ವಿಶ್ವ ಸ್ತನ್ಯ ಪಾನ ಸಪ್ತಾಹ ಅಂಗವಾಗಿ ಶಿವಮೊಗ್ಗ ತಾಲೂಕಿನ ಅಂಗನವಾಡಿ ಕೇಂದ್ರಗಳ ವ್ಯಾಪ್ತಿಯಲ್ಲಿ ಬರುವ ಫಲಾನುಭವಿಗಳಿಗೆ ಮತ್ತು ಸಾರ್ವಜನಿಕರಿಗೆ ಸ್ತನ್ಯಪಾನ ದ ಮಹತ್ವ ಮತ್ತು ಅವಶ್ಯಕತೆ ಮಕ್ಕಳ ಲಾಲನೆ ಪಾಲನೆ ಪೋಷಣೆ ಗರ್ಭಿಣಿ ಹಾರೈಕೆ ಬಾಣಂತಿ ಆರೈಕೆ ಕುರಿತು ಕಾರ್ಯಕ್ರಮವನ್ನು ವಿದ್ಯ ನಗರದಲ್ಲಿ ಆಯೋಜಿಸಲಾಗಿತ್ತು

ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮವನ್ನು ಶ್ರೀ ಎನ್ ಚಂದ್ರಪ್ಪ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಿವಮೊಗ್ಗ ಅವರು ಉದ್ಘಾಟಿಸಿ ಮಾತನಾಡುತ್ತಾ ಮಕ್ಕಳಿಗೆ ಸ್ತನ್ಯಪಾನ ನೀಡುವ ಉದ್ದೇಶ ಮತ್ತು ಅದರ ಅಗತ್ಯತೆ ಪ್ರಾಮುಖ್ಯತೆ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು ಬಗ್ಗೆ ಹಾಗೂ ಮಾತೃಪೂರ್ಣ ಮಾತೃವಂದನಾ ಯೋಜನೆಗಳು ಮಹಿಳೆಯರ ಸರ್ವಾಂಗೀಣ ಅಭಿವೃದ್ಧಿಗೆ ಇಲಾಖೆಯಿಂದ ಅನುಷ್ಠಾನಗೊಳ್ಳುತ್ತಿರುವ ಯೋಜನೆಗಳನ್ನು ಬಗ್ಗೆ ಮಾಹಿತಿಯನ್ನು ನೀಡಿದರು.

ಕಾರ್ಯಕ್ರಮದಲ್ಲಿ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಮತಿ ಅಕ್ಷಯ ವಲಯದ ಮೇಲ್ವಿಚಾರಕಿ ಶ್ರೀಮತಿ ಸುಮಂಗಳ ಇಬ್ಬಕ್ಕ ನವರ್ ಆರೋಗ್ಯಾದಿಕಾರಿ ಇರನ್ ತೆಹರಿನ್ ಆರೋಗ್ಯ ಸಿಬ್ಬಂದಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಪೋಷಕರು ಹಾಜರಿದ್ದರು ಕಾರ್ಯಕ್ರಮದ ಅಂಗವಾಗಿ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮವನ್ನು ನೆರವೇರಿಸಲಾಯಿತು

error: Content is protected !!