ಅಭಿವೃದ್ಧಿಯ ಹೆಸರಿನಲ್ಲಿ ದಿನೇ ದಿನೇ ದೇಶದಲ್ಲಿ ಕಾಡು ಕಡಿಮೆಯಾಗುತ್ತಿದೆ. ಸರ್ಕಾರಗಳು ಕಾಡು ಉಳಿಸುವಲ್ಲಿಯೂ ಕೂಡ ಕೆಲವು ಪ್ರಯತ್ನಗಳನ್ನು ಮಾಡುತ್ತಿವೆ. ಅಂತಹುದರಲ್ಲಿ ಕೇಂದ್ರ ಸರ್ಕಾರ ರೂಪಿಸಿರುವ ಸಾಮಾಜಿಕ ಅರಣ್ಯ ಇಲಾಖೆಯ ‘ಕೃಷಿ ಪ್ರೋತ್ಸಾಹ ಯೋಜನೆ’ ಸಾಗರ ತಾಲ್ಲೂಕಿನಲ್ಲಿ ಹೆಚ್ಚು ಫಲವಂತಿಕೆಯನ್ನು ಕಾಣುತ್ತಿದೆ. ವಿದ್ಯಾವಂತ ಯುವಕರು ನಗರಗಳನ್ನು ಬಿಟ್ಟು ಮತ್ತೆ ತಮ್ಮ ಊರಿಗೆ ಮರಳಿ ಬರುತ್ತಿದ್ದಾರೆ. ಕಂಪ್ಯೂಟರ್ ಕೆಲಸ ಬಿಟ್ಟು ಕಾಡುಕೃಷಿಯ ಬಗ್ಗೆ ಮನಸ್ಸು ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ.
ಏನಿದು ಯೋಜನೆ?
ಸಾಮಾಜಿಕ ಅರಣ್ಯ ಇಲಾಖೆ 2017ರಲ್ಲಿ ಅರಣ್ಯ ಕೃಷಿ ಪ್ರೋತ್ಸಾಹ ಯೋಜನೆಯನ್ನು ಜಾರಿಗೆ ತಂದಿತು. ಇದು ಕೃಷಿಕರು ತಮ್ಮ ಜಮೀನಿನಲ್ಲಿಯೇ ಸಸಿಗಳನ್ನು ನೆಟ್ಟು ಅದನ್ನು ಬೆಳೆಸಲು ಪ್ರೋತ್ಸಾಹ ನೀಡುತ್ತದೆ. ಸಸಿಗಳನ್ನೂ ಸರ್ಕಾರವೇ ನೀಡುತ್ತದೆ. ಒಂದು ಗಿಡಕ್ಕೆ ಪ್ರಥಮ ವರ್ಷದಲ್ಲಿ 14 ಹಾಗೂ ದ್ವಿತೀಯ ಹಾಗೂ ತೃತೀಯ ವರ್ಷದಲ್ಲಿ ಗಿಡಕ್ಕೆ 7 ರೂಪಾಯಿಗಳನ್ನು ನೀಡುತ್ತದೆ. ಈ ಯೋಜನೆಯಲ್ಲಿ ಅರಣ್ಯಸಂಬಂಧೀ ಜೊತೆಗೆ ಫಲ ನೀಡುವ ಸಸಿಗಳನ್ನು ನೆಡಬೇಕಾಗುತ್ತದೆ. ನೆಲ್ಲಿ, ಅತ್ತಿ, ಗೇರು, ಮಾವು, ಸೀತಾಫಲ, ಪೇರಲೆ, ಹಲಸು, ನೇರಳೆ ಹೊಳೆ ದಾಸವಾಳ, ಧೂಪ, ಸಿಲ್ವರ್ ಓಕ್, ಶ್ರೀಗಂಧ, ಮಹಾಘನಿ ಹೀಗೆ ಸುಮಾರು 22ಕ್ಕೂ ಹೆಚ್ಚು ಜಾತಿಯ ಗಿಡಗಳನ್ನು ಇಲಾಖೆ ನೀಡಿ ಅವರಿಗೆ ಪ್ರೋತ್ಸಾಹಧನವನ್ನೂ ನೀಡುತ್ತದೆ. ಸಾಗರ ತಾಲ್ಲೂಕಿನಲ್ಲಿ ಈ ಯೋಜನೆಗೆ ಹೆಚ್ಚು ಸ್ಪಂದನೆ ದೊರೆತಿದ್ದು ಗಮನಾರ್ಹ ಸಾಧನೆಯಾಗಿದೆ.
ಬೆಟ್ಟದಲ್ಲಿ ಹೆಬ್ಬೇವು ಗುಡ್ಡಕ್ಕೆ ಮಣ್ಣು ಹೊತ್ತಂತೆ ಎನ್ನುವ ಗಾದೆ ಇದೆ. ಆದರೆ ಈ ಗಾದೆಯನ್ನೇ ಸುಳ್ಳು ಮಾಡಲು ಹೊರಟಿದ್ದಾರೆ ಸಸರವಳ್ಳಿಯ ಶ್ರೀವತ್ಸ. ತಮ್ಮ ಐದು ಎಕರೆ ಗುಡ್ಡದಲ್ಲಿ ಕೇಂದ್ರದ ಈ ಯೋಜನೆಯನ್ನು ಬಳಸಿಕೊಂಡು 800 ಹೆಬ್ಬೇವು ಮತ್ತು 2000 ಸಿಲ್ವರ್ ಗಿಡಗಳನ್ನು ಬೆಳೆಸಿದ್ದಾರೆ. ಈಗ ಅವು ಮೂರು ವರ್ಷದಲ್ಲಿ ಎತ್ತರವಾಗಿ ಬೆಳೆದಿವೆ. ಇವೆರಡೂ 7 ವರ್ಷಗಳಲ್ಲಿ ಕಟಾವಿಗೆ ಬರುತ್ತವೆ. ಪೇಪರ್, ಪ್ಲೇವುಡ್, ಬೆಂಕಿಪೊಟ್ಟಣ, ಊದಿನಕಡ್ಡಿ ಮುಂತಾದ ಕೆಲಸಗಳಿಗೆ ಈ ಮರಗಳನ್ನು ಬಳಸಲಾಗುತ್ತದೆ. ಸಂಬಂಧಪಟ್ಟ ಕಾರ್ಖಾನೆಗಳೇ ಇವರಲ್ಲಿಗೆ ಬಂದು ಕಚ್ಚಾವಸ್ತುಗಳನ್ನು ತೆಗೆದುಕೊಂಡುಹೋಗುತ್ತವೆ. ಎತ್ತರದ ಗುಡ್ಡಕ್ಕೆ ಹಸಿರು ಹೊಚ್ಚಿರುವ, ಅಲ್ಲಿಯೇ ತರಕಾರಿ ಬೆಳೆಯುವ ಎಂ.ಕಾಂ. ಪದವೀಧರ ಶ್ರೀವತ್ಸನ ಸಾಧನೆ ಮೆಚ್ಚುವಂಥದ್ದು.
ಕೇಂದ್ರದ ಯೋಜನೆಯಲ್ಲಿ ಶ್ರೀಗಂಧ
ಸಾಗರ ತಾಲ್ಲೂಕಿನ ಹೊಸಳ್ಳಿಯ ಅಶೋಕ್ ತಮ್ಮ ಎರಡು ಎಕರೆ ಜಾಗದಲ್ಲಿ 1,000 ಸಿಲ್ವರ್ ಹಾಗೂ 800 ಶ್ರೀಗಂಧ ಗಿಡಗಳು ಮತ್ತು ಅದಕ್ಕೆ ತಾಗಿಕೊಂಡಂತೆ ಮೆಣಸಿನಬಳ್ಳಿಗಳನ್ನು ಮೂಡಿಸಿದ್ದಾರೆ. ನೀರಿಗೆ ಹೊಂಡ ಮಾಡಿಕೊಂಡಿದ್ದಾರೆ. ಈಗಾಗಲೇ ಗಿಡಗಳು ಎತ್ತರಕ್ಕೆ ಬರುತ್ತಿವೆ. ಶ್ರೀಗಂಧದ ಗಿಡಗಳನ್ನು ಉತ್ತಮವಾಗಿ ಕಾಪಾಡಿಕೊಂಡು ಬಂದಿದ್ದಾರೆ. ಕೇಂದ್ರ ಸರ್ಕಾರದ ಯೋಜನೆಯಲ್ಲಿ ಹಣ ಇವರ ಖಾತೆಗೇ ಜಮೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಶ್ರೀಗಂಧದ ಕೊರತೆ ಹೆಚ್ಚಿದ್ದು ಕುಶಲಕರ್ಮಿಗಳು ವ್ಯವಸ್ಥಿತ ಕೆಲಸವಿಲ್ಲದೇ ಸಮಸ್ಯೆಗೊಳಗಾಗಿದ್ದಾರೆ. ಇಂತಹ ಪರ್ಯಾಯ ಚಿಂತನೆ ಉತ್ತಮ ಬೆಳವಣಿಗೆ.
ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ವಿದ್ಯಾವಂತ ಯುವಜನರು ಕೇಂದ್ರ ಪುರಸ್ಕøತ ಕೃಷಿ ಯೋಜನೆಯಲ್ಲಿ ತೊಡಗಿಕೊಂಡು ಯಶಸ್ಸು ಸಾಧಿಸುತ್ತಿದ್ದಾರೆ. ಪ್ರೋತ್ಸಾಹಧನ ಅವರ ಖಾತೆಗಳಿಗೇ ಜಮೆಯಾಗುತ್ತಿದೆ. ಇದು ಅತ್ಯಂತ ಉಪಯುಕ್ತ ಯೋಜನೆಯಾಗಿದ್ದು ರೈತರ ಸ್ವಾವಲಂಬಿ ಚಿಂತನೆಗೆ ಪೂರಕವಾಗಿದೆ. ಈಗಾಗಲೇ ಮೂರು ವರ್ಷಗಳಲ್ಲಿ 416 ಫಲಾನುಭವಿಗಳು 1,54,697 ಸಸಿಗಳನ್ನು ಪಡೆದುಕೊಂಡಿದ್ದು ಫಲಾನುಭವಿಗಳ ಖಾತೆಗೆ ಒಟ್ಟು 11,64,981 ರೂಪಾಯಿ ನೇರವಾಗಿ ಜಮಾ ಆಗಿರುತ್ತದೆ.

ನೂತನ್‍ಕುಮಾರ್ ಎಸ್., ವಲಯ ಅರಣ್ಯಾಧಿಕಾರಿ,ಸಾಗರ ತಾಲ್ಲೂಕಿನ ಸಸರವಳ್ಳಿಯಲ್ಲಿ ನನ್ನದು ಗುಡ್ಡದಂತಹ ಇಳಿಜಾರಿನ ಜಾಗ. ಇಲ್ಲಿ ಸಿಲ್ವರ್ ಮತ್ತು ಹೆಬ್ಬೇವನ್ನು ಕೇಂದ್ರ ಸರ್ಕಾರದ ಪುರಸ್ಕøತ ಯೋಜನೆಯಲ್ಲಿ ಬೆಳೆದಿದ್ದೇನೆ. ಈಗ ಅವು ಎತ್ತರವಾಗಿವೆ. ಅಲ್ಲದೆ ಇಲ್ಲಿ ತರಕಾರಿ ಬೆಳೆದಿದ್ದೇನೆ. ಅಷ್ಟೇ ಅಲ್ಲ, ನೀರಿನ ಅನುಕೂಲವನ್ನೂ ರಾಜ್ಯ ಸರ್ಕಾರದ ಯೋಜನೆಯಲ್ಲಿ ರೂಢಿಸಿಕೊಂಡಿದ್ದೇನೆ. ಬೋಳಾಗಿದ್ದ ಗುಡ್ಡ ಈಗ ಹಸಿರಿನಿಂದ ಕಂಗೊಳಿಸುತ್ತಿದೆ. ಕೇರಳದಲ್ಲಿ ಜೌಗು ಪ್ರದೇಶದಲ್ಲಿ ಬೆಳೆ ಬೆಳೆಯುತ್ತಾರೆ. ನಾವೇಕೆ ಪ್ರಯತ್ನ ಮಾಡಬಾರದು ಎಂದು ಚಿಂತಿಸಿ ಕೆಲಸದಲ್ಲಿ ತೊಡಗಿದೆ. ಈಗ ಅದು ಫಲ ತಂದುಕೊಟ್ಟಿದೆ.ಶ್ರೀವತ್ಸ, ಎಂ.ಕಾಂ. ಪದವೀಧರ, ಫಲಾನುಭವಿ
ಸಾಗರದ ಸಾಮಾಜಿಕ ಅರಣ್ಯ ಇಲಾಖೆಯ ಅಧಿಕಾರಿಗಳು ನನ್ನ ಎರಡು ಎಕರೆ ಜಾಗದಲ್ಲಿ ಉಪಯುಕ್ತ ಬೆಳೆಯನ್ನು ಬೆಳೆಯಲು ಪ್ರೋತ್ಸಾಹಧನವನ್ನೂ ನೀಡಿದ್ದಾರೆ. 800 ಶ್ರೀಗಂಧದ ಗಿಡಗಳು ಎತ್ತರವಾಗುತ್ತಿವೆ. ಅವುಗಳನ್ನು ಕಾಪಾಡುವಲ್ಲಿ ಸಹ ಭದ್ರತೆಯ ಬೇಲಿಯನ್ನು ಮಾಡಿಕೊಂಡಿದ್ದೇನೆ. ಸಿಲ್ವರ್ ಮತ್ತು ಕಾಳುಮೆಣಸು ಜೊತೆಯಲ್ಲಿ ಬೆಳೆಯುತ್ತಿದ್ದೇನೆ. ಕೇಂದ್ರ ಸರ್ಕಾರದ ಈ ಉಪಯುಕ್ತ ಯೋಜನೆ ನಮ್ಮಂತಹ ರೈತರಿಗೆ ವರದಾನವಾಗಿದೆ.
ಅಶೋಕ್, ಹೊಸಳ್ಳಿ, ಫಲಾನುಭವಿ ಸರ್ಕಾರದ ಈ ಯೋಜನೆ ಸಾಗರ ತಾಲ್ಲೂಕಿನಲ್ಲಿ ನಿಧಾನವಾಗಿ ಗಣನೀಯ ಪ್ರಗತಿಯತ್ತ ಸಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಸಮುದಾಯ, ಬುಡಕಟ್ಟು ಸಮುದಾಯಗಳು ಕೂಡ ಈ ಯೋಜನೆಯಲ್ಲಿ ತೊಡಗಿಕೊಂಡಿದ್ದು ಇದು ಇನ್ನೂ ಫಲಪ್ರದವಾಗಬೇಕು, ಹೆಚ್ಚು ಜನರನ್ನು ತಲುಪಬೇಕು ಎಂಬುದು ಕೃಷಿಕರ ಆಶಯವಾಗಿದೆ.

ಶಿವಮೊಗ ವಲಯ ಅರಣ್ಯ ಉಪ ಸಂರಕ್ಷಣಾಧಿಕಾರಿ ನಟರಾಜ ದೇಸಾಯಿ ಯೋಜನೆಯಡಿ ಅತ್ಯಂತ ವ್ಯವಸ್ತಿತವಾಗಿ ನಸ೯ರಿಗಳಲ್ಲಿ ಬೆಳಸಿದ ಕಾಡು ಜಾತಿಯ ಗಿಡಗಳನ್ಣು ರೈತರಿಗೆ ನೀಡಿ ಪ್ರತಿ ಗಿಡಕ್ಕೆ ಅನುದಾನ ನೀಡಲಾಗುತ್ತಿದೆ. ಈ ಯೋಜನೆಯನ್ನು ಅನೇಕ ಯುವಕರು ಸಧ್ಭಳಕೆ ಮಾಡಿಕೊಂಡಿರುತ್ತಾರೆ ಎಂದು ತಿಳಿಸಿದರು.

error: Content is protected !!