ಅಡಿಕೆಯು ಭಾರತ ದೇಶದ ಒಂದು ಪ್ರಮುಖ ವಾಣಿಜ್ಯ ಬೆಳೆ. ಅಡಿಕೆ ಉತ್ಪನ್ನದಲ್ಲಿ ಭಾರತವು ಪ್ರತ್ತುತ ಕನಾ೯ಟಕದ 12 ಜಿಲ್ಲೆಗಳಲ್ಲಿ (140 ತಾಲ್ಲೂಕುಗಳಿಂದ) 2.79 ಲಕ್ಷ ಹೆಕ್ಷ್ಟೇರ್ ಪ್ರದೇಶದಿಂದ 6.06 ಲಕ್ಷ ಟನ್ ಸಡಿಕೆ ಉತ್ಪಾದನರ ಆಗುತ್ತಿದ್ದು , ಭಾರತದ ಒಟ್ಟು ಉತ್ಪಾದನೆಯ ಶೇ 65 ರಷ್ಟು ಅಡಿಕೆ ಬೆಳೆ ಕನಾ೯ಟಕದಲ್ಲಿ ಉತ್ಪಾದನೆಯಾಗುತ್ತಿದೆ. ನಂತರದ ಸ್ಥಾನವನ್ನು ಕ್ರಮವಾಗಿ ಕೇರಳ ಹಾಗು ಅಸ್ಸಾಂ ರಾಜ್ಯಗಳು ಪಡೆದುಕೊಂಡಿವೆ. ಇತ್ತಿಚಿನ ದಿನಗಳಲ್ಲಿ ಅಡಿಕೆಗೆ ರೋಗಗಳ ಭಾಧೆಯಿಂದ ಇಳುವರಿ ಕುಂಠಿತವಾಗುತ್ತಿದ್ದು ಅವುಗಙಳ ನಿವ೯ಹಣಾ ಕ್ರಮಗಳನ್ನು ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ.
ಹಿಂಗಾರು ಒಣಗು ರೋಗವು ಅಡಿಕೆ ಬೆಳೆಯಲ್ಲಿ ಬರುವ ಪ್ರಮುಖ ರೋಗ ಇದು ಕೊಲ್ಲೆಟೋಟ್ರೈಕಂ ಗ್ಲಿಯೋಸ್ಟೋರಾಯಿಡ್ಸ್ ಎಂಬ ಶಿಲೀಂದ್ರದಿಂದ ಉಂಟಾಗುತ್ತದೆ.ಈ ರೋಗವನ್ನು ಕನಾ೯ಟಕದಲ್ಲಿ ಶೇ 60 ಕ್ಕೂ ಹೆಚ್ಚು ಅಡಿಕೆ ತೋಟಗಳಲ್ಲಿ ಕಾಣಬಹುದು. ಈ ರೋಗವು ಸಾಂಪ್ರದಾಯಿಕವಾಗಿ ಅಡಿಕೆ ಬೆಳೆಯುವ ಮಲೆನಾಡು ಮತ್ತು ಮೈದಾನ ಪ್ರದೇಶಗಳಲ್ಲಿ ಹೆಚ್ಚಿನ ಹಾನಿಯನ್ನುಂಟುಮಾಡುತ್ತದೆ. ಇದರಿಂದ ಅಡಿಕೆ ಕೃಷಿಕರಿಗೆ ಹೆಚಿನ ಆಥಿ೯ಕ ನಷ್ಟವನ್ನುಂಟು ಮಾಡುತ್ತದೆ. ಅಡಿಕೆ ಬೆಳೆಯಲ್ಲಿ ರೋಗವು ಹಿಂಗಾರ ಒಡೆದು ಪರಾಗಸ್ಪಷ೯ವಾಗಿ ಕಾಯಿ ಕಚ್ಚುವ ಸಮಯದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ರೋಗವು ವಷ೯ ಪೂತಿ೯ ತೋಟದಲ್ಲಿ ಇರುತ್ತದೆ. ಆದರೆ ರೋಗದ ಭಾಧೆಯು ಜನವರಿಯಿಂದ ಏಪ್ರಿಲ್ವರೆಗೆ ಅಂದರೆ ಬೇಸಿಗೆಯಲ್ಲಿ ಹೆಚ್ಚಾಗುತ್ತದೆ.

ರೋಗದ ಲಕ್ಷಣಗಳು:
ಹಿಂಗಾರದಲ್ಲಿ ಗಂಡು ಹೂಗಳ ಎಸಳುಗಳ ಹಳದಿಯಾಗುವಿಕೆ ಈ ರೋಗದ ಮೊದಲ ಚಿಹ್ನೆ. ಹಳದಿ ಬಣ್ಣ ಎಸಲುಗಲ ತುದಿಯಿಂದ ಫಾರಂಭವಾಗಿ ಹಿಮ್ಮುಖವಾಗಿ ಬುಡಭಾಗಕ್ಕೆ ಮುಂದುವರೆಯುತ್ತದೆ.ನಂತರ ಎಸಳುಗಳು ಕಂದು ಅಥವಾ ಕಪ್ಪು ಬಣ್ಣಕ್ಕೆ ತಿರುಗಿ ಒಣಗ ತೊಡಗುತ್ತದೆ.ಈ ಸ್ಥಿತಿಯನ್ನು ಡೈಬ್ಯಾಕ್ ಎನ್ನುವರು.ಎಸಳುಗಳ ಹಳದಿಯಾಗುವಿಕೆ ಮತ್ತು ಕಂದಾಗುವಿಕೆ ಮುಂದುವರೆದಂತೆ ಹೆಣ್ಣುಹೂವುಗಳು ಉದರತೊಡುಗುತ್ತವೆ. ನಂತರ ರೋಗ ಇಡೀ ಹಿಂಗಾರಕ್ಕೆ ಹರಡಿ ಅಂತಹ ಹಿಂಗಾರಗಳು ಸಾಯುತ್ತವೆ.ರೋಗ ಪೀಡಿತ ಹಿಂಗಾರಗಳಲ್ಲಿ ಪರಾಗಸ್ಪ ಷ೯ಕ್ರಿಯೆ ಕಡಿಮೆಯಾಗುವುದರಿಂದ ಎಳೆ ಕಾಯಿಗಳು ಉದುರುತ್ತವೆ. ಇಂತಹ ರೋಗದ ಚಿಹ್ನೆಗಳು ಎಲ್ಲಾ ತೋಟಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ.
ರೋಗ ಹರಡಲು ಸೂಕ್ತ ವಾತವರಣ:
ಮೋಡ ಕವಿದ ವಾತವರಣ, ಉಷ್ಣಾಂಶ (24 – 32 ಡಿಗ್ರಿ ಮತ್ತು ಹೆಚ್ಚಿನ ಆದ್ರತೆ (80 – 90 ಡಿಗ್ರಿ)ಈ ರೋಗ ಹರಡುವುದಕ್ಕೆ ಪೂರಕವಾದ ಅಂಶಗಳು ಅಲ್ಲದೆ ಮಳೆಗಾಲದಲ್ಲಿಯೂ ಇದರ ಭಾಧೆ ಮುಂದುವರೆಯುವುದರಿಂದ ಅಡಿಕೆ ಬೆಳೆಯುವ ಕೃಷಿಕರು ಈ ರೋಗ ಕಂಡುಬಂದಲ್ಲಿ ಈ ಕೆಳಗೆ ಸೂಚಿಸಿಚ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು.
ನಿವ೯ಹಣೆ:
ರೋಗಕ್ಕೆ ರುತ್ತಾದ ಒಣಗಿದ ಹಿಂಗಾರಗಳನ್ನು ತೆಗೆದು ಸುಟ್ಟುಹಾಕಬೇಕು. ಇದರಿಂದ ರೋಗ ಹರಡುವಿಕೆಯನ್ನು ಪರಿಣಾಮಕಾರಿಯಾಗಿ ತಡೆಹಿಡಿಯಬಹುದು.
ಶೇ 0.3ರ ಮಾಯಂಕೊಜೆಬ್ ನ್ನು (ಡೈಥೇನ್ ಎಂ 45 ಅಥವಾ ಇಂಡೋಫಿಲ್ ಎಂ – 45) ಗೊಂಚಲು ಅರಳುವ ಸಮಯದಲ್ಲಿ ಹಾಗು 20-25 ದಿನಗಳ ಅಂತರದಲ್ಲಿ ಮತ್ತೊಂದು ಬಾರಿ ಸಿಂಪಡಿಸಬೇಕು.
ಹೆಚ್ಚಿನ ಮಾಹಿತಿಗಾಗಿ
ಮುಖ್ಯಸ್ಥರು
ಅಡಿಕೆ ಸಂಶೋಧನಾ ಕೇಂದ್ರ
ಕೃಷಿ ಮತ್ತು ತೋಟಗಾರಿಕೆ ವಿಶವ್ವಿದ್ಯಾಲಯ
ಶಿವಮೊಗ್ಗ
ದೂರವಾಣಿ ಸಂಖ್ಯ: 94808 38989 / 95352 50742

error: Content is protected !!