ಕಾರ್ಯಕ್ರಮದಲ್ಲಿ ಜೀವನೋಪಾಯದ ಉನ್ನತೀಕರಣಕ್ಕಾಗಿ ವಿವಿಧ ಸಂಸ್ಕರಣೆ ಮತ್ತು ಮೌಲ್ಯವರ್ಧನೆ, ಕುರಿ ಮತ್ತು ಮೇಕೆ ಸಾಕಾಣಿಕೆ, ಉದ್ಯಮಶೀಲತೆಯಾಗಿ ಹಿತ್ತಲು ಕೋಳಿ ಸಾಕಾಣಿಕೆ, ಆದಾಯ ಹೆಚ್ಚಳಕ್ಕಾಗಿ ತೋಟಗಾರಿಕೆ ಚಟುವಟಿಕೆಗಳು, ಹೆಚ್ಚುವರಿ ಆದಾಯಕ್ಕಾಗಿ ಅಣಬೆ ಕೃಷಿ, ಸಮಗ್ರ ಕೃಷಿ ಪದ್ಧತಿ, ಎರೆ ಹುಳು ಗೊಬ್ಬರ ಮತ್ತು ಜೈವಿಕ ಗೊಬ್ಬರ ಉತ್ಪಾದನೆ ಲಾಭದಾಯಕ ಉದ್ಯಮ, ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳ ಮಾರಾಟದಲ್ಲಿ ಐಸಿಟಿಯ ಪ್ರಾಮುಖ್ಯತೆ ಹಾಗೂ ಆರೋಗ್ಯ ಮತ್ತು ಪೌಷ್ಟಿಕ ಭದ್ರತೆಗಾಗಿ ಪೌಷ್ಟಿಕ ಕೈ ತೋಟದ ಬಗ್ಗೆ ಮಾಹಿತಿ ನೀಡಲಾಯಿತು. ಪರಿಶಿಷ್ಟ ಜಾತಿ ಸಮೂಹಗಳ ಅಭಿವೃದ್ಧಿಗೆ ಸಮಾಜ ಕಲ್ಯಾಣ ಇಲಾಖೆ, ಮೀನುಗಾರಿಕೆ ಇಲಾಖೆ, ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ, ರೇμÉ್ಮ ಇಲಾಖೆ, ಪಶು ಸಂಗೋಪನೆ ಹಾಗೂ ಸಣ್ಣ ಕೈಗಾರಿಕೆಗಳ ಯೋಜನೆಗಳ ಬಗ್ಗೆ ಮಾಹಿತಿ ನೀಡಲಾಯಿತು, ಹಾಗೂ ಸಾಗರ ತಾಲ್ಲೂಕಿನ ರೇಷ್ಮೆ ಕೃಷಿ ಘಟಕ, ಐಗಿಬೈಲು ಮತ್ತು ಚಿಪ್ಲಿಯ ಜೇನು ಕೃಷಿ ಘಟಕಕ್ಕೆ ಭೇಟಿ ನೀಡಿ ರೈತರ ಅನುಭವವನ್ನು ಹಂಚಿಕೊಳ್ಳಲಾಯಿತು.
ಸಮಾರೋಪ ಸಮಾರಂಭದಲ್ಲಿ ಡಾ. ಜ್ಯೋತಿ ಎಂ ರಾಠೋಡ್, ವಿಜ್ಞಾನಿ (ಗೃಹ ವಿಜ್ಞಾನಿ), ಕೃಷಿ ವಿಜ್ಞಾನ ಕೇಂದ್ರ, ಶಿವಮೊಗ್ಗ ಇವರು 6 ದಿನಗಳ ಕಾರ್ಯಕ್ರಮವನ್ನು ಮಂಡಿಸಿ ಎಲ್ಲರಿಗೂ ಸ್ವಾಗತವನ್ನು ಕೋರಿದರು. ಶಿಬಿರಾರ್ಥಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು ನಂತರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಡಾ. ಬಿ.ಸಿ. ಹನುಮಂತಸ್ವಾಮಿ, ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು, ಕೃಷಿ ವಿಜ್ಞಾನ ಕೇಂದ್ರ, ಶಿವಮೊಗ್ಗ ಅವರು ಮಾತನಾಡಿ ಮೊಟ್ಟ ಮೊದಲ ಬಾರಿಗೆ ಕೃಷಿ ವಿಜ್ಞಾನ ಕೇಂದ್ರದಲ್ಲಿ ಪರಿಶಿಷ್ಟ ಜಾತಿಯವರಿಗೆ ತರಬೇತಿ ಹಮ್ಮಿಕೊಂಡಿದ್ದು ಇದರ ಸದುಪಯೋಗ ಪೆಡೆಯಬೇಕೆಂದು ತಿಳಿಸಿದರು. ಡಾ.ಎಂ.ಬಸವರಾಜ, ವಿಜ್ಞಾನಿ(ಬೇಸಾಯ ಶಾಸ್ತ್ರ) ರವರು ರೈತರ ಬೆಳೆಗಳನ್ನು ಬೆಳೆಯುವುದರ ಜೊತೆಗೆ ಮೌಲ್ಯವರ್ಧನೆಗೆ ಹೆಚ್ಚು ಒತ್ತು ನೀಡಿ ಜೀವನೋಪಾಯವನ್ನು ಉತ್ತಮಗೊಳಿಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದ ಕೊನೆಯಲ್ಲಿ ಎಲ್ಲಾ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರವನ್ನು ವಿತರಿಸಲಾಯಿತು. ಡಾ. ಅಶೋಕ್. ಎಂ, ವಿಜ್ಞಾನಿ (ಪಶು ವಿಜ್ಞಾನ), ಕೃಷಿ ವಿಜ್ಞಾನ ಕೇಂದ್ರ, ಶಿವಮೊಗ್ಗರವರು ಎಲ್ಲರನ್ನು ವಂದಿಸಿದರು ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನ ಕೇಂದ್ರದ ಎಲ್ಲಾ ವಿಜ್ಞಾನಿಗಳು ಹಾಗೂ ಸಿಬ್ಬಂದಿಯವರು ಉಪಸ್ಥಿತರಿದ್ದರು.