ಶಿವಮೊಗ್ಗ. ಮಾರ್ಚ್-01 ನಿಷ್ಠೆಯಿಂದ ಕಾಯಕದಲ್ಲಿ ತೊಡಗಿದವರು ಜನರ ಪ್ರೀತಿ ಮತ್ತು ವಿಶ್ವಾಸವನ್ನು ಗಳಿಸುತ್ತಾರೆ ಅವರಿಗೆ ಅದೆ ದೊಡ್ಡ ಸನ್ಮಾನವಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಕೆ.ಎ ದಯಾನಂದ್ ಹೇಳಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಇಂದು ಆಯೋಜಿಸಿದ್ದ ‘ಕಾರ್ಮಿಕ ಸಮ್ಮಾನ ದಿನಾಚರಣೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ವಿವಿಧ ಕಾಯಕದಲ್ಲಿ ನಿರತರಾದ ಹಿರಿಯ ಕಾರ್ಮಿಕರನ್ನು ‘ಕಾಯಕ ಸಮ್ಮಾನ್ ಹಾಗೂ ಗೌರವ ಪ್ರಶಸ್ತಿ’ ನೀಡಿ ಸನ್ಮಾನಿಸಿ ಮಾತನಾಡಿದ ಅವರು ಎಲ್ಲಾ ವೃತ್ತಿಗಳು ಸಮಾನವಾದದ್ದು ಯಾವುದು ಮೇಲು ಕೀಳೆಂದು ಪರಿಗಣಿಸಬಾರದು ಯಾರು ತಮ್ಮ ಕೆಲಸದಲ್ಲಿ ನಿಷ್ಠೆ ತೋರುವುದಿಲ್ಲವೋ ಆತ ನಿಜವಾದ ಕೆಳ ಮಟ್ಟದವನು ಎಂದು ಅವರು ಹೇಳಿದರು.
ಜನರು ಆಡಂಬರದ ಜನರನ್ನು ಗೌರವದಿಂದ ನೋಡುತ್ತಾರೆ ಆದರೆ ಶ್ರಮಿಕರನ್ನು ಗೌರವದಿಂದ ಕಾಣುವುದಿಲ್ಲ ನಿಜವಾದ ದೊಡ್ಡವರು ಶ್ರಮಿಕರು ಅವರಿಗೆ ಗೌರವ ಸಿಗುವಂತಾಗಬೇಕು ಜನರ ಮನಸ್ಥಿತಿ ಬದಲಾಗಬೇಕು ಜಗತ್ತಿನ ಮಹಾನ್ ವ್ಯಕ್ತಿಗಳೆಲ್ಲ ಪ್ರತಿಪಾದಿಸಿದ್ದು ಇದನ್ನೆ ಎಂದು ಅವರು ಹೇಳಿದರು.
ದಿನದ ಆರಂಭದಲ್ಲಿ ದೇವರ ನಂತರ ಜನ ನೆನಪಿಸುವುದು ಶ್ರಮಿಕ ವರ್ಗದವರನ್ನು, ಅವರಿಲ್ಲದೆ ಜಗತ್ತಿನ ಯಾವ ಅಭಿವೃದ್ಧಿಯು ಸಾಧ್ಯವಿಲ್ಲ. ಕಾರ್ಮಿಕರು ಒಂದು ಕಟ್ಟಡದ ಆಧಾರ ಸ್ತಂಭಗಳಿದ್ದಂತೆ ಅವರನ್ನು ಸರ್ಕಾರ ಇದೇ ಮೊದಲ ಬಾರಿಗೆ ಸನ್ಮಾನಿಸುತ್ತಿದೆ ಇದು ಕೇವಲ ಅವರ ಸನ್ಮಾನವಲ್ಲ ನಮ್ಮನ್ನು ನಾವು ಎತ್ತರದ ಸ್ಥಾನಕ್ಕೆರಿಸಿಕೊಂಡಂತಹ ಸಮಯ ಎಂದು ಅವರು ಅಭಿಪ್ರಾಯಪಟ್ಟರು.
ಜಿಲ್ಲಾ ಕಾರ್ಮಿಕಾಧಿಕಾರಿ ಎಂ.ಪಿ ವಿಶ್ವನಾಥ್ ಮಾತನಾಡಿ ಕಾರ್ಮಿಕ ಇಲಾಖೆಯಲ್ಲಿ ಹೆಸರು ನೊಂದಾಯಿಸಿಕೊಂಡಂತಹ ಕಾರ್ಮಿಕರಿಗೆ ವಿವಿಧ ಸವಲತ್ತುಗಳಿದ್ದು ಅದನ್ನು ಪಡೆದುಕೊಳ್ಳಲು ಜನ ಮುಂದೆ ಬರಬೇಕು ಎಂದು ಕರೆಕೊಟ್ಟರು.
ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ವಿದ್ಯಾರ್ಥಿ ವೇತನ, ಕಾರ್ಮಿಕರ ಮಕ್ಕಳ ಮದುವೆಗೆ ಸಹಾಯ ಧನ, ಕಾರ್ಮಿಕರಿಗೆ ಹೆಣ್ಣು ಮಗು ಜನಿಸಿದರೆ 30ಸಾವಿರ ಹಾಗೂ ಗಂಡು ಮಗು ಜನಿಸಿದರೆ 20ಸಾವಿರ ರೂಗಳನ್ನ ನೀಡಲಾಗುತ್ತದೆ ಜೊತೆಗೆ 60 ವರ್ಷ ಮೇಲ್ಪಟ್ಟವರಿಗೆ ಪಿಂಚಣಿ ಸೌಲಭ್ಯ, ಅಪಘಾತ ವಿಮೆ, ಅಪಘಾತದಲ್ಲಿ ಮೃತರಿಗೆ ಐದು ಲಕ್ಷ ಪರಿಹಾರ ಧನ ಇನ್ನಿತರ ಸೌಲಭ್ಯಗಳಿವೆ ಇವನ್ನು ಕಾರ್ಮಿಕರು ಬಳಸಿಕೊಳ್ಳಬೇಕು ಎಂದು ಅವರು ಹೇಳಿದರು.

error: Content is protected !!