ಶಿರಾಳಕೊಪ್ಪ :
ಪ್ರತಿನಿತ್ಯ ಹೊಸ ಚರಿತ್ರೆಯನ್ನು ಹೊರಗೆ ಹಾಕುತ್ತಿರುವ ಕನ್ನಡ ನಾಡಿನ ಪ್ರಾಚೀನ ನೆಲೆಯಾದ ಸುಮಾರು 2 ಸಾವಿರ ವರ್ಷಗಳ ಇತಿಹಾಸ ಹೊಂದಿರುವ ತಾಳಗುಂದ ಗ್ರಾಮವನ್ನು ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪನಿ ದತ್ತು ಪಡೆದಿದೆ.
ಈ ಸಂಸ್ಥೆಯು ಭಾರತ ಸರ್ಕಾರದ ಅಧೀನ ಸಂಸ್ಥೆಯಾಗಿದ್ದು ಮೋಟಾರ್ ವಾಹನ , ಬೆಳೆವಿಮೆ , ಆರೋಗ್ಯ ವಿಮೆ ಸೇರಿದಂತೆ ಹಲವಾರು ವಿಧಧ ವಿಮಾ ಕ್ಷೇತ್ರದಲ್ಲಿ ತೋಡಗಿಸಿಕೊಂಡಿರುವ ಸಂಸ್ಥೆಯಾಗಿದ್ದು. ತನ್ನ ಸಂಸ್ಥೆಯ ಸಿಎಸ್‍ಆರ್ ನಿಧಿಯಲ್ಲಿ ಹಲವಾರು ಸಮಾಜ ಸೇವಾ ಕಾರ್ಯ ಮಾಡುತ್ತಿದ್ದು, ಅದರಲ್ಲಿ ಗ್ರಾಮಗಳನ್ನು ದತ್ತು ಪಡೆಯುವ ಯೋಜನೆ ಸಹ ಒಂದಾಗಿದೆ. ಈ ಯೋಜನೆಯ ಅಡಿಯಲ್ಲಿ ಪ್ರತಿ ವರ್ಷ ರಾಜ್ಯದಲ್ಲಿ 2 ಗ್ರಾಮಗಳನ್ನು ದತ್ತು ಪಡೆಯಲಾಗುತ್ತದೆ, ಅದರಲ್ಲಿ ಈ ಬಾರಿ ತಾಳಗುಂದ ಸಹ ಒಂದಾಗಿದೆ.
ಈ ಯೋಜನೆಯ ಅಡಿಯಲ್ಲಿ ಸುಮಾರು ರೂ 25 ಲಕ್ಷ ವೆಚ್ಚದಲ್ಲಿ ವಿವಿಧ ಯೋಜನೆಗಳನ್ನು ಕೈಗೊಳ್ಳುತ್ತಿದೆ.
ಕನ್ನಡ ನಾಡಿನ ಪ್ರಾಚೀನ ವಿದ್ಯಾಕೇಂದ್ರವಾಗಿರುವ ತಾಳಗುಂದದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ರೂ 6.33 ಲಕ್ಷ ವೆಚ್ಚದಲ್ಲಿ ನೂತನವಾದ ಕಂಪ್ಯೂಟರ್ ಲ್ಯಾಬ್ ಹಾಗೂ ಹೈಟೆಕ್ ಸ್ಮಾಟ್ ಕ್ಲಾಸ್ ವ್ಯವಸ್ಥೆ ಕಲ್ಪಿಸುತ್ತಿದೆ. ಮಹಿಳೆಯರನ್ನು ಆರ್ಥಿಕವಾಗಿ ಸ್ವಾಲಂಭಿಗಳನ್ನಾಗಿ ಮಾಡಲು ರೂ 3.9ಲಕ್ಷ ವೆಚ್ಚದಲ್ಲಿ ಗ್ರಾಮದಲ್ಲಿಯೆ ಹೊಲಿಗೆ ತರಬೇತಿ ಕೇಂದ್ರವನ್ನು ಸ್ಥಾಪನೆ ಮಾಡಲಾಗುತ್ತಿದೆ. ನಾಗರಿಕರಿಗೆ ಕುಡಿಯುವ ನೀರಿನ ಬವಣೆ ತಪ್ಪಿಸಲು 2 ಕೊಳವೆ ಬಾವಿಗಳನ್ನು ಸಹ ಕೊರೆಸುತ್ತಿದ್ದಾರೆ. ರೂ 2.5 ಲಕ್ಷ ವೆಚ್ಚದಲ್ಲಿ ಸೋಲಾರ್ ಬೀದಿ ದೀಪಗಳನ್ನು ಅವಳವಡಿಸುತ್ತಿದ್ದು, ನಿರುದ್ಯೋಗಿ ಯುವಕರಿಗಾಗಿ ಕಂಪ್ಯೂಟರ್ ಕೌಶಲ್ಯ ತರಬೇತಿ ಕೇಂದ್ರ ತೆರೆಯವಾಗುತ್ತಿದೆ. ಆಸ್ಪತ್ರೆ, ಶಾಲೆ ಸೇರಿದಂತೆ ವಿವಿಧ ಕಡೆಗಳಲ್ಲಿ ಮಳೆ ಕೊಯ್ಲ ಘಟಕ ನಿರ್ಮಿಸಿ ಕೊಡುತ್ತಿದ್ದಾರೆ. ಗ್ರಾಮಸ್ಥರಿಗಾಗಿ ಆರೋಗ್ಯ ತಪಾಸಣೆ ಶಿಬಿರ ಹಾಗೂ ಸಸಿ ನೆಡುವ ಕಾರ್ಯವನ್ನು ಸಹ ಸಂಸ್ಥೆ ಕೈಗೊಳ್ಳುತ್ತಿದೆ.

ಕನ್ನಡದ ಪ್ರಾಚೀನ ಪರಂಪರೆಯನ್ನು ತನ್ನ ಗರ್ಭದಲ್ಲಿ ಹುದುಗಿಸಿಟ್ಟುಕೊಂಡಿರುವ ತಾಳಗುಂದ ಗ್ರಾಮದಲ್ಲಿ ಎಷ್ಟು ಕೆಲಸ ಮಾಡಿದರು ಸಹ ಕಡಿಮೆ ಎಂದೂ ಭಾಸವಾಗುತ್ತದೆ. ಇಲ್ಲಿ ವಾಸ ಮಾಡುತ್ತಿರುವ ಜನರ ಬದುಕು ಹಸನಾಗಬೇಕು,ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಲಭಿಸಬೇಕು, ನಿರುದ್ಯೋಗ ಹೊಡೆದೋಡಿಸಿ ಆರ್ಥಿಕ ಸ್ವಾಲಂಬನೆ ಸಾಧಿಸಲು ತಮ್ಮ ಸಂಸ್ಥೆ ಸೌಲಭ್ಯ ಕಲ್ಪಿಸಿಕೊಡುತ್ತಿದೆ ಎಂದೂ ಯುನೈಟೆಡ್ ಇಂಡಿಯಾ ಕಂಪನಿಯ ವಿಭಾಗೀಯ ಪ್ರಭಂದಕರಾದ ಎಂ.ಸುಧಾಮಣಿ ಹೇಳಿದರು.

ತಾಳಗುಂದ ಗ್ರಾಮವನ್ನು ದತ್ತು ಪಡೆದಿರುವುದು ತುಂಬಾ ಹರ್ಷದ ಸಂಗತಿಯಾಗಿದೆ. ಜಿಲ್ಲೆಗೆ ಕಳಸಪ್ರಾಯವಾಗಿರುವ ತಾಳಗುಂದ ಗ್ರಾಮದ ರಸ್ತೆ, ಚರಂಡಿ ಸೇರಿದಂತೆ ವಿವಿಧ ಮೂಲಸೌಕರ್ಯಕ್ಕಾಗಿ ಕೋಟ್ಯಾಂತರ ರೂಪಾಯಿ ಈಗಾಗಲೇ ವೆಚ್ಚ ಮಾಡಿದ್ದು. ಇದನ್ನು ಪ್ರವಾಸಿ ತಾಣವಾಗಿ ಪರಿವರ್ತಿಸಲು ಹಲವಾರು ಬಗೆಯ ಯೋಜನೆಗಳನ್ನು ರೂಪಿಸಿ ಸರ್ಕಾರದ ಅನುಮೋದನೆಗೆ ಕಳುಹಿಸಲಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.

error: Content is protected !!