್ಷದ ಗೆಲುವಾಗಿದೆ.ಮಾಜಿ ಮುಖ್ಯಮಂತ್ತಿ ಬಿ.ಎಸ್ ಯಡಿಯೂರಪ್ಪ ಕೆ.ಎಸ್. ಈಶ್ವರಪ್ಪ. ಸಂಸದ ಬಿ.ವೈ.ರಾಘವೇಂದ್ರ ಅವರ ಮತ ಪ್ರಚಾರ ಗೆಲವಿಗೆ ಬೆನ್ನಲುಬಾಯಿತು
ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು