ಶಿವಮೊಗ್ಗ, ಸೆಪ್ಟೆಂಬರ್ 20 : ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ವತಿಯಿಂದ 2021-22 ನೇ ಸಾಲಿಗೆ ಅಮೃತಧಾರೆ ಯೋಜನೆಯಡಿ ಇಲಾಖೆಯ ಜಾನುವಾರು ಕ್ಷೇತ್ರಗಳಲ್ಲಿ ಹುಟ್ಟುವ ಗಂಡು ಕರು/ಬೀಜದ ಹೋರಿಗಳನ್ನು ರೈತರಿಗೆ ವಿತರಿಸಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಆಸಕ್ತ ರೈತರು ಕಡ್ಡಾಯವಾಗಿ ಫ್ರೂಟ್ಸ್ ಐ.ಡಿ ನಲ್ಲಿ ನೋಂದಯಿತರಾಗಿರಬೇಕು. ಆಯ್ಕೆಯನ್ನು ಸಂಬಂಧಿಸಿದ ಆಯಾ ವಿಧಾನಸಭಾ ಕ್ಷೇತ್ರದ ಶಾಸಕರ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿಯಿಂದ ಮಾಡಲಾಗುವುದು. ರೈತರಿಗೆ ಇಲಾಖೆಯಿಂದ ನಿಗದಿಪಡಿಸುವ ಮಾರಾಟ ಬೆಲೆಯಂತೆ ಷರತ್ತು ಮತ್ತು ನಿಬಂಧನೆಗಳೊಂದಿಗೆ ವಿತರಣೆ ಮಾಡಲಾಗುವುದು. ಆಯ್ಕೆಯಾದ ಫಲಾನುಭವಿಯು ಪಡೆದ ಗಂಡು ಕರುಗಳನ್ನು ಕನಿಷ್ಟ ಎರಡು ವರ್ಷಗಳ ಅವಧಿಯವರೆಗೆ ಸಂತಾನೋತ್ಪತ್ತಿಗಾಗಿ ಉಪಯೋಗಿಸಕ್ಕದ್ದು ಹಾಗೂ ಈ ಬಗ್ಗೆ ಮುಚ್ಚಳಿಕೆಯನ್ನು ಬರೆದುಕೊಡಬೇಕು.