ಶಿವಮೊಗ್ಗ, ಆಗಸ್ಟ್ 07 : ಕರ್ನಾಟಕ ಸಾಹಿತ್ಯ ಅಕಾಡೆಮಿಯ ತ್ರೈಮಾಸಿಕ ಅನಿಕೇತನವು 1984ರಿಂದ ಕನ್ನಡದಲ್ಲಿ ಪ್ರಾರಂಭವಾಗಿ, ಯುಜಿಸಿ ಇಂದ ಅನುಮೋದನೆ ಪಡೆದ ಕನ್ನಡದ ಕೆಲವೇ ಪತ್ರಕೆಗಳಲ್ಲಿ ಒಂದಾಗಿದ್ದು, ಸಾಹಿತ್ಯ ಅಕಾಡೆಮಿಯು ಅನಿಕೇತನ ಚಂದಾದಾರ ಅಭಿಯಾನವನ್ನು ಹಮ್ಮಿಕೊಂಡಿದೆ.
ಅನುವಾದಕ್ಕಾಗಿ ಮೀಸಲಿದ್ದ ಕನ್ನಡ ಅನಿಕೇತನದ ಸ್ವರೂಪವನ್ನು ಮಾರ್ಪಡಿಸಿ ಎಲ್ಲಾ ಸಾಹಿತ್ಯಾಸಕ್ತರಿಗೂ ಅನುಕೂಲವಾಗುವಂತಹ ಲೇಖನಗಳನ್ನು ಪ್ರಕಟಿಸಲಾಗುತ್ತಿದೆ. ಸಾಹಿತ್ಯ ಕ್ಷೇತ್ರದ ಎಲ್ಲಾ ಓದುಗರಿಗೆ ಮೌಲ್ಯಯುತವಾದ ಸಾಹಿತ್ಯಿಕ ವಿಚಾರಗಳನ್ನು ತಲುಪಿಸಬೇಕೆಂಬ ಸದುದ್ದೇಶದಿಂದ ಸಾಹಿತ್ಯ ಅಕಾಡೆಮಿಯು ಅನಿಕೇತನ ಚಂದಾದಾರ ಅಭಿಯಾನವನ್ನು ಹಮ್ಮಿಕೊಂಡಿದೆ. ಅನಿಕೇತನದ ಚಂದಾದಾರರಾಗಲು ಬಿಡಿ ಪ್ರತಿಗೆ ರೂ.60/-, ವಾರ್ಷಿಕ ಚಂದಾದಾರರಾಗಲು ರೂ.200/-, ಆಜೀವ ಸದಸ್ಯತ್ವ ಪಡೆಯಲು ರೂ. 1000/- ಗಳನ್ನು ನಿಗದಿಪಡಿಸಲಾಗಿದೆ.
ಡಿ.ಡಿ. ಅಥವಾ ಎಂ.ಒ ಮೂಲಕ ಹಣ ತಲುಪಿಸುವವರು ಹಣ ಕಟ್ಟಿದ ಡಿಡಿ ಅಥವಾ ಎಂ.ಒ ಪ್ರತಿಯೊಂದಿಗೆ ಪತ್ರಿಕೆಯನ್ನು ಕಳುಹಿಸಬೇಕಾದ ಸ್ವ-ವಿಳಾಸವನ್ನು ಲಗತ್ತಿಸಿ ರಿಜಿಸ್ಟ್ರಾರ್, ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು 560002 ಈ ವಿಳಾಸಕ್ಕೆ ರಿಜಿಸ್ಟರ್ಡ್ ಪೋಸ್ಟ್ ಅಥವಾ ನೇರವಾಗಿ ಅಥವಾ ಇನ್ನಿತರ ಸೂಕ್ತ ಮಾರ್ಗದ ಮೂಲಕ ತಲುಪಿಸಬೇಕು.
ಹೆಚ್ಚಿನ ಮಾಹಿತಿಗಾಗಿ ದೂ.ಸಂ: 080-22211730/22106460, ಮೊ.ಸಂ 9449935103 ಹಾಗೂ ಅಕಾಡೆಮಿಯ ವೆಬ್‍ಸೈಟ್ www.karnatakasahithyaacademy.org ನೋಡಬಹುದು ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ತಿಳಿಸಿದ್ದಾರೆ.