News Next


ಶಿವಮೊಗ್ಗ, ಆಗಸ್ಟ್ 19 :
     ಆಯನೂರು ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳು ತಮ್ಮ ಪೋಷಕರ ಬೆಳೆ ಸಮೀಕ್ಷೆಯನ್ನು ಮೊಬೈಲ್ ಆ್ಯಪ್ ಮೂಲಕ ನಡೆಸುವ ಹೊಸ ಪ್ರಯತ್ನಕ್ಕೆ ಕೃಷಿ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು.
     ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಆಯನೂರು, ಕುಂಸಿ ಮತ್ತು ಹಾರನಹಳ್ಳಿ ಗ್ರಾಮಾಂತರ ಪ್ರದೇಶದ ರೈತರ ಮಕ್ಕಳಾದ ಈ ವಿದ್ಯಾರ್ಥಿಗಳಿಗೆ  ಬೆಳೆ ಸಮೀಕ್ಷೆಯ ಆ್ಯಪ್ ಬಳಕೆ ವಿಧಾನವನ್ನು ಇಂದು ತಿಳಿಸಿಕೊಡಲಾಯಿತು.
ಕಾರ್ಯಕ್ರಮದಲ್ಲಿ ಶಿವರಾಜ್ ಕುಮಾರ್ ಹೆಚ್.ಎಸ್ ಮಾತನಾಡಿ, ವಿದ್ಯಾರ್ಥಿಗಳು  ಮೊಬೈಲ್ ಬಳಸುವುದನ್ನು ಕಲಿತಿದ್ದಾರೆ. ಸಂದೇಶಗಳನ್ನು, ಪಠ್ಯ ಕ್ರಮಗಳ ಕಲಿಕೆಗೆ ಟ್ಯಾಬ್ ಬಳಕೆಯನ್ನು ಮಾಡುತ್ತಿದ್ದಾರೆ. ಇಲಾಖೆಯ ಆಶಯದಂತೆ ರೈತರು ತಮ್ಮ ಬೆಳೆಗಳ ಸಮೀಕ್ಷೆಯನ್ನು ತಾವೇ ಮಾಡಬೇಕಾಗಿದ್ದು ಬಹುತೇಕ ಆಯನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಬೆಳೆ ಸಮೀಕ್ಷೆ ಆ್ಯಪ್ ಡೌನ್‍ಲೋಡ್ ಮಾಡಿ, ಬೆಳೆ ಸಮೀಕ್ಷಗೆ ಸಿದ್ದರಾಗಿರುವುದಾಗಿ ತಿಳಿಸಿದರು.
     ಕಂದಾಯ ಇಲಾಖೆ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಮತ್ತು ಪಶುಸಂಗೋಪನೆ ಇಲಾಖೆಯಲ್ಲಿ ಸರ್ಕಾರದ ಯೋಜನೆಗಳನ್ನು ಸದುಪಯೋಗಪಡಿಸಕೊಳ್ಳಲು ಬೆಳೆ ಸಮೀಕ್ಷೆ ದತ್ತಾಂಶವು ಅತ್ಯವಶ್ಯಕವಾಗಿರುತ್ತದೆ. ಆದ್ದರಿಂದ ಇಂತಹ ಸಮಯದಲ್ಲಿ ಮೊಬೈಲ್ ಬಳಕೆ ಮಾಡುತ್ತಿರುವ ವಿದ್ಯಾರ್ಥಿಗಳು ತಮ್ಮ ಪೋಷಕರೊಂದಿಗೆ ಬೆಳೆ ಸಮೀಕ್ಷೆ ಮಾಡುವುದರ ಮೂಲಕ ತಮ್ಮ ಜಮೀನಿನಲ್ಲಿ ಬೆಳೆದ ಎಲ್ಲಾ ಬೆಳೆಗಳನ್ನು ನಮೂದಿಸಬಹುದು. ಇದರಿಂದ ಇಲಾಖೆಯ ಯೋಜನೆಗಳಾದ ಬೆಳೆ ವಿಮೆ,v Àಮ್ಮ ಪಹಣಿಯಲ್ಲಿ ಬೆಳೆ ನಮೂದಿಸುವುದು, ಬೆಳೆ ನಷ್ಟ ಪರಿಹಾರ, ತಮ್ಮ ಬೆಳೆಗಳಿಗೆ ಸಂಬಂದಿಸಿದಂತೆ ಬ್ಯಾಂಕ್‍ಗಳಲ್ಲಿ ಬೆಳೆ ಸಾಲ ಸೌಲಭ್ಯ ಪಡೆಯಲು ಸಹಕಾರಿಯಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಕೃಷಿ ಅಧಿಕಾರಿಗಳಾದ ಯೋಗಿತಾ.ಟಿ.ಡಿ, ಅಶ್ವಿನಿ.ಜಿ ಹಾಗೂ  ಕಾಲೇಜಿನ ಪ್ರಾಂಶುಪಾಲರು ಮತ್ತು ಸಹಪ್ರಾಧ್ಯಾಪಕರು ಹಾಜರಿದ್ದರು.

error: Content is protected !!