News Next

ಶಿವಮೊಗ್ಗ, ಆಗಸ್ಟ್ 06 :ನಗರದ ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಆಗಸ್ಟ್ 7 ರಂದು ‘ಇಂಟರ್‍ವೆನ್ಶನಲ್ ಕಾರ್ಡಿಯಾಲಜಿ’ ಕುರಿತು ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ.
  ಬೆಂಗಳೂರಿನ ಶ್ರೀ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕರಾದ ಡಾ.ಸಿ.ಎನ್.ಮಂಜುನಾಥ್ ಹಾಗೂ ಎಸ್‍ಜೆಐಸಿಎಎಸ್&ಆರ್‍ನ ಹೃದ್ರೋಗ ವಿಭಾಗದ ಪ್ರಾಧ್ಯಾಪಕರು ಹಾಗೂ ಆರ್‍ಜಿಯುಹೆಚ್‍ಎಸ್ ಮಾಜಿ ಕುಲಪತಿಗಳಾದ ಡಾ.ಕೆ.ಎಸ್.ರವೀಂದ್ರನಾಥ ಇವರ ತಂಡವು ಸಂಸ್ಥೆಯ ಸೂಪರ ಸ್ಪೆಷಾಲಿಟಿ ಆಸ್ಪತ್ರೆಯ ಹೃದ್ರೋಗ ವಿಭಾಗದಲ್ಲಿ ಕ್ಯಾಥ್‍ಲ್ಯಾಬ್ ಕಾರ್ಯ ನಿರ್ವಹಣೆ ಕುರಿತು ಕಾರ್ಯಾಗಾರ ಹಾಗೂ ಆಂಜಿಯೋಗ್ರಾಮ್ ಮತ್ತು ಆಂಜಿಯೋಪ್ಲಾಸ್ಟಿ ಚಿಕಿತ್ಸೆಯ ಪ್ರಾತ್ಯಕ್ಷಿಕೆ ನಡೆಸಿಕೊಡುವರು.
     ಬೆಳಿಗ್ಗೆ 9 ಗಂಟೆಗೆ ಕಾರ್ಯಾಗಾರಕ್ಕೆ ನೋಂದಣಿ ಪ್ರಕ್ರಿಯೆಯಿದ್ದು, 11 ಗಂಟೆಗೆ ಕಾರ್ಯಾಗಾರ ಆರಂಭವಾಗಲಿದೆ. ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವೈದ್ಯಕೀಯ, ಹೃದ್ರೋಗ ಮತ್ತು ಅರಿವಳಿಕೆ ತಜ್ಞರು ಹಾಗೂ ಶಿವಮೊಗ್ಗದ ಫಿಜಿಷಿಯನ್ ಮತ್ತು ಹೃದ್ರೋಗ ತಜ್ಞರು ಭಾಗವಹಿಸಬಹುದು. 50 ಸದಸ್ಯರಿಗೆ ಮಾತ್ರ ನೋಂದಣಿಗೆ ಅವಕಾಶ ಇದ್ದು, ಎರಡು ಡೋಸ್ ಕೋವಿಡ್ ಲಸಿಕೆ ಪಡೆದ ವೈದ್ಯರು ಮಾತ್ರ ಕಾರ್ಯಾಗಾರದಲ್ಲಿ ಪಾಲ್ಗೊಳ್ಳಬಹುದು ಎಂದು ಪ್ರಕಟಣೆ ತಿಳಿಸಿದೆ.

error: Content is protected !!