News Next

ಶಿವಮೊಗ್ಗ, ಆಗಸ್ಟ್ 27 : ಶಿವಮೊಗ್ಗ ರಂಗಾಯಣವು  ಜಿಲ್ಲಾಡಳಿತದ ಸಹಯೋಗದೊಂದಿಗೆ ಭಾರತದ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಆಗಸ್ಟ್ 29 ರ ಭಾನುವಾರ ಸಂಜೆ 6.00 ರಿಂದ ಸುವರ್ಣ ಸಾಂಸ್ಕøತಿಕ ಭವನದಲ್ಲಿ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮವನ್ನು ಶಿವಮೊಗ್ಗ ಜಿಲ್ಲೆಯ ಮಾನ್ಯ ಜಿಲ್ಲಾಧಿಕಾರಿಗಳಾದ ಕೆ.ಬಿ.ಶಿವಕುಮಾರ್ ಇವರು ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಶಿಕಾರಿಪುರದ ಹಿರಿಯ ರಂಗ ಕಲಾವಿದರು ಹಾಗೂ ಮಲೆನಾಡು ಅಭಿವೃದ್ಧಿ ಮಂಡಳಿಯ ಮಾಜಿ ಅಧ್ಯಕ್ಷರಾದ ಪದ್ಮನಾಭ ಭಟ್ ಇವರು ಆಗಮಿಸಲಿದ್ದಾರೆ. ರಂಗಸಮಾಜದ ಸದಸ್ಯರಾದ ಹಾಲಸ್ವಾಮಿ ಆರ್.ಎಸ್ ಇವರ ಉಪಸ್ಥಿತಿಯಿರುತ್ತದೆ. ಶಿವಮೊಗ್ಗ ರಂಗಾಯಣದ ನಿರ್ದೇಶಕರಾದ ಸಂದೇಶ್ ಜವಳಿ ಇವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಶಿವಮೊಗ್ಗ ರಂಗಾಯಣದ ಕಲಾವಿದರಿಂದ ದೇಶಭಕ್ತಿ ಸಂಗೀತ ಹಾಗೂ ಡಾ.ಸಾಸ್ವೆಹಳ್ಳಿ ಸತೀಶ್ ರಚನೆಯ ‘ಈಸೂರ ಶೂರರು’ ಹಾಗೂ ಡಾ.ಬೇಲೂರು ರಘುನಂದನ್ ರಚನೆಯ ‘ವಿದುರಾಶ್ವಥದಲ್ಲಿ ಸ್ವಾತಂತ್ರ್ಯದ ಬೆಳಕು’ ಎಂಬ ಎರಡು ಕಿರುನಾಟಕಗಳ ಪ್ರದರ್ಶನವಿರುತ್ತದೆ. ದೇಶಭಕ್ತಿ ಗೀತೆಗಳ ನೃತ್ಯ ಪ್ರದರ್ಶನದ ಕಾರ್ಯಕ್ರಮವನ್ನು ಶಿವಮೊಗ್ಗದ ಸಹಚೇತನಾ ನಾಟ್ಯಾಲಯ ತಂಡ ಪ್ರಸ್ತುತಪಡಿಸಲಿದೆ. ತೀರ್ಥಹಳ್ಳಿಯ ನಟಮಿತ್ರರು ತಂಡದ ಕಲಾವಿದರು ಮೂಕಾಭಿನಯದ ಮೂಲಕ ಕಿರುನಾಟಕ ಪ್ರದರ್ಶಿಸಲಿದ್ದಾರೆ.
ಕೋವಿಡ್-19 ರ ಹಿನ್ನೆಲೆಯಲ್ಲಿ ಪ್ರೇಕ್ಷಕರು ಸರ್ಕಾರಿ ಮಾರ್ಗಸೂಚಿ ಪ್ರಕಾರ ಮಾಸ್ಕ್ ಧರಿಸಿ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಕಡ್ಡಾಯವಾಗಿರುತ್ತದೆ. ಪ್ರವೇಶ ಉಚಿತವಾಗಿದ್ದು ರ0ಗಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಶಿವಮೊಗ್ಗ ರಂಗಾಯಣದ ಆಡಳಿತಾಧಿಕಾರಿ ಶಫಿ ಸಾದುದ್ದೀನ್ ಇವರು ವಿನಂತಿಸಿದ್ದಾರೆ.

error: Content is protected !!