ಉದ್ದು, ಹೆಸರು ಬೆಳೆಗಳಲ್ಲಿ ಮಳೆ ನಂತರ ಎಲೆಗಳಲ್ಲಿ ಚಿಬ್ಬು ಹಾಗೂ ಇಟ್ಟಂಗಿ ರೋU Àಕಂಡು ಬಂದಿದ್ದು ಹೂ ಹಂತ ತಲುಪುತ್ತಿರುವ ವೇಳೆಯಲ್ಲಿ ಬೆಳೆಗಳ ಸಸ್ಯ ಸಂರಕ್ಷಣೆಯನ್ನು ಸೂರ್ಯನ ಬಿಸಿಲಿನ ಅವದಿಯಲ್ಲಿ ಕೈಗೊಳ್ಳಬೇಕು.ಮೋಡಕವಿದ ವಾತಾವರಣ ಹಾಗೂÀ ಮಳೆ ದಿನಗಳು ಬೆಳೆದ ಉದ್ದು, ಹೆಸರು ಹೊಲಗಳಲ್ಲಿ ಈ ರೋಗ ಕಂಡು ಬಂದಿದೆ. ಬೇರು ವ್ಯಾಪ್ತಿ ಉಸಿರಾಡುವಂತೆ ಹಾಗೂ ಸಸ್ಯ ಬೆಳೆಯುವಂತೆ ಸಂರಕ್ಷಣಾ ಕ್ರಮಗಳನ್ನು ರೈತರು ಕೈಗೊಳ್ಳಬೇಕು .ಉದ್ದು ಮತ್ತು ಹೆಸರು ಎರಡು ಬೆಳೆಗಳಲ್ಲಿ ಎಲೆಚುಕ್ಕಿ, ಚಿಬ್ಬುರೋಗ, ಇಟ್ಟಂಗಿ ರೋಗ ಕಂಡು ಬಂದಲ್ಲಿ ಹೆಕ್ಸಾಕೋನಾಜಾಲ್ 1 ಮಿ.ಲಿ. ಅಥವಾ ಕಾರ್ಬಡೈಜಿಂ 1 ಗ್ರಾ. ಅಥವಾ ಮ್ಯಾಂಕೋಜೆಬ್ 2 ಗ್ರಾ. ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು
ಬದಲಾಗುತ್ತಿರುವ ಹವಾಮಾನ ದಿನಗಳಲ್ಲಿ ಗಿಡದ ಆರೋಗ್ಯಕ್ಕೆ ಒತ್ತು ನೀಡಬೇಕು. ಹೊಲಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಸೂಕ್ತ ಬಸಿಗಾಲುವೆ ನಿರ್ಮಿಸಿ ದ್ವಿದಳ ಧಾನ್ಯ ಬೆಳೆಗಳಾದ ಉದ್ದು, ಹೆಸರು ತೊಗರಿ ಬೆಳೆಗಳಿಗೆ ಪಲ್ಸ್ ಮ್ಯಾಜಿಕ್ ಎಕರೆಗೆ 2 ಕಿ.ಗ್ರಾ.200 ಲೀಟರ್ ನೀರಿನೊಂದಿಗೆ ಬೆರೆಸಿ ಸಿಂಪಡಿಸಬೇಕು.ಉತ್ತಮ ಹೂ ಮತ್ತು ಕಾಯಿ ರಚನೆಯಿಂದ ಇಳುವರಿ ಪಡೆಯಬಹುದು- ಡಾ.ರಾಜು ಜಿ. ತೆಗ್ಗಳ್ಳಿ, ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು ಐಸಿಎಆರ್-ಕೃಷಿ ವಿಜ್ಞಾನಕೇಂದ್ರ, ಕಲಬುರಗಿ
ಮಳೆಯಿಂದ ವಾತಾವರಣದ ಹಾಗೂ ಭೂಮಿಯ ಆದ್ರ್ರತೆ, ತೇವಾಂಶ ಹೆಚ್ಚಾಗಿದ್ದು, ದಟ್ಟ ಮೋಡದ ದಿನಗಳು ಇಟ್ಟಂಗಿ ತಾಮ್ರರೋಗ ಹಾಗೂ ಚಿಬ್ಬುರೋಗ ಪ್ರಸಾರಕ್ಕೆ ಸೂಕ್ತ ಸನ್ನಿವೇಶವಾಗಿರುತ್ತದೆ. ಉದ್ದು ಮತ್ತು ಹೆಸರು ಹೊಲಗಳಲ್ಲಿ ರೋಗ ಭಾದೆ 5 ರಿಂದ 10 ಶೇಕಡ ಇರುವಾಗಲೆ ಸೂಕ್ತ ಸಸ್ಯ ಸಂರಕ್ಷಣೆ ಕೈಗೊಳ್ಳಬೇಕು ಮುನ್ನೆಚ್ಚರಿಕಯಾಗಿಯೂ ಮೇಲ್ಕಂಡ ಸಸ್ಯ ಸಂರಕ್ಷಣಾ ಔಷದೀಯನ್ನು ಸಿಂಪಡಿಸಬೇಕು – ಜಹೀರ್ಅಹೆಮದ್, ವಿಜ್ಞಾನಿ (ಸಸ್ಯರೋಗಶಾಸ್ತ್ರ), ಕೃಷಿ ವಿಜ್ಞಾನಕೇಂದ್ರ, ಕಲಬುರಗಿ.
ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು
ಐಸಿಎಆರ್-ಕೃಷಿ ವಿಜ್ಞಾನಕೇಂದ್ರ, ಕಲಬುರಗಿ