ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘದ ಪ್ರತಿಷ್ಠಿತ ಡಾ.ಸಾರಾ ಅಬೂಬಕ್ಕರ್ ದತ್ತಿನಿಧಿ ಪ್ರಶಸ್ತಿಯನ್ನು 2020-21 ನೇ ಸಾಲಿಗೆ ಡಾ.ಪವಿತ್ರಾರಿಗೆ ನೀಡಲಾಗಿದೆ. ಈ ಬಾರಿ ವಿಜ್ಞಾನ ಸಾಹಿತ್ಯ ವಿಭಾಗಕ್ಕಾಗಿ ಪ್ರಶಸ್ತಿಯನ್ನು ಮೀಸಲಾಗಿರಿಸಿತ್ತು. ಮಾರ್ಚ್ 23 ರಂದು ಮಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಡಾ.ಸಾರಾ ಅಬೂಬಕ್ಕರ್ ಅವರ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಡಾ.ಪವಿತ್ರ ಅವರ ಇತ್ತೀಚಿನ ಕೃತಿ ‘ಮನ ಮನೀಷೆ’ಯ ಹಿನ್ನಲೆಯಲ್ಲಿ ಅವರು 42 ಕೃತಿಗಳನ್ನು ತಮ್ಮ ಎರಡು ವೃತ್ತಿಗಳಾದ ಮನೋವೈದ್ಯಕೀಯ ಮತ್ತು ನೃತ್ಯಗಳ ಭಾಗವಾಗಿ ರಚಿಸಿರುವುದವನ್ನು, ವಿಜ್ಞಾನ ಸಾಹಿತ್ಯಕ್ಕೆ ಅವರ ಕೊಡುಗೆಯನ್ನು ಪರಿಗಣಿಸಿ ಇದನ್ನು ನೀಡಲಾಗಿದೆ ಎಂದು ಕರಾವಳಿ ಲೇಖಕಿಯರ ಸಂಘದ ಪ್ರಕಟಣೆ ತಿಳಿಸಿದೆ. ಪ್ರಶಸ್ತಿ 10,000 ರೂಪಾಯಿಗಳ ಗೌರವಧನ, ಪ್ರಶಸ್ತಿ ಫಲಕಗಳನ್ನು ಒಳಗೊಂಡಿದೆ.