ಸುಸ್ಥಿರ ಸಮಾಜವನ್ನು ಮುನ್ನಡೆಸುತ್ತಿರುವುದು ಗುಡಿ ಕೈಗಾರಿಕೆ ಮತ್ತು ಗ್ರಾಮೀಣ ಕೈಗಾರಿಕೆ. ಕರೊನಾದಂತಹ ಸಂಕಷ್ಟದಲ್ಲಿ ಈ ಎಲ್ಲ ಕಸುಬುದಾರಿಕೆಗಳು ನೆಲಕಚ್ಚುವಂತಾಯಿತು. ಅವುಗಳಿಗೆ ಪುನಶ್ಚೇತನ ನೀಡಲು ಶಿವಮೊಗ್ಗ ಜಿಲ್ಲೆಯ ಭೀಮನಕೋಣೆಯ ಚರಕ ಸಂಸ್ಥೆ ಕಾರ್ಯಾಗಾರಗಳನ್ನು ನಡೆಸಿ ಅವರಲ್ಲಿ ಇನ್ನೂ ನೈಪುಣ್ಯತೆಯನ್ನು ಮೂಡಿಸಿ ಸ್ಫೂರ್ತಿ ತುಂಬಿ ಹೊಸ ಭಾಷ್ಯ ಬರೆಯಿತು.
ಈಗ ರಾಜ್ಯಾದ್ಯಂತ ಕೈಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟವನ್ನು ಪವಿತ್ರ ವಸ್ತ್ರ ಅಭಿಯಾನ ಎನ್ನುವ ಶೀರ್ಷಿಕೆಯಡಿ ಆರಂಭಿಸಿದೆ.

ಶಿವಮೊಗ್ಗದಲ್ಲಿ ಎರಡು ದಿನಗಳ ಪ್ರದರ್ಶನ ಮತ್ತು ಮಾರಾಟ ನಡೆಯಿತು. ರಾಜ್ಯದ ವಿವಿಧ ಮೂಲೆಗಳಿಂದ ನೇಕಾರರು ವಿವಿಧ ಕುಶಲ ಕಸುಬುದಾರರು ಆಗಮಿಸಿ ಖಾದಿ ಬಟ್ಟೆಯ ಮಹತ್ವವನ್ನು ಯುವಜನರಿಗೆ ಪರಿಚಯಿಸಿದರು.
ರಾಣೆಬೆನ್ನೂರಿನ ತರೇಹವಾರಿಯ ಕಂಬಳಿಗಳು, ಬೆಳಗಾವಿಯ ವಿವಿಧ ಆಟಿಕೆಗಳು, ಉತ್ತರ ಕರ್ನಾಟಕ, ಮೈಸೂರು ಭಾಗದಲ್ಲಿ ತಯಾರಾದ ನೈಸರ್ಗಿಕ ಬಣ್ಣದ ನೇಕಾರಿಕೆಯ ಸೀರೆಗಳನ್ನು ಒಳಗೊಂಡಂತೆ ವಿವಿಧ ವಿನ್ಯಾಸದ ಬಟ್ಟೆಗಳು ಜನಮನ ಸೆಳೆದವು. ಹಬ್ಬದ ಮುನ್ನ ದಿನಗಳಾಗಿದ್ದರಿಂದ ದೇಶಿ ಬಟ್ಟೆಗಳ ಖರೀದಿಯಲ್ಲಿ ಜನರು ತೊಡಗಿಕೊಂಡಿದ್ದರು.

ಅಕ್ಷಯ್ ದೇಶಪಾಂಡೆ, ಸಂಯೋಜಕರು ಮಾಧ್ಯಮ ದೊಂದಿಗೆ ಮಾತನಾಡಿ ರಾಜ್ಯದ ಆರು ಜಿಲ್ಲೆಗಳಲ್ಲಿ ನಮ್ಮ ಅಭಿಯಾನ ಮೊದಲು ಸಂಚರಿಸುತ್ತದೆ. ಇಲ್ಲಿ ನಾವು ಖಾದಿ ಉತ್ಪನ್ನಗಳ ಮಹತ್ವ ಮತ್ತು ಅವುಗಳನ್ನು ಕೊಳ್ಳುವುದರಿಂದ ನೇಕಾರರ ಬದುಕಿಗೆ ಆಗುವ ಸಹಕಾರದ ಕುರಿತು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ.

ಸಂಧ್ಯಾ ಕಾವೇರಿ, News Next ನೊಂದಿಗೆ ಮಾತನಾಡಿ
ಇಲ್ಲಿ ದೇಶಿ ಬಟ್ಟೆಗಳ ಪ್ರದರ್ಶನ ಮತ್ತು ಮಾರಾಟ ಮಾತ್ರ ನಡೆಯುತ್ತಿಲ್ಲ. ಸ್ವಾತಂತ್ರ್ಯ ನಂತರದಲ್ಲಿ ಖಾದಿ ಬಟ್ಟೆಯ ಮಹತ್ವವನ್ನು ಪರಿಚಯಿಸುವ ಅರಿವಿನ ಕಾರ್ಯಕ್ರಮ ಇದಾಗಿದೆ. ಇಂತಹ ಅಭಿಯಾನಗಳು ಪ್ರಸ್ತುತ ದಿನದಲ್ಲಿ ಅತ್ಯಂತ ಅವಶ್ಯ ಎಂದರು.

ಭಾರ್ಗವಿ, ವಿದ್ಯಾರ್ಥಿನಿ ಮಾತನಾಡಿ
ಗ್ರಾಮೋದ್ಯಗಗಳು ಕರೊನಾ ಸಂಕಷ್ಟದಿಂದ ಹೊರಬರಬೇಕೆಂದರೆ ಜನರು ಹೆಚ್ಚು ಅವುಗಳನ್ನು ಕೊಳ್ಳಬೇಕು. ಮಹಿಳೆಯರು ನೇಕಾರ ಉದ್ಯಮದಲ್ಲಿ ಹೆಚ್ಚು ತೊಡಗಿಕೊಂಡಿದ್ದಾರೆ. ಅವರ ಆರ್ಥಿಕ ಸಬಲೀಕರಣದ ಕುರಿತು ನಾವೆಲ್ಲ ಆಲೋಚಿಸಬೇಕಿದೆ.ಎಂದು ಹೇಳಿದರು.

ಹೊನ್ನಪ್ಪ, ಕಂಬಳಿ ನೇಕಾರರು ರಾಣೆಬೆನ್ನೂರು ಮಾತನಾಡಿ ನಾವು ರಾಣೆಬೆನ್ನೂರಿನವರು, ಕುರಿಯ ಉತ್ಪನ್ನಗಳನ್ನು ಸಿದ್ಧಪಡಿಸುತ್ತೇವೆ. ನಮ್ಮ ಕಂಬಳಿಗಳಿಗೆ ಬೇಡಿಕೆ ಇದೆ. ಆದರೆ ಇಂತಹ ವಸ್ತು ಪ್ರದರ್ಶನಗಳಲ್ಲಿ ಮಾರಾಟ ಮಾಡುವ ಅವಕಾಶ ಲಭಿಸಿರುವುದರಿಂದ ಹೆಚ್ಚು ಆತ್ಮಸ್ಥೈರ್ಯ ಮೂಡುತ್ತಿದೆ. ಎಂದವರು ಹೇಳಿದರು.

ಲೀಲಾವತಿ,ಮಾತನಾಡಿ ಕೃಷಿ ವಿಜ್ಞಾನ ಕೇಂದ್ರದ ಕೇಂದ್ರ ಸರ್ಕಾರದಿಂದ ನಿಯೋಜಿತಗೊಂಡಿರುವ ಆರ್ಯ ಯೋಜನೆಯ ಫಲಾನುಭವಿ ನಾನಾಗಿದ್ದು, ಹಪ್ಪಳ, ಸಂಡಿಕೆ, ಚಕ್ಕುಲಿ, ಖಾರ ಮುಂತಾದವುಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದೇನೆ. ನನಗೆ ವಸ್ತು ಪ್ರದರ್ಶನ ಹೊಸ ದಾರಿ ತೋರಿಸಿದೆ.ಎಂದರು.

ಉಮರ್, ಕಾಲೇಜು ವಿದ್ಯಾರ್ಥಿ ಮಾತನಾಡಿ
ಇದೊಂದು ಉತ್ತಮ ಪ್ರಯತ್ನ, ಯುವಜನರು ಖಾದಿ ಬಟ್ಟೆಗಳನ್ನು ತೊಡುವ ಪರಿಪಾಠವನ್ನು ಬೆಳೆಸಿಕೊಳ್ಳಬೇಕು. ಆಗ ಮಾತ್ರ ಇಂತಹ ಅಭಿಯಾನ ಸಾರ್ಥಕತೆ ಪಡೆದುಕೊಳ್ಳುತ್ತದೆ. ಎಅಮದು ಹೇಳಿದರು.

error: Content is protected !!