ಪ್ರತಿವರ್ಷ ಸಸ್ಯ ತಳಿಗಳ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಪ್ರಾಧಿಕಾರ, ಭಾರತ ಸರ್ಕಾರ – ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ ನವದೆಹಲಿಯಿಂದ ಪುರಾತನ ನಾಟಿ, ದೇಸಿ ಸಸ್ಯ ತಳಿ ಸಂಪನ್ಮೂಲಗಳ ಸಂರಕ್ಷಣೆ, ಸುಧಾರಣೆ ಮತ್ತು ಹೊಸ ತಳಿ ಅಭಿವೃದ್ಧಿಯಲ್ಲಿ ಗಣನೀಯ ಕೊಡುಗೆಗಳನ್ನು ನೀಡಿದ ರೈತರನ್ನು ಗುರುತಿಸಿ ರಾಷ್ಟ್ರೀಯ ವಂಶವಾಹಿನಿ ನಿಧಿಯಿಂದ ಪುರಸ್ಕರಿಸುತ್ತಿದೆ.  ಪ್ರಾಧಿಕಾರವು 2007 ರಿಂದ ಸಸ್ಯ ಸಂಪನ್ಮೂಲಗಳ ಸಂರಕ್ಷಕಾ ಸಮೂದಾಯ ಪ್ರಶಸ್ತಿಯನ್ನು ಕೊಡಮಾಡಲಾಗುತ್ತಿದ್ದು, ಇದು ಹತ್ತು ಲಕ್ಷ ರೂಪಾಯಿನೊಳಗೊಂಡ ಗರಿಷ್ಠ 5 ಪ್ರಶಸ್ತಿಗಳನ್ನು ಒಳಗೊಂಡಿದೆ. ಇದಲ್ಲದೆ 2012-13 ರಿಂದ ಸಸ್ಯತಳಿ ಸಂರಕ್ಷಣೆಯಲ್ಲಿ ತೊಡಗಿಕೊಂಡಿರುವ ರೈತರನ್ನು ಗುರುತಿಸಿ ಸಸ್ಯ ಸಂರಕ್ಷಣಾ ರೈತ ಪ್ರಶಸ್ತಿಯನ್ನು  ತಲಾ ಒಂದುವರೆ ಲಕ್ಷ ರೂಪಾಯಿಯಂತೆ ಗರಿಷ್ಠ 10 ರೈತರಿಗೆ ಮತ್ತು ಸಸ್ಯ ತಳಿ ಸಂರಕ್ಷಣಾ ರೈತ ಪುರಸ್ಕಾರವನ್ನು ತಲಾ ಒಂದು ಲಕ್ಷ ರೂಪಾಯಿಯಂತೆ ಗರಿಷ್ಠ 20 ರೈತರಿಗೆ ನೀಡಿ ಪುರಸ್ಕರಿಸುತ್ತಿದೆ. 
2018-2019 ಮತ್ತು 2019-2020ನೇ ಸಾಲಿಗೆ ಸಂಬಂದಿಸಿದಂತೆ, ಕರ್ನಾಟಕ ರಾಜ್ಯದ ಸಾಗರದ ಪ್ರಕಾಶ್ ರಾವ್ ಮಂಚಾಲೆ, ಚಿತ್ರದುರ್ಗದ ಕೆ.ಟಿ ವೇದಮೂರ್ತಿ, ಚಿಕ್ಕೊಡಿಯ ಶಿವನಗೌಡ ಪಾಟೀಲ್, ಕೊಡಗಿನ ಪೂನಚ ಬೀದರ್‍ನ ಮೊಹಮದ್ ಇದ್ರಿಸ್ ಅಹಮದ್ ಕ್ವಾದ್ರಿ ಮತ್ತು ಮಂಡ್ಯದ ಬೊರೇಗೌಡರು ಸೇರಿದಂತೆ ಒಟ್ಟು ಏಳು ರೈತರು ಸಸ್ಯ ಸಂರಕ್ಷಣಾ ರೈತ ಪ್ರಶಸ್ತಿ ಮತ್ತು ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ. ಇದಲ್ಲದೆ ಹಾಸನದ ಭೂಮಿ ಸುಸ್ತಿರ ಅಭಿವೃದ್ಧಿ ಸಂಸ್ಥೆಯು ಸಸ್ಯ ಸಂಪನ್ಮೂಲಗಳ ಸಂರಕ್ಷಣ ಸಮೂದಾಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರಶಸ್ತಿ ಪ್ರಾಧಾನ ಸಮಾರಂಬವು 11-11-2021ರಂದು ನವದೆಹಲಿಯಲ್ಲಿ ನಡೆಯಲಿದ್ದು, ಶ್ರೀ ನರೇಂದ್ರ ಸಿಂಗ್ ತೋಮರ್, ಕೇಂದ್ರ ಕೃಷಿ ಸಚಿವರು, ಸುಶ್ರೀ ಶೋಭ ಕರಂದ್ಲಾಜೆ, ರಾಜ್ಯ ಕೃಷಿ ಸಚಿವರು, ಕೃಷಿ ಖಾತೆ ಮತ್ತು ಶ್ರೀ ಸಂಜೀವ್ ಅಗರ್‍ವಾಲ್, ಕಾರ್ಯದರ್ಶಿ, ಭಾರತ ಸರ್ಕಾರ – ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ ಇವರು ಪ್ರಶಸ್ತಿ ಪ್ರಧಾನ ಮಾಡುವರು.  

ಸಸ್ಯ ತಳಿಗಳ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಪ್ರಾಧಿಕಾರದ, ವಿಭಾಗೀಯ ಕಛೇರಿ, ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗ ಆವರಣದಲ್ಲಿ 2017ರಿಂದ ಕಾರ್ಯನಿರ್ವಹಿಸುತಿದ್ದು ಇದರ ಕಾರ್ಯವ್ಯಪ್ತಿಯಲ್ಲಿ  ಬರುವ ರಾಜ್ಯಗಳಲ್ಲಿ ಸಸ್ಯ ತಳಿಗಳಿಗಳ ನೋಂದಣಿ, ಅದರ ಜಾಗೃತಿ ಮತ್ತು ದೇಸಿ ಸಸ್ಯ ತಳಿಗಳ ಸಂರಕ್ಷಣೆ, ಸುಧಾರಣೆ ಮತ್ತು ಹೊಸ ತಳಿ ಅಭಿವೃದ್ಧಿಯಲ್ಲಿ ತೊಡಗಿಕೊಂಡಿರುವ ರೈತರನ್ನು ಹುರಿದುಂಬಿಸುವ ಕಾರ್ಯ ಮಹತ್ತರದ್ದಾಗಿದೆ. 
ಡಾ. ಟಿ.ಹೆಚ್.ಗೌಡ, ಮುಖ್ಯಸ್ಥರು ಹಾಗೂ ಉಪನೋಂದಣಿ ಅಧಿಕಾರಿ, ಸಸ್ಯ ತಳಿಗಳ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಪ್ರಾಧಿಕಾರ (PPV&FR Authority), ವಿಭಾಗೀಯ ಕಛೇರಿ, ಶಿವಮೊಗ್ಗ ಮತ್ತು ಡಾ. ಎಮ್.ಕೆ ನಾಯ್ಕ್, ಕುಲಪತಿಗಳು, ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗ ರಾಷ್ಟ್ರಮಟ್ಟದ ಅತ್ಯನ್ನತ ರೈತ ಪ್ರಶಸಿ ್ತಪಡೆದ ರೈತರಿಗೆ ಶುಭ ಹಾರೈಸುತ್ತಾ, ಇವರ ಸಾಧನೆ ಹಲವು ರೈತರಿಗೆ ಪ್ರೇರಣೆಯಾಗಿ ಕೃಷಿ ಅಭಿವೃದ್ಧಿಗೆ ಪೂರಕವಾಗಲಿಯೆಂದು ಹರ್ಷವೆಕ್ತಪಡಿಸಿದ್ದಾರೆ.

error: Content is protected !!