ಶಿವಮೊಗ್ಗ, ಆಗಸ್ಟ್ 05 : ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಪಾವತಿಗೆ ಅನುಕೂಲವಾಗುವಂತೆ ಪಾಲಿಕೆ ಕಚೇರಿಯ ಆವರಣದಲ್ಲಿ ಎಲ್ಲಾ ಕೌಂಟರ್ಗಳನ್ನು ಪ್ರಾರಂಭ ಮಾಡಲಾಗಿದ್ದು, ಸಾರ್ವಜನಿಕರು ನೇರವಾಗಿ ಕಚೇರಿಯಲ್ಲಿ ಆಸ್ತಿ ತೆರಿಗೆ ಪಾವತಿಸಲು ಅವಕಾಶವಿರುತ್ತದೆ.
ಅಲ್ಲದೇ ಈಗಾಗಲೇ ಜಾರಿಯಲ್ಲಿರುವಂತೆ ಆಸ್ತಿ ತೆರಿಗೆ ಪಾವತಿಯನ್ನು ಮಹಾನಗರಪಾಲಿಕೆಯ ವೆಬ್ಸೈಟ್ ವಿಳಾಸ www.shivamoggacitycorp.org ಮುಖಾಂತರ ಆನ್ಲೈನ್ನಲ್ಲಿ ಹಾಗೂ ಯುಪಿಐ ಮೊಬೈಲ್ ಆ್ಯಪ್ಗಳಾದ ಪೇಟಿಎಂ/ಫೋನ್ ಪೇ/ಗೂಗಲ್ ಪೇ/ಇತರೆ ಮೂಲಕ ಆಸ್ತಿ ತೆರಿಗೆ ಪಾವತಿ ಮಾಡಬಹುದಾಗಿರುತ್ತದೆ.
ಸರ್ಕಾರದ ಸುತ್ತೋಲೆಯನ್ವಯ 2021-22 ನೇ ಸಾಲಿಗೆ ಅನ್ವಯಿಸುವ ಆಸ್ತಿ ತೆರಿಗೆ ಮೇಲಿನ ಶೇ.5 ರ ತೆರಿಗೆ ರಿಯಾಯಿತಿ ಸೌಲಭ್ಯದ ಕಾಲಾವಧಿಯನ್ನು ಆಗಸ್ಟ್ 31 ರವರೆಗೆ ವಿಸ್ತರಿಸಲಾಗಿದೆ. ಅಲ್ಲದೇ ದಿನಾಂಕ:
01-09-2021 ರಿಂದ ಅನ್ವಯಿಸುವಂತೆ ವಿಳಂಬದ ಅವಧಿಗೆ ಮಾಸಿಕ ಶೇ.2 ರಷ್ಟು ದಂಡ ವಿಧಿಸಲಾಗುವುದು. ಆದ್ದರಿಂದ ಸಾರ್ವಜನಿಕರು ಆಗಸ್ಟ್ 31 ರವರೆಗೆ ಶೇ.5 ರ ತೆರಿಗೆ ರಿಯಾಯಿತಿ ಸೌಲಭ್ಯವನ್ನು ಉಪಯೋಗಿಸಿಕೊಂಡು ಪಾವತಿಸಬಹುದು.
ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಕಚೇರಿಯ ರಾಜಸ್ವ ನಿರೀಕ್ಷಕರು ಹಾಗೂ ಕರ ವಸೂಲಿಗಾರರು ಕಚೇರಿಯಿಂದ ಅನುಮೋದಿತವಾಗಿರುವ ಇಡಿಸಿ(ಪಿಓಎಸ್) ಯಂತ್ರಗಳ ಮೂಲಕ ನೇರವಾಗಿ ಆಸ್ತಿ ಮಾಲೀಕರ ಸ್ವತ್ತಿನ ಸ್ಥಳದಲ್ಲಿ ಪಾವತಿಸಿಕೊಂಡು ರಸೀದಿಯನ್ನು ನೀಡುವ ಸೌಲಭ್ಯ ಸಹ ಕಲ್ಪಿಸಲಾಗಿದೆ ಎಂದು ಮಹಾನಗರಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.