ಶಿವಮೊಗ್ಗ : ಆಗಸ್ಟ್ 31 : ಶಿವಮೊಗ್ಗ ಮಹಿಳಾ ಕೇಂದ್ರ ಕಾರಾಗೃಹಕ್ಕೆ ಅವಶ್ಯಕವಿರುವ ಒಬ್ಬರು ಸೈಕ್ಯಾಟ್ರಿಕ್ ಕೌನ್ಸಿಲರ್ (ಸೈಕ್ಯಾಟ್ರಿಕ್ ಸೋಷಿಯಲ್ ವರ್ಕರ್) ಹುದ್ದೆಗೆ ಗುತ್ತಿಗೆ ಆಧಾರದ ಮೇಲೆ 1 ವರ್ಷದ ಅವಧಿಗೆ ಕರ್ತವ್ಯ ನಿರ್ವಹಿಸಲು ಆಸಕ್ತ, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಪದವಿ/ಸ್ನಾತಕೋತ್ತರ ಪದವಿಯಲ್ಲಿ ಗಳಿಸಿದ ಅಂಕಗಳು, ರೋಸ್ಟರ್ ಹಾಗೂ ಸಂದರ್ಶನದ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುವುದು. ಅಭ್ಯರ್ಥಿಗಳ ಗರಿಷ್ಠ ವಯೋಮಿತಿ 45 ವರ್ಷಗಳು.
ಆಸಕ್ತರು ದಿ: 07/09/2021 ರೊಳಗಾಗಿ ಸದಸ್ಯ ಕಾರ್ಯದರ್ಶಿಗಳು, ಸೈಕ್ಯಾಟ್ರಿಕ್ ಕೌನ್ಸಿಲರ್ ಹುದ್ದೆಯ ನೇಮಕಾತಿ ಸಮಿತಿ ಹಾಗೂ ಅಧೀಕ್ಷಕರು, ಮಹಿಳಾ ಕೇಂದ್ರ ಕಾರಾಗೃಹ, ಸೋಗಾನೆ ಅಂಚೆ, ನಿದಿಗೆ ಹೋಬಳಿ, ಶಿವಮೊಗ್ಗ -577222 ಇಲ್ಲಿಗೆ ಸಲ್ಲಿಸುವುದು.
ಹೆಚ್ಚಿನ ಮಾಹಿತಿಗಾಗಿ ದೂ.ಸಂ.: 08182-295144ನ್ನು ಸಂಪರ್ಕಿಸುವುದು.