ಶಿವಮೊಗ್ಗ, ಜನವರಿ 18 : ಶಿವಮೊಗ್ಗ ಮಹಾನಗರ ಪಾಲಿಕೆಯು 2020-21ನೇ ಸಾಲಿನಲ್ಲಿ 6-14 ವರ್ಷದವರೆಗಿನ ಶಾಲೆಯಿಂದ ಹೊರಗುಳಿದ ಮಕ್ಕಳ ಮಾಹಿತಿಯನ್ನು ಪಡೆಯುವ ಉದ್ದೇಶದಿಂದ ನಗರದ ಪಾಲಿಕೆ ವ್ಯಾಪ್ತಿಯ 35 ವಾರ್ಡ್ಗಳಲ್ಲಿ ನಿಯೋಜಿಸಲಾಗಿರುವ ಸಮೀಕ್ಷಾದಾರರು ಮನೆ ಮನೆ ಸಮೀಕ್ಷೆ ಕಾರ್ಯವನ್ನು ಹಮ್ಮಿಕೊಂಡಿದ್ದು, ಸಮೀಕ್ಷಾದಾರರು ತಮ್ಮ ತಮ್ಮ ಮನೆಗಳಿಗೆ ಭೇಟಿ ನೀಡಿದಾಗ ಮಗುವಿನ ಆಧಾರ್ ಕಾರ್ಡ್, ಜನನ ದಾಖಲೆ, ಪಾಸ್ ಪೋರ್ಟ್ ಸೈಜಿನ ಫೋಟೋ, ರೇಷನ್ಕಾಡ್, ತಂದೆ ತಾಯಂದಿರ ಆಧಾರ್ ಕಾರ್ಡ್ಗಳೊಂದಿಗೆ ಮಾಹಿತಿ ನೀಡುವಂತೆ ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.