News Next


ಶಿವಮೊಗ್ಗ, ಜುಲೈ-28: ಶಿವಮೊಗ್ಗ ಜಿಲ್ಲೆಯಲ್ಲಿ ಆತ್ಮ ಯೋಜನೆಯಡಿ ಗುತ್ತಿಗೆ ಆಧಾರದಲ್ಲಿ ಒಂದು ವರ್ಷದ ಅವಧಿಗೆ ಸಿಬ್ಬಂದಿ ಸೇವೆಯನ್ನು ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. ಉಪ ಯೋಜನಾ ನಿರ್ದೇಶಕರು, ತಾಲ್ಲೂಕು ತಾಂತ್ರಿಕ ವ್ಯವಸ್ಥಾಪಕರು ಮತ್ತು ಸಹಾಯಕ ತಾಂತ್ರಿಕ ವ್ಯವಸ್ಥಾಪಕರುಗಳ ತಲಾ ಒಂದು ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ್ದು, ಉಪ ಯೋಜನಾ ನಿರ್ದೇಶಕರು, ತಾಲ್ಲೂಕು ತಾಂತ್ರಿಕ ವ್ಯವಸ್ಥಾಪಕರ ಹುದ್ದೆಗೆ ಆಯ್ಕೆಯಾಗಲು ಕೃಷಿ ಅಥವಾ ಕೃಷಿ ಸಂಬಂಧಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮತ್ತು ಸಹಾಯಕ ತಾಂತ್ರಿಕ ವ್ಯವಸ್ಥಾಪಕರ ಹುದ್ದೆಗೆ ಕೃಷಿ ಅಥವಾ ಕೃಷಿ ಸಂಬಂಧಿತ ವಿಷಯದಲ್ಲಿ ಪದವಿ ಹೊಂದಿರಬೇಕು ಹಾಗೂ ಸೇವಾನುಭವ ಇರಬೇಕು.
    ಆಸಕ್ತ, ಸೂಕ್ತ ವಿದ್ಯಾರ್ಹತೆ ಹಾಗೂ ಅನುಭವ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಉಪ ನಿರ್ದೇಶಕರು-1/ಯೋಜನಾ ನಿರ್ದೇಶಕರು (ಆತ್ಮ) ಇವರಿಂದ ಪಡೆದು ಸ್ವವಿವರಗಳೊಂದಿಗೆ (ದೃಢೀಕೃತ ವಿದ್ಯಾರ್ಹತೆ ಮತ್ತು ಅನುಭವ ದಾಖಲಾತಿಗಳೊಂದಿಗೆ) ಆಗಸ್ಟ್ 4 ರೊಳಗೆ ಉಪ ನಿರ್ದೇಶಕರು-1/ಯೋಜನಾ ನಿರ್ದೇಶಕರು (ಆತ್ಮ) ಇವರ ಕಚೇರಿ, ಹಳೇ ತೀರ್ಥಹಳ್ಳಿ ರಸ್ತೆ, ಶಿವಮೊಗ್ಗ ಇಲ್ಲಿ ನೀಡಬಹುದು. ಹೆಚ್ಚಿನ ಮಾಹಿತಿಗಾಗಿ ದೂ.ಸಂ: 08182-222208 ನ್ನು ಸಂಪರ್ಕಿಸಬಹುದು ಎಂದು ಜಂಟಿ ಕೃಷಿ ನಿರ್ದೇಶಕ ಡಾ.ಕಿರಣ್‍ಕುಮಾರ್ ತಿಳಿಸಿದ್ದಾರೆ.

error: Content is protected !!