ಶಿವಮೊಗ್ಗ, ಜನವರಿ 26 : ರಾಜ್ಯದಾದ್ಯಂತ ಅರಣ್ಯ ಇಲಾಖೆಯ ವಿವಿಧ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಸಂಘಟಿತರಾಗಿರುವ ಅರಣ್ಯ ಇಲಾಖೆ ಸಿಬ್ಬಂಧಿಗಳು ಸಂಘಟಿತರಾಗಿ ನ್ಯಾಯೋಚಿತವಾಗಿ ತಮಗೆ ದೊರೆಯಬೇಕಾದ ಸೌಲಭ್ಯಗಳ ಕುರಿತು ಚಿಂತನ-ಮಂಥನ ನಡೆಸಬೇಕಾದ ಅಗತ್ಯವಿದೆ ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಟಿ.ಬಾಲಚಂದ್ರ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಅವರು ಇಂದು ರಾಜ್ಯ ಸರ್ಕಾರಿ ನೌಕರರ ಸಂಘವು ಅರಣ್ಯ ಇಲಾಖೆಯ ಸಹಯೋಗದೊಂದಿಗೆ ನೌಕರರ ಸಂಘದ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಅರಣ್ಯ ಇಲಾಖಾ ನೌಕರರ ಸಮಸ್ಯೆಗಳ ಚಿಂತನ-ಮಂಥನ, ಆರೋಗ್ಯ ಕಾರ್ಡ್, ಕ್ಯಾಲೆಂಡರ್ ಮತ್ತು ಡೈರಿ ಬಿಡುಗಡೆ ಕಾಂiÀರ್iಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಅರಣ್ಯ ಇಲಾಖೆಯ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರ ಜೀವನ ನಿರ್ವಹಣೆ ಅಷ್ಟೊಂದು ಆಶಾದಾಯಕವಾಗಿಲ್ಲ. ಸ್ವಂತ ಮನೆ, ನಿವೇಶನ ಹೊಂದುವ ಕನಸು ಕನಸಾಗಿಯೇ ಉಳಿದಿದೆ. ಇಂತಹ ಸಂದರ್ಭದಲ್ಲಿ ಸಂಘಟಿತ ನೌಕರರ ಸಮುದಾಯ ಸುಲಭ, ಸರಳ ವಿಧಾನದಲ್ಲಿ ಆಸೆ-ಅಭಿಲಾಷೆಗಳನ್ನು ಈಡೇರಿಸಿಕೊಳ್ಳುವಲ್ಲಿ ಯತ್ನಿಸಬೇಕು. ಈಗಾಗಲೇ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರ ನೇತೃತ್ವದಲ್ಲಿ ಅಸ್ತಿತ್ವಕ್ಕೆ ಬಂದಿರುವ ಗೃಹ ನಿರ್ಮಾಣ ಸಹಕಾರ ಸಂಘದಿಂದ ಸಹಸ್ರಾರು ಸಂಖ್ಯೆಯ ನೌಕರರು ಸ್ವಂತ ಮನೆ, ನಿವೇಶನ ಹೊಂದಲು ಸಾಧ್ಯವಾಗಿರುವುದು ಸಂತಸದ ಸಂಗತಿ. ಅಗತ್ಯವಿದ್ದಲ್ಲಿ ನೌಕರರ ಸಂಘದ ಅಧ್ಯಕ್ಷರ ಸಲಹೆಯನ್ನು ಪಡೆದು ಮುಂದುವರೆಯುವಂತೆ ಅವರು ಸೂಚಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರು ಮಾತನಾಡಿ, ರಾಜ್ಯ ಸರ್ಕಾರದ ಯಾವುದೇ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಯಾವುದೇ ಶ್ರೇಣಿಯ ಹಿತ ಕಾಯುವಲ್ಲಿ ಸಮರ್ಥವಾಗಿದ್ದು, ಸಕಾಲಿಕ ನಿರ್ಣಯ ಕೈಗೊಂಡು ನ್ಯಾಯೋಚಿತ ಹೋರಾಟದ ರೂಪು-ರೇಷೆಗಳನ್ನು ಸಿದ್ದಪಡಿಸುತ್ತದೆ ಮಾತ್ರವಲ್ಲ ನೌಕರರ ಕಾರ್ಯಕ್ಷೇತ್ರದಲ್ಲಿ ಉತ್ತಮ ವಾತಾವರಣ ನಿರ್ಮಾಣ, ಅಗತ್ಯಕ್ಕೆ ಪೂರಕವಾಗಿ ತರಬೇತಿಗಳು ಹಾಗೂ ನೌಕರರ ಕುಟುಂಬದ ಅವಲಂಬಿತರಿಗಾಗಿ ಮನೋರಂಜನಾ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಿದೆ. ಇದರೊಂದಿಗೆ ನೌಕರರಿಗಾಗಿ ಕಳೆದ ಕೆಲವು ವರ್ಷಗಳಲ್ಲಿ ಅನೇಕ ಕ್ರೀಡೆ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿ ಯಶಸ್ಸು ಸಾಧಿಸಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದವರು ನುಡಿದರು.
ಸರ್ಕಾರದ ಇತರೆ ಇಲಾಖೆಗಳ ಅಧಿಕಾರಿ-ಸಿಬ್ಬಂಧಿಗಳಿಗೆ ಈಗಾಗಲೇ ಹಂಚಿಕೆ ಮಾಡಲಾಗುತ್ತಿರುವ ವಿಧಾನದಲ್ಲಿಯೇ ನಿವೇಶನಗಳನ್ನು ಒದಗಿಸಲು ಹಾಗೂ ಅಪಾರ್ಟ್‍ಮೆಂಟ್ ಮಾದರಿಯಲ್ಲಿ ಮನೆ ನಿರ್ಮಿಸಲು ಯತ್ನಿಸಲಾಗುವುದು. ಅಂತೆಯೇ ಅರಣ್ಯ ಸಿಬ್ಬಂಧಿಗಳ ಅಗತ್ಯಗಳಿಗೆ ಬ್ಯಾಂಕ್, ಸೊಸೈಟಿ ಮುಂತಾದವುಗಳನ್ನು ಆರಂಭಿಸಲು ಅಗತ್ಯ ಕ್ರಮವಹಿಸಲಾಗುವುದು. ಅಲ್ಲದೇ ನೌಕರರ ಜೇಷ್ಠತೆ, ವೃಂದ ಸಮಸ್ಯೆಗಳ ಬಗೆಗೆ ಅರಿವಿದ್ದು, ಅವುಗಳನ್ನು ತ್ವರಿತಗತಿಯಲ್ಲಿ ಇತ್ಯರ್ಥಪಡಿಸಲು ಯತ್ನಿಸಲಾಗುವುದು ಎಂದ ಅವರು, ಅನಾವಶ್ಯಕವಾಗಿ ಅರಣ್ಯ ಸಿಬ್ಬಂಧಿಗಳ ಮೇಲೆ ಕಿರಿಕಿರಿ ಮಾಡುವುದನ್ನು ಸಹಿಸಿಕೊಳ್ಳಲಾಗುವುದಿಲ್ಲ. ಮಾನವೀಯ ನೆಲೆಗಟ್ಟಿನಲ್ಲಿ ವ್ಯವಹರಿಸಬೇಕು. ತಮ್ಮ ಕಾರ್ಯಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರಾಮಾಣಿವಾಗಿ ಕಾರ್ಯನಿರ್ವಹಿಸುವ ಅರಣ್ಯ ಸಿಬ್ಬಂಧಿಗಳಿಗೆ ಜನಪ್ರತಿನಿಧಿಗಳು ಅನಾವಶ್ಯಕವಾಗಿ ಕರ್ತವ್ಯಕ್ಕೆ ಅಡ್ಡಿಪಡಿಸದೇ ಸಹಕರಿಸುವಂತೆ ವಿನಂತಿಸಿದರು.
ಕಾರ್ಯಕ್ರಮದಲ್ಲಿ ಶಿವಮೊಗ್ಗ ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ ಆಂತೋನಿ ಮರಿಯಪ್ಪ ಅವರು ಆರೋಗ್ಯ ಕಾರ್ಡನ್ನು ಬಿಡುಗಡೆಗೊಳಿಸಿದರು. ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಟಿ.ಚಂದ್ರಶೇಖರ್ ಮತ್ತು ಜಾಗ್ರತ ಅರಣ್ಯ ಸಂಚಾರಿದಳದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎ.ಶ್ರೀಧರ್‍ನಾಯ್ಕ್ ಅವರು ಕ್ಯಾಲೆಂಡರ್ ಬಿಡುಗಡೆಗೊಳಿಸಿದರು. ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಚಲುವರಾಜ್ ಮಳವಳ್ಳಿ ಮತ್ತು ದೇಸಾಯಿ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವಿ.ಶಿವಶಂಕರ್ ಅವರು ಡೈರಿಯನ್ನು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳಾದ ಮುಕುಂದಚಂದ್ರ, ಸಿ.ವೈ.ಶಿವಮೂರ್ತಿ, ಎನ್.ರಘುರಾಮ ದೇವಾಡಿಗ, ಐ.ಎಂ.ನಾಗರಾಜ ನಾಯ್ಕ್, ರಾಜೇಶ್, ಜಿ.ಹನುಮಂತಯ್ಯ, ಕೃಷ್ಣೇ ಅಣ್ಣೇಗೌಡ, ಹೆಚ್.ಆರ್.ನಾಗಭೂಷಣ್, ಶ್ರೀನಿವಾಸ್, ಹಬೀಬುಲ್ಲಾ, ಫಾರೂಕ್‍ಬಾಷಾ, ಗಂಗಾಧರ್, ನೌಕರರ ಸಂಘದ ಗೌರವಾಧ್ಯಕ್ಷ ಎಸ್.ವೈ.ರಮೇಶ್, ಕೋಶಾಧ್ಯಕ್ಷ ಐ.ಪಿ.ಶಾಂತರಾಜ್, ಹಿರಿಯ ಉಪಾಧ್ಯಕ್ಷೆ ಬ್ರಿಜೆಟ್ ವರ್ಗೀಸ್, ಡಿ.ಬಿ.ರುದ್ರಪ್ಪ, ದಿನೇಶ್ ಮುಂತಾದವರು ಉಪಸ್ಥಿತರಿದ್ದರು.

error: Content is protected !!