ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ, ಕೃಷಿ ಇಲಾಖೆ (ಜಲಾನಯನ ಅಭಿವೃದ್ಧಿ) ಮತ್ತು ಚೈತನ್ಯ ರೂರಲ್ ಡೆವಲಪ್‍ಮೆಂಟ್ ಸೊಸೈಟಿ (ರಿ.), ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ರೈತ ಉತ್ಪಾದಕ ಸಂಸ್ಥೆಗಳ ರಚನೆ ಮತ್ತು ವ್ಯಾಪಾರ ಅಭಿವೃದ್ಧಿ ಅನುಷ್ಠಾನ ಯೋಜನೆ ಆಡಿ ರೈತ ಉತ್ಪಾದಕ ಸಂಸ್ಥೆಗಳ ನಿರ್ದೇಶಕರುಗಳಿಗೆ ಏರ್ಪಡಿಸಿದ ಎರಡು ದಿನಗಳ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಉದ್ಘಾಟನೆಯನ್ನು ಡಾ.ಎಂ.ಕೆ. ನಾಯ್ಕ್, ಗೌರವನ್ವಿತ ಕುಲಪತಿಗಳು, ಕೃಷಿ ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗ ಇವರು ನೆರವೇರಿಸಿ ಮಾತನಾಡುತ್ತಾ, ನಾವಿಂದು ಅತ್ಯಂತ ದೊಡ್ಡ ಪ್ರಮಾಣದಲ್ಲಿ ಉತ್ಪಾದನೆ ಮಾಡುತ್ತಿದ್ದೇವೆ. 2019-20 ರಲ್ಲಿ 30 ಲಕ್ಷ ಟನ್ ಮೆಕ್ಕೆಜೋಳ ಉತ್ಪಾದನೆ ಮಾಡಿದ್ದೇವೆ. ನಮ್ಮ ರಾಜ್ಯಕ್ಕೆ ನಾವೇ ಬಳಕೆ ಮಾಡುವುದಾದರೆ ಮೂರುವರೆ ಕೋಟಿ ಟನ್ ಏಕದಳ ಧಾನ್ಯಗಳು ಸಾಕು. ಹಾಗಿರುವಾಗ ಉಳಿದ ಉತ್ಪಾದನೆಗಳನ್ನು ಏನು ಮಾಡಬೇಕು? 1300 ಕೋಟಿ ಟನ್ ಕ್ಯಾಟಲ್ ಫೀಡ್, ಕೋಳಿ ಫೀಡ್‍ಗಳಿಗೆ ಹೋಯಿತು. ಮುಂದೆ….? ಗೊತ್ತಿಲ್ಲ ದೇಶಕ್ಕೆ ಆಹಾರ ಭದ್ರತೆ ನೀಡಿದ ರೈತರಿಗೆ ಆದಾಯ ಭದ್ರತೆಯೇ ಇಲ್ಲವಾಗಿದೆ. ಅದು ತಿಂಗಳಿಗೆ ಕನಿಷ್ಠ 20000 ವಾದರೂ ಆಗಬೇಕೆಂಬುದು ಸಾಮಿನಾಥನ್ ಅವರ ಇಚ್ಛೆ, ಅದಕ್ಕಾಗಿ ನಿಮ್ಮೊಳಗೆ ಸಂಧಾನ ಶಕ್ತಿ ಹೆಚ್ಚಲು ಒಂಟಿಯಾಗಿ ಮಾಡಲು ಸಾಧ್ಯವಿಲ್ಲ. ಅದಕ್ಕಾಗಿಯೇ ರೈತ ಸಂಘಟನೆ-ಮಾರಾಟವನ್ನೇ ಉದ್ದೇಶವಾಗಿಟ್ಟುಕೊಂಡು ರೈತ ಉತ್ಪಾದಕ ಸಂಸ್ಥೆಗಳು ಪ್ರಾರಂಭವಾಗಿವೆ ಎಂದು ಹೇಳಿದರು. ಮುಂದುವರೆದು, ರೈತರಿಗೆ ಸಿಗುವ ಅವಕಾಶಗಳ ಸಾಧ್ಯತೆಗಳನ್ನು ತಿಳಿಸಿದರು. ಉಳಿದ ಮೆಕ್ಕೆಜೋಳವನ್ನು ಹೈಡ್ರೋಫೋನಿಕ್ಸ್ ವಿಧಾನದಲ್ಲಿ ಮೇವನ್ನು ಬೆಳೆಯಬಹುದು. ಸ್ಟಾರ್ಚ್ ಉತ್ಪಾದನೆ ಮಾಡಿ ಸಂಗ್ರಹಿಸಬಹುದು. ಇವುಗಳಿಗೆಲ್ಲಾ ಘಟಕಗಳು ಬೇಕು. ಅವುಗಳಿಗೆ ತಂತ್ರಜ್ಞಾನ ಸಹಾಯ ಧನ ಏನೆಲ್ಲಾ ಕೊಡಲು ಕೃಷಿ ಇಲಾಖೆಗಳು ಸಿದ್ದವಾಗಿವೆ. ಅವುಗಳನ್ನು ಪಡೆದುಕೊಳ್ಳಲು ಸಂಘಟನೆ ಆಗಬೇಕು. ಒಬ್ಬರೇ ಮಾರುಕಟ್ಟೆಗೆ ಬಂದರೆ ಶೋಷಣೆಗೆ ಒಳಗಾಗುತ್ತಾರೆ. ಹೀಗಾಗಿ ರೈತ ಉತ್ಪಾದಕ ಸಂಸ್ಥೆಗಳಿಂದ ಮಾತ್ರ ರೈತರ ಉದ್ದಾರ ಸಾಧ್ಯ ಎಂದು ಹೊಸದಾಗಿ ನಿರ್ಮಾಣವಾದ ರೈತ ಉತ್ಪಾದಕ ಸಂಸ್ಥೆಗಳ ನಿರ್ದೇಶಕರುಗಳಿಗೆ ಹೇಳಿದರು. ಬೆಳೆಗೆ ಬೆಲೆ ನಿರ್ಧಾರ ಅದಕ್ಕಾಗಿ ಬೇಕಾದ ತಂತ್ರಜ್ಞಾನಗಳು ಯಾವುದು ಬೇಕೆಂಬ ನಿರ್ಧಾರ ಇವೆಲ್ಲಾ ರೈತರೇ ಮಾಡುವಂತಾಗಬೇಕು. ಅದಕ್ಕಾಗಿ ಸಂಘಟಿತರಾಗಬೇಕು. ವಿಶ್ವವಿದ್ಯಾಲಯಗಳ ವಿಜ್ಞಾನಿಗಳು ಹೇಳುವ ಸಲಹೆ ಸೂಚನೆಗಳನ್ನು ಅರಿತು ರೈತರುಗಳಿಗೆ ಇದು ಬೇಕೆ ಎಂಬುದನ್ನು ನೀವು ಅವರಿಗೆ ಮಾರ್ಗದರ್ಶನ ನೀಡಬೇಕು. ರೈತರುಗಳು ಯಾರದೋ ಸರ್ವಾಧಿಕಾರತ್ವಕ್ಕೆ ಒಳಪಡಬಾರದು ಎಂದು ಕರೆ ನೀಡಿದರು. ಕೆ.ಎಂ.ಎಫ್. ಮಾದರಿಯಲ್ಲಿ ರೈತರು ಸಂಘಟಿತರಾಗುವುರೊಂದಿಗೆ ಹೈಡ್ರೋಪೊನಿಕ್ ಸೆಂಟರ್‍ನ ಸದುಪಯೋಗ ಪಡಿಸಿಕೊಳ್ಳುವಂತೆ ಸೂಚಿಸಿದರು. ನೆರೆಯ ರಾಷ್ಟ್ರವಾದ ಅಮೇರಿಕಾ ದೇಶದಲ್ಲಿ ಉತ್ಪಾದನೆಗೊಳ್ಳುವ ಉತ್ತಮ ಗುಣಮಟ್ಟದ ಬೀಟ್‍ರೋಟ್ ಬೆಳೆಯ ಬೆಲೆಯನ್ನು ರೈತರೆ ನಿಗಧಿಪಡಿಸಿದ್ದರೆಂದು ತಿಳಿಸಿ ರೈತರಲ್ಲಿ ಹೊಸ ಆಲೋಚನೆ ಮೂಡುವಂತೆ ಮಾಡಿದರು. ರೈತರು ವೈಜ್ಞಾನಿಕವಾಗಿ ಬೆಳೆ ಬೆಳೆದು, ಬೆಲೆ ನಿಗಧಿ ಪಡಿಸುವಂತಾಗಬೇಕೆಂದು ಪ್ರೇರೇಪಿಸುವುದರೊಂದಿಗೆ ಅನ್ನದಾತರಿಗೆ ಆಹಾರ ಭದ್ರತೆಯೊಂದಿಗೆ ಆರ್ಥಿಕ ಭದ್ರತೆಯನ್ನು ರೈತರು ಸಂಘಟಿತವಾಗಿ ಪಡೆಯಬಹುದೆಂದು ತಿಳಿಸುತ್ತಾ, ಮೂಲಕ ರೈತರಲ್ಲಿ ಹೊಸ ಉತ್ಸಾಹ ತುಂಬಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಿವಮೊಗ್ಗದ ಜಂಟಿ ಕೃಷಿ ನಿರ್ದೇಶಕರಾದ ಡಾ. ಕಿರಣ್ ಕುಮಾರ್, ಎಂ. ರವರು ಮಾತನಾಡಿ ಇಂದು ಅನೇಕ ಎಫ್. ಪಿ. ಓ. ಗಳು ಯಶಸ್ವಿಯಾಗಿವೆ. ಹೆಚ್ಚಿನ ಗುಣಮಟ್ಟದ ಉತ್ಪನ್ನಗಳನ್ನು ಸೂಕ್ತ ಬೆಲೆಗೆ ಮಾರಟ ಮಾಡುವಂತೆ ಸಲಹೆ ನೀಡಿದರು. ಸರ್ಕಾದ ಅನೇಕ ಯೋಜನೆಗಳನ್ನು ಸಂಘಟಿತರಾಗಿ ಪಡೆಯಲು ಸಾಧ್ಯ. ಬೇಡಿಕೆ ಮತ್ತು ಉತ್ಪಾದನೆಗಳ ಬಗ್ಗೆ ಹೆಚ್ಚಿನ ಮಾಹಿತಿ ನೀಡುವುದರೊಂದಿಗೆ ಮಾರುಕಟ್ಟೆಯ ಬೇಡಿಕೆಗಳಿಗೆ ಅನುಸಾರ ಬೆಳೆ ಬೆಳೆಯುವುದು ಹೆಚ್ಚು ಸೂಕ್ತವೆಂದು ಸಲಹೆ ನೀಡಿದರು. ಕ್ಯಾನಿಂಗ್ ಫ್ಯಾಕ್ಟರಿಗಳು, ಇನ್ಕುಬೇಶನ್ ಸೆಂಟರ್‍ಗಳನ್ನು ಸ್ಥಳೀಯ ಮಟ್ಟದಲ್ಲಿ ಸ್ಥಾಪನೆಗೊಳಿಸಲು ರೈತರ ಒಗ್ಗೂಡುವಿಕೆಯಿಂದ ಮಾತ್ರ ಸಾಧ್ಯವೆಂದು ಎಚ್ಚರಿಸುವುದರೊಂದಿಗೆ ತಮ್ಮ ಬೆಳೆಗಳಿಗೆ ಸೂಕ್ತ ಬೆಲೆ ಪಡೆಯಬಹುದೆಂದು ತಿಳಿಸಿದರು.
ಡಾ.ಕಿರಣ್ ಕುಮಾರ್ ಆರ್. ಪಾಟೀಲ್, ಸಹಾಯಕ ಪ್ರಾಧ್ಯಾಪಕರು, ಕೃಷಿ ಅರ್ಥಶಾಸ್ತ್ರ ವಿಭಾಗ, ಕೃಷಿ ಮಹಾವಿದ್ಯಾಲಯ, ಶಿವಮೊಗ್ಗ, ಶ್ರೀಯುತ ಪೂರ್ಣಪ್ರಜ್ಞಾ ಬೇಳೂರು, ಕೃಷಿ ಬರಹಗಾರರು ಮತ್ತು ತರಬೇತುದಾರರು ಮತ್ತು ಶ್ರೀ ಮಲ್ಲೇಶ್, ಹೆಚ್.ಆರ್., ಇವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ, ರೈತ ಉತ್ಪಾದಕ ಸಂಸ್ಥೆಗಳಲ್ಲಿ ನಿರ್ದೇಶಕರುಗಳ ಪಾತ್ರ ಮತ್ತು ವ್ಯಾಪಾರದ ಕ್ರಿಯಾ ಯೋಜನೆ ಕುರಿತು ಮಾಹಿತಿ ನೀಡಿದರು.
ಉದ್ಘಾಟನಾ ಸಮಾರಂಭದಲ್ಲಿ ಶ್ರೀಯುತ ಕುಮಾರ ಕೆ.ಜಿ., ಸಹಾಯಕ ನಿರ್ದೇಶಕರು ಸೊರಬ ತಾಲ್ಲೂಕ್, ಶ್ರೀಯುತ ಕಿರಣ್ ಕುಮಾರ್ ಹರ್ತಿ, ಸಹಾಯಕ ಕೃಷಿ ನಿರ್ದೇಶಕರು, ಶಿಕಾರಿಪುರ ತಾಲ್ಲೂಕ್, ಡಾ. ಬಿ.ಸಿ ಹನುಮಂತಸ್ವಾಮಿ, ಹಿರಿಯ ವಿಜ್ಞಾನಿಗಳು ಹಾಗೂ ಮುಖ್ಯಸ್ಥರು, ಕೆವಿಕೆ, ಶಿವಮೊಗ್ಗ,. ಶ್ರೀಯುತ ಬಿ. ಓ. ಭದ್ರೀಶ್, ತರಬೇತುದಾರರು ಹಾಗೂ ಸಿಇಓ, ಚೈತನ್ಯ ಸಂಸ್ಥೆ, ಶಿವಮೊಗ್ಗ. ಶ್ರೀಯುತ ರಾಘವೇಂದ್ರ ಪ್ರಸಾದ್, ತರಬೇತುದಾರರು ಹಾಗೂ ಕಂಪ್ಲೇನ್ಸ್ ಮ್ಯಾನೇಜರ್ ಚೈತನ್ಯ ಸಂಸ್ಥೆ ಶಿವಮೊಗ್ಗ ಇವರು ಉಪಸ್ಥಿತರಿದ್ದರು
ಶ್ರೀಮತಿ ವಿಜಯಲಕ್ಷ್ಮೀಯವರು ಕಾರ್ಯಕ್ರಮದ ನಿರೂಪಣೆಯನ್ನು, ಶ್ರೀಮತಿ ಅಮೃತ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರನ್ನೂ ಶ್ರೀಯುತ ಬಿ ಟಿ ಭದ್ರೀಶ್, ತರಬೇತುದಾರರು ಹಾಗೂ ಸಿಇಓ, ಚೈತನ್ಯ ಸಂಸ್ಥೆ, ಶಿವಮೊಗ್ಗ ಇವರು ಸ್ವಾಗತಿಸಿದರು. ಶ್ರೀಮತಿ ಕೋಕಿಲ, ಚೈತನ್ಯ ಸಂಸ್ಥೆ ಶಿವಮೊಗ್ಗ ಇವರು ವಂದನಾರ್ಪಣೆಯನ್ನು ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲೆಯ ಐದು ರೈತ ಉತ್ಪಾದಕ ಸಂಸ್ಥೆಗಳಿಂದ ಒಟ್ಟು 70 ನಿರ್ದೇಶಕರುಗಳು ಭಾಗವಹಿಸಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು.

error: Content is protected !!