ಕೃಷಿ ವಿಜ್ಞಾನ ಕೇಂದ, ಶಿವಮೊಗ್ಗದ ವತಿಯಿಂದ ಮೂರು ದಿನಗಳ ಕಾಲ ‘ರಾಗಿಯ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆ’ ಕುರಿತ ಮೂರು ದಿನಗಳ ವೃತ್ತಿಪರ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ತರಬೇತಿಯು “ಆರ್ಯ-ಕೃಷಿಯಲ್ಲಿ ಯುವ ಜನತೆಯನ್ನು ಆಕರ್ಷಿಸುವ ಮತ್ತು ಉಳಿಸುವ ಯೋಜನೆ”ಯಡಿಯಲ್ಲಿ, 18 ರಿಂದ 35 ವರ್ಷ ವಯೋಮಿತಿಯ ನಿರುದ್ಯೋಗಿ ಯುವಕ / ಯುವತಿಯರಿಗೆ ಹಾಗೂ ಸ್ವಸಹಾಯ ಸಂಘದ ಮಹಿಳೆಯರಿಗೆ ಹಮ್ಮಿಕೊಳ್ಳಲಾಗಿತ್ತು.
ತರಬೇತಿ ಕಾರ್ಯಕ್ರಮದ ಉದ್ಘಾಟನೆಯನ್ನು ಡಾ. ಬಿ.ಸಿ ಹನುಮಂತಸ್ವಾಮಿ, ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು, ಕೃಷಿ ವಿಜ್ಞಾನ ಕೇಂದ್ರ, ಶಿವಮೊಗ್ಗ ಇವರು ನೆರವೇರಿಸಿ ಇತ್ತೀಚೆಗೆ ಯುಕವರು ಕೃಷಿಯತ್ತ ಬೆನ್ನುಮಾಡಿ, ಪಟ್ಟಣದೆಡೆಗೆ ವಲಸೆ ಹೋಗುತ್ತಿದ್ದಾರೆ. ಅವರನ್ನು ಕೃಷಿಯತ್ತ ಆಕರ್ಷಿಸಲು ಮತ್ತು ನಿರಂತರ ಆದಾಯ ಉತ್ಪನ್ನ ಚಟುವಟಿಕೆಗಳನ್ನು ಕೈಗೊಳ್ಳುವಂತೆ ಪ್ರೇರೇಪಿಸಲು “ಕೃಷಿಯಲ್ಲಿ ಯುವ ಜನತೆಯನ್ನು ಆಕರ್ಷಿಸುವ ಮತ್ತು ಉಳಿಸುವ ಯೋಜನೆ”ಯು ಜಾರಿಯಲ್ಲಿದ್ದು, ಈ ಯೋಜನೆಯಡಿ ಈ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತರಬೇತಿ ಸಂಘಟಕರಾದ ಡಾ. ಜ್ಯೋತಿ ಎಂ. ರಾಠೋಡ್, ವಿಜ್ಞಾನಿ (ಗೃಹ ವಿಜ್ಞಾನ), ಕೆ.ವಿ.ಕೆ., ಶಿವಮೊಗ್ಗ ಇವರು ಸಿರಿಧಾನ್ಯಗಳ ಬಗ್ಗೆ ಮಾಹಿತಿ ನೀಡಿ ಅದರಲ್ಲೂ ರಾಗಿಯು ಮಕ್ಕಳಿಗೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಇದು ತುಂಬಾ ಸುಲಭವಾಗಿ ಕರಗುವ ಕಾರಣದಿಂದ ಇದು ಸಣ್ಣ ಮಕ್ಕಳಿಗೆ ಸರಿಯಾದ ಆಹಾರವೆಂದು ಪರಿಗಣಿಸಲಾಗಿದೆ. ರಾಗಿಯಲ್ಲಿರುವ ಪ್ರಮುಖ ಅಂಶವೆಂದರೆ ಇದರಲ್ಲಿ ಪಿಷ್ಠವು ತುಂಬಾ ಕಡಿಮೆಯಿದೆ. ರಾಗಿಯಲ್ಲಿ ನಾರಿನಾಂಶವಿರುವ ಕಾರ್ಬ್ರೋಹೈಡ್ರೇಟ್ಸ್ಗಳಿವೆ ಮತ್ತು ಆಹಾರದ ನಾರಿನಾಂಶಗಳನ್ನು ಹೊಂದಿದೆ. ರಾಗಿಯಲ್ಲಿರುವ ಆರೋಗ್ಯ ಲಾಭಗಳು ರಕ್ತದಲ್ಲಿ ಹೆಚ್ಚಿನ ಗ್ಲೂಕೋಸ್ ಮಟ್ಟವನ್ನು ಕಡಿಮೆಗೊಳಿಸಲು ನೆರವಾಗುತ್ತದೆ,ರಕ್ತಹೀನತೆ ನಿವಾರಣೆ,ರಕ್ತದೊತ್ತಡ ಕಡಿಮೆ ಮಾಡುವುದು
ಮೂಳೆಯ ಆರೋಗ್ಯ ಸುಧಾರಣೆ,ತೂಕ ಕಳೆದುಕೊಳ್ಳಲು, ಪ್ರೋಟೀನ್ ಅಧಿಕವಾಗಿರುವ ಧಾನ್ಯ,ದೇಹಕ್ಕೆ ಆರಾಮ ನೀಡುವುದು. ಅಲ್ಲದೆ, ಹೃದಯಾಘಾತ, ಮಧುಮೇಹ, ಕೊಲೆಸ್ಟ್ರಾಲ್ (ಕೊಬ್ಬಿನಾಂಶ), ಅಸ್ತಮಾ, ಕ್ಯಾನ್ಸರ್, ಮಲಬದ್ಧತೆ ಈ ರೀತಿ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.
ಗ್ರಾಮೀಣ ಭಾಗದ ಯುವಕ/ಯುವತಿಯರು, ಕೃಷಿ ಮಹಿಳೆಯರು, ಸ್ವಸಹಾಯ ಸಂಘದ ಸದಸ್ಯರು ಉದ್ಯಮಶೀಲತೆಯನ್ನು ಹೆಚ್ಚಿಸಿಕೊಳ್ಳಲು ವಿವಿಧ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಿ, ನಿರಂತರ ಆದಾಯ ಗಳಿಸಬಹುದು ಎಂದರು. ತರಬೇತಿಯಲ್ಲಿ ಶಿಬಿರಾರ್ಥಿಗಳಿಗೆ ಪ್ರಾಯೋಗಿಕವಾಗಿ ರಾಗಿಯಿಂದ ತಯಾರಿಸಬಹುದಾದ ದಿನನಿತ್ಯ ಸೇವಿಸುವ ಆಹಾರವಾದ ರಾಗಿ ಅಂಬಲಿ, ರಾಗಿ ಪಾಯಸ, ರಾಗಿ ಮಾಲ್ಟ್, ರಾಗಿ ಕೇಕ್ ಹಾಗೂ ರಾಗಿ-ಆಲೂ ದೋಸೆಯನ್ನು ತಯಾರಿಸುವ ವಿಧಾನವನ್ನು ತಿಳಿಸಿದರು. ಅಲ್ಲದೆ, ಗೋಧಿ ಹಿಟ್ಟಿನೊಂದಿಗೆ ರಾಗಿ ಮತ್ತು ಇತರೆ ಸಿರಿಧಾನ್ಯಗಳನ್ನು ಸೇರಿಸುವುದರಿಂದ ಸಂಯೋಜಿತ ಮಿಶ್ರಹಿಟ್ಟಿನ ಭೌತ-ರಾಸಾಯನಿಕ, ಪೌಷ್ಠಿಕಾಂಶ ಮತ್ತು ಕ್ರಿಯಾತ್ಮಕ ಗುಣಲಕ್ಷ್ಣಗಳಲ್ಲಿ ಬದಲಾವಣೆ ಉಂಟಾಗುತ್ತದೆ ಎಂದು ತಿಳಿಸುತ್ತಾ, ರಾಗಿಯ ಮೌಲ್ಯವರ್ಧಿತ ಉತ್ಪನ್ನಗಳಾದ ರಾಗಿ ಚಾಕೋಲೇಟ್, ರಾಗಿ ಚಕ್ಕುಲಿ, ರಾಗಿ ಹಪ್ಪಳ, ರಾಗಿ ಶ್ಯಾವಿಗೆ, ರಾಗಿ ನಿಪ್ಪಟ್ಟು ಮತ್ತು ರಾಗಿ ಮಾಲ್ಟ್ ತಯಾರಿಸುವ ವಿಧಾನವನ್ನು ಸವಿಸ್ತಾರವಾಗಿ ತಿಳಿಸಿದರು. ಇದನ್ನು ಸೇವಿಸುವುದರಿಂದ ಮಕ್ಕಳಿಂದ ಹಿಡಿದು ವಯೋವೃದ್ಧವರವರೆಗೂ ಪೌಷ್ಠಿಕಾಂಶ ದೊರೆಯುತ್ತದೆ ಎಂದರು ಸಲಹೆ ನೀಡಿದರು.
ಶ್ರೀ ಮತಿ ಲೀಲಾವತಿ ಯವರು ತರಬೇತಿಯ ಸಂಪನ್ಮಲ ವ್ಯಕ್ತಿಯಾಗಿ ರಾಗಿ ಅಂಬಲಿ, ರಾಗಿ ಪಾಯಸ, ರಾಗಿ ಮಾಲ್ಟ್, ರಾಗಿ ಚಕ್ಕುಲಿ ಮತ್ತು ರಾಗಿ ಶ್ಯಾವಿಗೆ ಮಾಡಿ ಅದರ ಉಪಯೋಗ ದ ಬಗ್ಗೆ ತಿಳಿಸಿ ಕೊಟಿದ್ದಾರೆ.
ಕಾರ್ಯಕ್ರಮದಲ್ಲಿ ತರಬೇತಿಯ ಹಿರಿಯ ಸಂಶೋಧನಾ ಸಹಾಯಕರಾದ ಶ್ರೀ ಸಿದ್ದಾರೂಢ ಪಡೆಪ್ಪಗೋಳ್ ಇವರು ಪ್ಯಾಕೇಜಿಂಗ್ ಅತ್ಯಗತ್ಯ ಏಕೆಂದರೆ ಅದನ್ನು ಮಾರ್ಕೆಟಿಂಗ್ನಲ್ಲಿನ ಉತ್ಪನ್ನಗಳ ಗುರುತಿಸುವಿಕೆಗೆ ಬಳಸಲಾಗುತ್ತದೆ. ಇದು ಉತ್ಪನ್ನವನ್ನು ಉತ್ತೇಜಿಸಲು ಲೇಬಲ್ನ ನೋಟವನ್ನು ಹೆಚ್ಚಿಸುತ್ತದೆ. ಮಾರ್ಕೆಟಿಂಗ್‌ನಲ್ಲಿ ಲೇಬಲಿಂಗ್‌ನ ಪ್ರಾಮುಖ್ಯತೆ ಇದು. ಹೆಚ್ಚುವರಿಯಾಗಿ, ಲೇಬಲಿಂಗ್ ಸಹ ಭವಿಷ್ಯದ ಗ್ರಾಹಕರಿಗೆ ಉತ್ಪನ್ನದ ಬಗ್ಗೆ ಮಾಹಿತಿಯನ್ನು ಒದಗಿಸಲು ಸಹಾಯ ಮಾಡುತ್ತದೆ. ಈ ಕಾರ್ಯವು ಟ್ಯಾಗ್ ಬಳಸುವ ಮಾಹಿತಿಯುಕ್ತ ಉದ್ದೇಶವನ್ನು ಪೂರೈಸುತ್ತದೆ ಎಂದು ತಿಳಿಸಿಕೊಟ್ಟರು.
ತರಬೇತಿಯಲ್ಲಿ ‘ಆರ್ಯ’ಯೋಜನೆಯ ಸಹಾಯಕರಾದ ಶ್ರೀ ಎ. ಎನ್. ರಘು ಇವರು ತರಬೇತಿಯಲ್ಲಿ ಉಪಸ್ಥಿತರಿದ್ದರು. ತರಬೇತಿಯಲ್ಲಿ ಯುವತಿಯರು, ಕೃಷಿ ಮಹಿಳೆಯರು ಹಾಗೂ ಸ್ವಸಹಾಯ ಸಂಘದ ಸದಸ್ಯರು ಸೇರಿದಂತೆ 15 ಜನರು ಈ ತರಬೇತಿಯ ಉಪಯೋಗ ಪಡೆದುಕೊಂಡರು.