ಪ್ರಕೃತಿಯಲ್ಲಿ ಸಸ್ಯಗಳಿಗೆ ಪೋಶಕಾಂಶಗಳನ್ನು ಹೀರಿಕೊಳ್ಳಲು ಸಹಾಯ ಮಾಡುವ ಹಲವಾರು ಉಪಯುಕ್ತ ಮಣ್ಣಿನ ಸೂಕ್ಷ್ಮ ಜೀವಿಗಳಿವೆ. ಸಮರ್ಥ ಜೀವಿಗಳನ್ನು ಆರಿಸಿ, ಅವುಗಳನ್ನು ಬೆಳೆಸುವ ಮೂಲಕ ಮತ್ತು ನೇರವಾಗಿ ಅಥವಾ ಬೀಜೋಪಚಾರ ಮೂಲಕ ಮಣ್ಣಿನಲ್ಲಿ ಸೇರಿಸಿ ಕೃಷಿಯಲ್ಲಿ ಅವುಗಳನ್ನು ಬಳಸಿಕೊಳ್ಳಬಹುದು.
ಜೈವಿಕ ಗೊಬ್ಬರಗಳ ಪ್ರಯೋಜನಗಳು
ಜೈವಿಕ ರಸಗೊಬ್ಬರಗಳಲ್ಲ್ಲಿ ದುಂಡಾಣು (ಬ್ಯಾಕ್ಟೀರಿಯಾ), ಶೀಲಿಂಧ್ರ ಮತ್ತು ಪಾಚಿಯ ಮೂಲದ ಸೂಕ್ಶ್ಮಜೀವಿಗಳು ಕಂಡುಬರುತ್ತವೆ ಹಾಗೂ ಅವುಗಳ ಕಾರ್ಯ ವಿಧಾನವು ಭಿನ್ನವಾಗಿರುತ್ತದೆ ಮತ್ತು ಇವುಗಳನ್ನು ಏಕಾಂಗಿಯಾಗಿ ಅಥವಾ ಸಂಯೋಜಿಸಿ ಕೃಷಿಯಲ್ಲಿ ಬಳಸಬಹುದು.
• ಜೈವಿಕ ಗೊಬ್ಬರಗಳು ಪ್ರಕೃತಿಯಲ್ಲಿ ಲಭ್ಯವಿರುವ ಸಾರಜನಕವನ್ನು ದ್ವಿದಳ ಧಾನ್ಯದ ಬೆಳೆಗಳ ಬೇರಿನಲಿ ಇರುವಂಥ ಗಂಟುಗಳ ಮುಖಾಂತರ ಮಣ್ಣಿಗೆ ಲಭ್ಯವಾಗುವಂತೆ ಮಾಡುತ್ತವೆ.
• ಜೈವಿಕ ಗೊಬ್ಬರಗಳು ಟ್ರೈಕಾಲಸಿಯಂ, ಕಬ್ಬಿಣ ಮತ್ತು ಅಲ್ಯೂಮಿನಿಯಂ ರಂಜಕಗಳಂತಹ ಕರಗದ ರಂಜಕಗಳನ್ನು ಬೆಳೆಗಳಿಗೆ ಲಭ್ಯವಾಗುವ ರೂಪಗಳಲ್ಲಿ ಕರಗಿಸುತ್ತವೆ.
• ಜೈವಿಕ ಗೊಬ್ಬರಗಳು ಮಣ್ಣಿನಲ್ಲಿ ಹಾರ್ಮೋನುಗಳು, ಚಯಾಪಚಯ ಕ್ರಿಯೆಗಳು ಉತ್ಪಾದಿಸುತ್ತವೆ ಹಾಗೂ ಬೇರಿನ ಬೆಳವಣಿಗೆಯನ್ನು ಉತ್ತೇಜಿಸುತ್ತವೆ ಮತ್ತು ಮಣ್ಣಿನ ಪದರಗಳಲ್ಲಿ ಇಡಿದುಕೊಂಡಿರುವ ರಂಜಕವನ್ನು ಬೆಳೆಗಳಿಗೆ ಸಿಗುವ ರೀತಿ ಲಭ್ಯವಾಗಿಸುತ್ತವೆ ಹಾಗೂ ಮಣ್ಣಿನ ಸಾವಯವ ಪಧಾರ್ಥಗಳನ್ನು ಕೊಳೆಯುವಂತೆ ಮಾಡಿ ಮಣ್ಣಿನಲಿ ಖನಿಜೀಕರಣಕ್ಕೆ ಸಹಾಯ ಮಾಡುತ್ತವೆ.
• ಬೀಜ ಅಥವಾ ಮಣ್ಣಿಗೆ ಜೈವಿಕ ಗೊಬ್ಬರವನ್ನು ಬಳಸಿದಾಗ ಬೆಳೆಗಳಿಗೆ ಪೆÇೀಶಕಾಂಶಗಳ ಲಭ್ಯತೆಯನ್ನು ಹೆಚ್ಚಿಸುತ್ತವೆ ಮತ್ತು ಮಣ್ಣು ಹಾಗೂ ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಬೀರದಂತೆ ಇಳುವರಿಯಲ್ಲಿ ಶೇಕಡಾ 10 ರಿಂದ 25 ರಷ್ಟು ಹೆಚ್ಚಿಸುತ್ತವೆ.
ಜೈವಿಕ ಗೊಬ್ಬರಗಳ ವಿಧಗಳು ಮತ್ತು ಲಕ್ಷಣಗಳು
ಸೂಕ್ಷ್ಮಜೀವಿಗಳ ಪ್ರಕಾರವನ್ನು ಆಧರಿಸಿ, ಜೈವಿಕ ಗೊಬ್ಬರಗಳನ್ನು ಈ ಕೆಳಗಿನಂತೆ ವರ್ಗೀಕರಿಸಬಹುದು:
• ಬ್ಯಾಕ್ಟೀರಿಯಾದ ಜೈವಿಕ ಗೊಬ್ಬರಗಳು: ಉದಾ. ರೈಜೋಬಿಯಂ, ಅಜೋಸ್ಪಿರಿಲಿಯಮ್, ಅಜೊಟೊಬ್ಯಾಕ್ಟರ್, ಫಾಸ್ಫೋಬ್ಯಾಕ್ಟೀರಿಯಾ.
• ಶಿಲೀಂಧ್ರ ಜೈವಿಕ ಗೊಬ್ಬರಗಳು: ಉದಾ. ಮೈಕೋರಿಜಾ
• ಪಾಚಿ ಜೈವಿಕ ಗೊಬ್ಬರಗಳು: ಉದಾ. ನೀಲಿ ಹಸಿರು ಪಾಚಿ (ಬಿಜಿಎ) ಮತ್ತು ಅಜೋಲ್ಲಾ.
• ಆಕ್ಟಿನಿಮೈಸೆಟ್ಸ್ ಜೈವಿಕ ಗೊಬ್ಬರ: ಉದಾ. ಫ್ರಾಂಕಿಯಾ.
ಜೈವಿಕ ಗೊಬ್ಬರವನ್ನು ಹೆಚ್ಚಾಗಿ ಪ್ರಯೋಗಾಲಯದಲ್ಲಿ ಉತ್ಪಾದಿಸಲಾಗುತ್ತದೆ ಮತ್ತು ಅದನ್ನು ಅಭಿರುದ್ಧಿಗೊಳಿಸಲಾಗುತದೆ. ಆದಾಗ್ಯೂ, ನೀಲಿ ಹಸಿರು ಪಾಚಿ ಮತ್ತು ಅಜೋಲ್ಲಾವನ್ನು ಕ್ಷೇತ್ರದಲ್ಲಿ ಸಾಮೂಹಿಕವಾಗಿ ಅಭಿರುದ್ಧಿಗೊಳಿಸಬಹುದು.
ಬೆಳೆಗಳಿಗೆ ಜೈವಿಕ ಗೊಬ್ಬರಗಳ ಬಳಕೆ
ಬೀಜೋಪಚಾರ
ಪ್ರತಿ ಪೆÇಟ್ಟಣ (200 ಗ್ರಾಂ) ಜೈವಿಕ ಗೊಬ್ಬರವನ್ನು 200 ಮೀ.ಲಿ. ಬೆಲ್ಲದ ದ್ರಾವಣದೊಂದಿಗೆ ಬೆರೆಸಿ ಒಂದು ಹೆಕ್ಟೇರಿಗೆ ಬೇಕಾದ ಬೀಜಗಳಿಗೆ ಲೇಪನ ಮಾಡಬೇಕು ನಂತರ 30 ನಿಮಿಷಗಳ ಕಾಲ ನೆರಳಿನಲ್ಲಿ ಒಣಗಿಸತ್ತಕ್ಕದು. ಜೈವಿಕ ಗೊಬ್ಬರದ ಜೊತೆ ಸಂಸ್ಕರಿಸಿದ ಅಥವಾ ಉಪಚರಿಸಿದ ಬೀಜಗಳನ್ನು 24 ಗಂಟೆಯಲಿ ಮಣ್ಣಿನಲ್ಲಿ ಬಿತ್ತಬೇಕು. 10 ಕಿ. ಲೋ. ಬೀಜಗಳನ್ನು ಉಪಚರಿಸಲು ಒಂದು ಪೆÇಟ್ಟಣ (200 ಗ್ರಾಂ ) ಜೈವಿಕ ಗೊಬ್ಬರವು ಬೇಕಾಗುತ್ತದೆ.
ಬೀಜೋಪಚಾರ
ನಾಟಿ ಮಾಡುವ ಸಸಿಗಳಲ್ಲಿ ಜೈವಿಕ ಗೊಬ್ಬರಗಳ ಉಪಚಾರ
ಈ ವಿಧಾನವನ್ನು ಸಸಿಗಳನ್ನು ನಾಟಿ ಮಾಡುವ ಬೆಳೆಗಳಲ್ಲಿ ಬಳಸಲಾಗುತ್ತದೆ. ಒಂದು ಹೆಕ್ಟೇರ್‍ಗೆ ಐದು ಪೆÇಟ್ಟಣ (1 .0 ಕಿ. ಲೋ. ) ಜೈವಿಕ ಗೊಬ್ಬರವನ್ನು 40 ಲೀಟರ್ ನೀರಿನೊಂದಿಗೆ ಬೆರೆಸಲಾಗುತ್ತದೆ. ನಾಟಿ ಮಾಡುವ ಸಸಿಗಳ ಬೇರುಗಳನ್ನು 5 ರಿಂದ 10 ನಿಮಿಷಗಳ ಕಾಲ ಜೈವಿಕ ಗೊಬ್ಬರ ಮತ್ತು ನೀರು ಬೆರಸಿದ ದ್ರಾವಣದಲ್ಲಿ ಅದ್ದಿ ನಂತರ ನಾಟಿಯನ್ನು ಮಾಡಬೇಕು. ಈ ವಿಧಾನದಲ್ಲಿ ಅಜೋಸ್ಪಿರಿಲಮ್ ಎಂಬ ಜೈವಿಕ ಗೊಬ್ಬರವನ್ನು ಬಳಸಲಾಗುತ್ತದೆ. ಹೆಚ್ಚಾಗಿ ಏಕದಳ ಧಾನ್ಯವಾದ ಭತ್ತದಲ್ಲಿ ಬಳಸಬಹುದು.
ಮಣ್ಣಿನ ಮತ್ತು ಕೊಟ್ಟಿಗೆ ಗೊಬ್ಬರದ ಜೊತೆ ಉಪಚಾರ
ಜೈವಿಕ ಗೊಬ್ಬರಗಳನ್ನು ಮಣ್ಣಿನಲ್ಲಿ ನೇರವಾಗಿ ಬೇರೆ ಗೊಬ್ಬರಗಳ ರೀತಿ ಬಳಸಬಹುದು ಹಾಗೂ ಕೊಟ್ಟಿಗೆ ಗೊಬ್ಬರದ ಜೊತೆ ಮಿಶ್ರಣ ಮಾಡಿ ಬಳಸಬಹುದು. ಮಣ್ಣಿನ ಅಗತ್ಯತೆಗೆ ಶಿಫಾರಸ್ಸು ಮಾಡಿದ ಜೈವಿಕ ಗೊಬ್ಬರಗಳನ್ನು 4 ಕಿ. ಲೋ. ಮತ್ತು 200 ಕಿ. ಲೋ. ಅನುಪಾತದಲ್ಲಿ ಕೊಟ್ಟಿಗೆ ಗೊಬ್ಬರ ಅಥವಾ ಕಾಂಪೆÇೀಸ್ಟ್ನಲ್ಲಿ ಬೆರೆಸಿ ರಾತ್ರಿಯಿಡೀ ಇಡಬೇಕು. ಈ ಮಿಶ್ರಣವನ್ನು ಬಿತ್ತನೆ ಅಥವಾ ನಾಟಿ ಸಮಯದಲ್ಲಿ ಮಣ್ಣಿನಲ್ಲಿ ಸೇರಿಸಬೇಕು.
ವೆಸಿಕ್ಯುಲರ್ ಅರ್ಬೆಸಿಕ್ಯುಲರ್ ಮೈಕೋರೈಝ ಜೈವಿಕ ಗೊಬ್ಬರದ ಬಳಕೆ
ಬಿತ್ತನೆ ಸಮಯದಲ್ಲಿ ಗಿಂಒ ಜೈವಿಕ ಗೊಬ್ಬರವನ್ನು ಮಣ್ಣಿನ ಕೆಳಗೆ 2-3 ಸೆಂ.ಮೀ. ಆಳದಲ್ಲಿ ಸೇರಿಸಿ ಅದರ ಮೇಲೆ ಬೀಜಗಳನ್ನು ಬಿತ್ತಬೇಕು ಹಾಗೂ ಕಸಿ ಮಾಡಲು ಕತ್ತರಿಸಿದ ಸಸ್ಯ ಭಾಗಗಳನ್ನು ಗಿಂಒ ಜೈವಿಕ ಗೊಬ್ಬರದ ಜೊತೆ ಸಂಪರ್ಕಿಸಿ ಕಸಿ ಮಾಡುವದರಿಂದ ಬೇಗ ಮೊಳೆಕೆ ಹಾಗೂ ಬೇರು ಹೊಡೆಯುವುದರ ಜೊತೆ ಯಾವುದೇ ರೋಗಗಳ ಸೋಂಕಿಗೆ ತುತ್ತಾಗುವುದಿಲ್ಲ. 1 ಮೀಟರ್ ಚದರ ಪ್ರದೇಶಕ್ಕೆ 100 ಗ್ರಾಂ ಗಿಂಒ ಜೈವಿಕ ಗೊಬ್ಬರ ಸಾಕಾಗುತ್ತದೆ, ನಾಟಿ ಮಾಡುವಾಗ ಪ್ರತಿ ಸಸಿಗಳಿಗೆ 20 ಗ್ರಾಂ ಗಿಂಒ ಜೈವಿಕ ಗೊಬ್ಬರವನ್ನು ಹಾಕಬೇಕು ಹಾಗೂ ಪ್ರತಿ ಹಣ್ಣು ಬಿಡುವ ಮರಗಳಿಗೆ 200 ಗ್ರಾಂ ಅಷ್ಟುಹಾಕಬೇಕು.
ನೀಲಿ ಹಸಿರು ಪಾಚಿಗಳ ಬಳಕೆ
ನಿಂತ ನೀರಿನ ಭತ್ತದ ತಾಕುಗಳಲ್ಲಿ ಒಣಗಿದ ಪಾಚಿಗಳ ಪದರವನ್ನು ಪ್ರತಿ ಹೆಕ್ಟೇರಿಗೆ 10 ಕಿ. ಲೋ. ಬಳಸಬೇಕು. ಈ ರೀತಿ ಪಾಚಿಗಳನ್ನು ನಾಟಿ ಮಾಡಿದ 2-6 ದಿನಗಳ ನಂತರ ಬಳಸಬೇಕು. ಪಾಚಿ ಬಳಸಿದ ನಂತರ ಸುಮಾರು 15-20 ದಿನಗಳವರೆಗೆ ಭತ್ತದ ತಾಕುಗಳನ್ನು ನೀರಿಲ್ಲದೆ ಬತ್ತಿಸಬಾರದು. ಈ ರೀತಿ ಮಾಡುವುದರಿಂದ ಭತ್ತದ ಗದ್ದೆಯಲ್ಲಿ ಸಾರಜನಕದ ಕೊರತೆ ಕಂಡು ಬರುವುದಿಲ್ಲ.
ಅಜೋಲ್ಲಾದ ಬಳಕೆ
ಅಜೋಲ್ಲಾವನ್ನು ಹಸಿರು ಗೊಬ್ಬರವಾಗಿ ಭತ್ತದ ತಾಕುಗಳಲ್ಲಿ ಉಪಯೋಗೀಸಬಹುದು. ಭತ್ತವನ್ನು ನಾಟಿ ಮಾಡುವ ಮೊದಲು ಪ್ರತಿ ಹೆಕ್ಟೇರಿಗೆ 6.25 -10.0 ಟನ್ ಅಜೋಲ್ಲಾವನ್ನು ಮಣ್ಣಿನಲ್ಲಿ ಸೇರಿಸಿ ಉಳುಮೆ ಮಾಡಬೇಕು. ಅಜೋಲಾವನ್ನು ಭತ್ತದ ಗದ್ದೆಯ ನಿಂತ ನೀರಿನಲ್ಲಿ ನಾಟಿಯಾದ 3 ದಿನಗಳ ನಂತರ ಪ್ರತಿ ಹೆಕ್ಟೇರಿಗೆ 1.25 ಟನ್ ಅಷ್ಟು ಹಾಕಿ 30 ದಿನಗಳವರೆಗೆ ಅಭಿರುದ್ಧಿಯಾಗಲು ಬಿಡಬೇಕು, ನಂತರ ಮೊದಲ ಕಳೆ ಕೀಳುವ ಸಮಯದಲ್ಲಿ ಮಣ್ಣಿನಲ್ಲಿ ಸೇರಿಸಬೇಕು.
ಜೈವಿಕ ಗೊಬ್ಬರಗಳ ಸಮರ್ಪಕ ಬಳಕೆಯು ಮಣ್ಣಿನ ಗುಣಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಇದರಿಂದಾಗಿ ಪರಿಸರವನ್ನು ರಕ್ಷಿಸುವುದರ ಜೊತೆಗೆ ಬೆಳೆಯಲ್ಲಿÉ ಇಳುವರಿಯನ್ನು ನಿರ್ವಹಿಸಲು ಕಡಿಮೆ-ವೆಚ್ಚದ ವಿಧಾನವನ್ನು ಒದಗಿಸುತ್ತದೆ.
ಭತ್ತದ ಗದ್ದೆಯಲ್ಲಿ ಅಜೋಲ್ಲಾದ ಬಳಕೆ
ಜೈವಿಕ ಗೊಬ್ಬರಗಳ ಸಮರ್ಪಕ ಬಳಕೆಯು ಮಣ್ಣಿನ ಗುಣಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಇದರಿಂದಾಗಿ ಪರಿಸರವನ್ನು ರಕ್ಷಿಸುವುದರ ಜೊತೆಗೆ ಬೆಳೆಯಲ್ಲಿÉ ಇಳುವರಿಯನ್ನು ನಿರ್ವಹಿಸಲು ಕಡಿಮೆ-ವೆಚ್ಚದ ವಿಧಾನವನ್ನು ಒದಗಿಸುತ್ತದೆ.
ಹೆಚ್ಚಿನ ಮಾಹಿತಿಗಾಗಿ ಸಂಪಕಿ೯ಸಿ
ಡಾ. ಅರುಣ್‍ಕುಮಾರ್ ಬಿ. ಆರ್.
ವಿಜ್ಞಾನಿ (ಮಣ್ಣು ವಿಜ್ಞಾನ)
ಕೃಷಿ ವಿಜ್ಞಾನ ಕೇಂದ್ರ, ಶಿವಮೊಗ್ಗ
ಸಂಪಕಿ೯ಸಿ: 9008898819