ಅನಾನಸ್ ಹಣ್ಣು ತುಂಬಾ ಉತ್ತಮವಾದ ಹಣ್ಣಾಗಿದ್ದು ಇದನ್ನು ಆಹಾರ ಕ್ರಮದಲ್ಲಿ ಸೇವಿಸಿದರೆ ಕೆಮ್ಮು ಶೀತ,ಅಸ್ತಮಾ ಮುಂತಾದ ಆರೋಗ್ಯ ಸಮಸ್ಯೆಗಳನ್ನುತಡೆಗಟ್ಟುವುದರ ತಡೆಗಟ್ಟಬಹುದಾಗಿದೆ.ಈ ಹಣ್ಣು ರುಚಿ ಮಾತ್ರವಲ್ಲ ಆರೋಗ್ಯಕ್ಕೂ ಕೂಡ ತುಂಬಾ ಒಳ್ಳೆಯದು. ಅನಾನಸ್ ಹಣ್ಣನ್ನು ಇಷ್ಟ ಪಡದವರು ತುಂಬಾ ವಿರಳ. ಈ ಹಣ್ಣಿನಿಂದ ಸಲಾಡ್, ಹೋಳಿಗೆ,ಉಪ್ಪಿನಕಾಯಿ,ಜಾಮ್,ಜ್ಯೂಸ್,ಗೊಜ್ಜು, ಐಸ್ ಕ್ರೀಮ್ ಹೀಗೆ ನಾನಾ ತರಹದ ಪದಾಥ೯ಗಳನ್ನು ಮಾಡಿ ಸವಿಯಬಹುದಾಗಿದೆ.ಅನಾನಸ್ ನಲ್ಲಿ ಝೀರೋ ಕೊಲೆಸ್ಟ್ರಾಲ್, ಅಗಿದ್ದು ವಿಟಮಿನ್ ಎ.ಬಿ.ಸಿ. ಪೋಟ್ಯಾಷಿಯಂ,ಮ್ಯಾಂಗನೀಸ್,ಸತು ಹಾಗು ದೇಹಕ್ಕೆ ಅಗತ್ಯವಾದ ಇನ್ನಿತರ ಖನಿಜಾಂಶಗಳು ಇದೆ.
ಅನಾನಸ್ ಹಣ್ಣಿನ್ನು ತಿನ್ನುದರಿಂದ ಆಗುವ ಲಾಭಗಳು
೧.ಈ ಹಣ್ಣು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದು: ಅನಾನಸ್ ನಲ್ಲಿ ವಿಟಮಿನ್ ಸಿ ಅಧಿಕವಾಗಿರುವುದರಿಂದ ದೇಹದಲ್ಲಿರುವ ಜೀವಕಣಗಳು ಹಾನಿಯಾಗುವುದನ್ನು ತಡೆಗಟ್ಟಿ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.ದೇಹಕ್ಕೆ ವಿಟಮಿನ್ ಸಿ ದೊರೆಯುವುದರಿಂದ ಸಂಧಿವಾತ ಹೃದಯ ಸಮಸ್ಯೆ ಉಂಟಾಗದಂತೆ ದೇಹವನ್ನು ರಕ್ಷಣೆ ಮಾಡುತ್ತದೆ.
೨.ಮೂಳೆಗಳ ಆರೋಗ್ಯಕ್ಕೆ ತುಂಬಾ ಒಳ್ಳೆಯದು: ಅನಾನಸ್ ನಲ್ಲಿ ವಿಟಮಿನ್ ಸಿ ಜೊತೆಗೆಸಾಕಷ್ಟು ಪ್ರಮಾಣದಲ್ಲಿ ಮ್ಯಾಂಗನೀಸ್ ಇರುವುದರಿಂದಮೂಳೆಗಳ ಬಲವನ್ನು ಹೆಚ್ಚಿಸುತ್ತದೆ.ಮೆನೋಪಾಸ್ ಬಳಿಕ ಮಹಿಳೆಯರಲ್ಲಿ ಮಂಡಿನೋವಿನ ಸಮಸ್ಯೆ ಕಂಡುಬರುವುದು ಇದನ್ನು ತಡೆಗಟ್ಟುವಲ್ಲಿ ಹಣ್ಣಿನಲ್ಲಿ ಸಿಗುವ ಮಾಂಗನೀಸ್ ತುಂಬಾ ಸಹಕಾರಿ.ದೇಹಕ್ಕೆ ಅಗತ್ಯವಿರುವ ಮ್ಯಾಂಗನೀಸ್ ನಲ್ಲಿ ಶೇಕಡಾ ೭೦ ರಷ್ಟುಇರುತ್ತದೆ.ಎಲ್ಲಾ ವಯೋಮಾನದವರಿಗೂ ಕೂಡ ರುಂಬಾ ತುಂಬಾ ಉಪಯುಕ್ತವಾದದು.
೩. ಸೈನಸ್ ನಿವಾರಣೆಗೆ ಪರಿಣಾಮಕಾರಿ ; ಮೂಗುಕಟ್ಟಿ ತಲೆನೋವು ಕಾಣಿಸಿಕೊಂಡಿದ್ದರೆ ಪೈನಾಪಲ್ ತುಂಬಾ ಒಳ್ಳೆಯದು.ಇದರಲ್ಲಿರುವ ಬ್ರೊಮೆಲೈನ್ ಮೂಗು ಕಟ್ಟುವುದನ್ನು ತಡೆಗಟ್ಟಿ ತಲೆನೋವು ಉಂಟಾಗದಂತೆ ತಡೆಯುತ್ತದೆ.
೪. ರಕ್ತ ಹೆಪ್ಪುಗಟ್ಟುವುದನ್ನು ತಡೆಗಟ್ಟುವುದನ್ನು ತಡೆಯಲು ಸಹಕಾರಿ: ಪೈನಾಪಲ್ ರಕ್ತ ಹೆಪ್ಪುಗಟ್ಟುವುದನ್ನು ತಡೆಗಟ್ಟುವುದರಿಂದ ಹೃದಯದ ಆರೋಗ್ಯಕ್ಕೆ ಒಳ್ಳೆಯದು.
೫. ಮಾನಸಿಕ ಒತ್ತಡವನನ್ನು ಕಡಿಮೆ ಮಾಡುತ್ತದೆ; ಅನಾನಸ್ ನಲ್ಲಿ ವಿಟಮಿನ್ ಬಿ ಇದ್ದು ಮಾನಸಿಕ ಒತ್ತಡವನ್ನು ಕಡಿಮೆ ಮಾಡುವಲ್ಲಿ ಇದರ ಪಾತ್ರ ಮಹತ್ತರವಾದದು.ತುಂಬಾ ಮಾನಸಿಕ ಒತ್ತಡವಿದ್ದಾಗ ಅನಾನಸ್ ನ್ನು ತಿನ್ನುವುದರಿಂದ ಒತ್ತಡ ಕಡಿಮೆಯಾಗುತ್ತದೆ.
೬.ಕಣ್ಣಿನ ಆರೋಗ್ಯಕ್ಕೆ ತುಂಬಾ : ಇದರಲ್ಲಿ ಆಂಟಿಆಕ್ಸಿಡೆಂಟ್ ಹಾಗು ವಿಟಮಿನ್ ಸಿ ಇದ್ದು ಮ್ಯಾಕ್ಯೂಲರ್ ಡಿಜನರೇಷನ್ (ದೃಷ್ಟಿ ದೋಷ ತರುವ ಕಾಯಿಲೆ) ಎಂಬ ಸಮಸ್ಯೆಉಂಟಾಗುವುದನ್ನು ತಡೆ ಹಿಡಿಯುತ್ತದೆ.ಇದರಲ್ಲಿ ಬೀಟಾ ಕೆರೋಟಿನ್ ಅಂಶವಿದ್ದು ಈ ಹಣ್ಣನ್ನು ಸೇವಿಸುವುದರಿಂದ ಕಣ್ಣಿನ ಆರೋಗ್ಯ ಕ್ಕೆ ತುಂಬಾ ಒಳ್ಳೆಯದು.
೭.ಶೀತ ಹಾಗು ಕೆಮ್ಮಿಗೆ ಉತ್ತಮವಾದ ಮನೆಮದ್ದು: ಅನಾನಸ್ ನಲ್ಲಿ ಬ್ರೋಮೆಲೈನ್ ಹಾಗು ವಿಟಮಿನ್ ಸಿ ಇರುವುದರಿಂದ ಕೆಮ್ಮು ಶೀತ ತಡೆಗಟ್ಟುವಲ್ಲಿ ಸಹಕಾರಿಯಾಗಿದೆ. ಇನ್ನೂ ಕಾಯಿಲೆ ಬಿದ್ದಾಗ ಪೈನಾಪಲ್ ಜ್ಯೂಸ್ ಕುಡಿಯುವುದರಿಂದ ಬೇಗನೆ ಚೇತರಿಸಿಕೊಳ್ಳಬಹುದು.
ಅನಾನಸ್ ಮ್ಯಾಂಗನೀಸ್ ನಂತಹ ನಿಯಾಸಿನ್ಪಾಂ, ಟೋಥೆನಿಕ್ ಅಮ್ಲ, ವಿಟಮಿನ್ ಸಿ, ಬಿ ಸಂಕೀಣ೯ ಜೀವಸತ್ವಗಳನ್ನು ಮತ್ತು ಖನಿಜಗಳನ್ನು ಮಧ್ಯಮ ಪ್ರಮಾಣದಲ್ಲಿ ಹಣ್ಣನ್ನು ಸೂಪರ್ ಆಕ್ಸೈಡ್ ಮ್ಯುಟೇಶ್ ಕಿಣ್ವವನ್ನು ದೇಹದಿಂದ ಹೊರತೆಗೆಯಲು ಬಳಸಲಾಗುವುದು. ಅದು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ತಾಜಾ ಹಣ್ಣಿನ ಪೌಷ್ಟಿಕಾಂಶಗಳ ವಿವರ
ಎನಜಿ೯; 34 ಕಿಲೋ ಕ್ಯಾಲರಿ | ಕಾಬೋ ಹೈಡ್ರೇಟ್ ಗಳು: 8.6 ಗ್ರಾಂ | ಪ್ರೋಟೀನ್:0.84 ಗ್ರಾಂ | ಒಟ್ಟು ಕೊಬ್ಬು 0.19 ಗ್ರಾಂ | ಕೊಲೆಸ್ಟಾಲ್ 0 ಮಿಲಿ ಗ್ರಾಂ | ಡಯಟರಿ ಪೈಬರ್ 0.9 ಗ್ರಾಂ | ವಿಟಮಿನ್ 3382 ಐಯು | ವಿಟಮಿನ್ ಸಿ 36.7 ಮಿಲಿ ಗ್ರಾಂ | ವಿಟಮಿನ್ ಇ 0.05 ಮಿಲಿ ಗ್ರಾಂ| ಪೋಟಾಷಿಯಂ 267 ಮಿಲಿ ಗ್ರಾಂ | ಕ್ಯಾಲ್ಸಿಯಂ 9 ಮಿಲಿ ಗ್ರಾಂ | ಐರನ್ 0,21 ಗ್ರಾಂ
ಹೆಚ್ಚಿನ ಮಾಹಿತಿಗಾಗಿ ಸಂಪಕಿ೯ಸಿ:
ಡಾ. ಜ್ಯೋತಿ ಎಂ. ರಾಠೋಡ್, ವಿಜ್ಞಾನಿ (ಗೃಹ ವಿಜ್ಞಾನ), ಕೆ.ವಿ.ಕೆ., ಶಿವಮೊಗ್ಗ , 93539 78995