News Next

ಶಿವಮೊಗ್ಗ, ಸೆಪ್ಟಂಬರ್ 16 : ಕೇಂದ್ರ ಸರ್ಕಾರವು ಧೈರ್ಯ ಮತ್ತು ಸಾಹಸ ಪ್ರದರ್ಶಿಸಿದ 6 ರಿಂದ 18 ವರ್ಷದೊಳಗಿನ ಬಾಲಕರಿಗೆ ಮತ್ತು ಬಾಲಕಿಯರಿಗೆ ರಾಷ್ಟ್ರ ಮಟ್ಟದ ಶೌರ್ಯ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಿದೆ
2020ರ ಜುಲೈಯಿಂದ 2021ರ ಸೆಪ್ಟಂಬರ್ ಅವಧಿಯಲ್ಲಿ ಧೈರ್ಯ ಮತ್ತು ಸಾಹಸ ಮಾಡಿದ ಮಕ್ಕಳು ಪ್ರಶಸ್ತಿಗಾಗಿ ನಿಗಧಿಪಡಿಸಿರುವ ಅರ್ಜಿ ನಮೂನೆಗಳನ್ನು ನಗರದ ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಛೇರಿಯಿಂದ ಪಡೆದು, ಭರ್ತಿ ಮಾಡಿದ ಅರ್ಜಿಗಳನ್ನು ದಿ:15/10/2021 ರೊಳಗೆ “The General Secretary, Karnataka State Council for Child Welfare, No. 135, 3rd Cross, Nandidurga Road, Jayamahal Extension, Bangalore-560046 “. (Email: ksccwblr@gmail.com) ಈ ವಿಳಾಸಕ್ಕೆ ಕಳುಹಿಸತಕ್ಕದ್ದು.
ಅರ್ಜಿಯೊಂದಿಗೆ ಶೌರ್ಯ ಸಾಧನೆ ಬಗ್ಗೆ 250 ಪದಗಳು ಮೀರದ ವರದಿ, ಶೌರ್ಯ ಸಾಧನ ತೋರಿದ ಬಗ್ಗೆ ಆರಕ್ಷಕ ಇಲಾಖೆಯ ಪ್ರಾಥಮಿಕ ತನಿಖಾ ವರದಿ, ಜನನ ಪ್ರಮಾಣ ಪತ್ರ, ಧೈರ್ಯ ಸಾಹಸದ ಪ್ರದರ್ಶನದ ಬಗ್ಗೆ ಪತ್ರಿಕಾ ಪ್ರಕಟಣೆಗಳು, ಅರ್ಜಿಯನ್ನು ಕನಿಷ್ಠ ಇಬ್ಬರು ಅಧಿಕಾರಿಗಳಿಂದ ದೃಢೀಕರಿಸಿ ಸಲ್ಲಿಸುವುದು. ಪ್ರಕರಣದ ವರದಿ ಮಾಡುವಾಗ ಕೈಗೊಂಡ ಕ್ರಮದ ಬಗ್ಗೆ ತಿಳಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ “The General Secretary, Karnataka State Council for Child Welfare ಅಥವಾ ದೂ,ಸಂ.: 08182-295514 ನ್ನು ಸಂಪರ್ಕಿಸುವುದು.

error: Content is protected !!