ಶಿವಮೊಗ್ಗ, ನವೆಂಬರ್ 08 : ಕೇಂದ್ರ ಸರ್ಕಾರದಿಂದ ಪ್ರತಿವರ್ಷ ಜೀವ ವೈವಿಧ್ಯತೆ ಮತ್ತು ತಳಿ ಸಂರಕ್ಷಣೆ ಮಾಡಿದ ಹತ್ತು ಸಾಧಕ ರೈತರಿಗೆ ಕೊಡಮಾಡುವ ಅತ್ಯುನ್ನತ ರಾಷ್ಟ್ರೀಯ ಗೌರವ ಜಿನೋಮ್ ಸೇವಿಯರ್ ಪ್ರಶಸ್ತಿಗೆ ಆಯ್ಕೆಯಾಗಿರುವ ಜಿಲ್ಲೆಯ ಸಾಗರ ತಾಲೂಕಿನ ಮಂಚಾಲೆ ಗ್ರಾಮದ ಪ್ರಕಾಶ್ ಮಂಚಾಲೆರವರಿಗೆ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿಯು ಶ್ಲಾಘಿಸಿದೆ.
ಶ್ರೀಯುತರು ಸಣ್ಣ ಹಿಡುವಳಿ ಕೃಷಿಯಲ್ಲಿ ವಿಶಿಷ್ಠ ಸಾಧನೆ ಮಾಡಿ ಸಾವಯವ ಪದ್ಧತಿಯಲ್ಲಿ ಔಷಧೀಯ ಸಸ್ಯಗಳೂ ಸೇರಿದಂತೆ ಅಳುವಿನಂಚಿನ ಅನೇಕ ಗಿಡಮೂಲಿಕೆಗಳನ್ನು ಸಂರಕ್ಷಿಸಿ ಬೆಳೆಸಿರುವುದನ್ನು ಪರಿಗಣಿಸಿ “ಕೇಂದ್ರದ ತಳಿ ಸಂರಕ್ಷಣೆ ಮತ್ತು ರೈತರ ಹಕ್ಕು ಪ್ರಾಧಿಕಾರದ ಪ್ರತಿಷ್ಠಿತ ಜಿನೋಮ್ ಸೇವಿಯರ್ ಪ್ರಶಸ್ತಿಗೆ ಆಯ್ಕೆಯಾಗಿರುತ್ತಾರೆ.
ಇವರಿಗೆ ಅಭಿನಂದನೆ ಸಲ್ಲಿಸುತ್ತಾ ಈ ಅಪರೂಪದ ಸಸ್ಯಗಳ ಸಂರಕ್ಷಣೆ ಸಂವರ್ಧನೆಯ ಕಾರ್ಯವು ಇತರ ಕೃಷಿಕರಿಗೂ ಮಾದರಿಯಾಗಲಿ ಎಂಬುದಾಗಿ ಮಂಡಳಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ ಹಾರೈಸಿದ್ದಾರೆ