ಸೂಕ್ಷಾಣು ಜೀವಿಗಳ ಸಂಕೀರ್ಣ ಬಳಸಿ ಅಡಿಕೆ ಸಿಪ್ಪೆಯಿಂದ ಸಂಪದ್ಭರಿತ ಕಾಂಪೋಸ್ಟ್ ತಯಾರಿಕಾ ವಿಧಾನದ ಬಗ್ಗೆ ಪದ್ದತಿ ಪ್ರಾತ್ಯಕ್ಷಿಕೆ

ರೈತ ದಿನಾಚರಣಾ ಅಂಗವಾಗಿ ಶಿವಮೊಗ್ಗ ತಾಲ್ಲೂಕಿನ ಸೂಗೂರು ಗ್ರಾಮದಲ್ಲಿ ಆತ್ಮ ಯೋಜನೆಯಡಿ ಕಿಸಾನ್ ಗೋಷ್ಠಿ ಹಾಗೂ ಅಡಿಕೆ ಸಿಪ್ಪೆಯಿಂದ ಸಂಪದ್ಭರಿತ ಕಾಂಪೋಸ್ಟ್ ತಯಾರಿಕಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಉದ್ಘಾಟಕರಾದ ಮಾನ್ಯ ಜಂಟಿ ಕೃಷಿ ನಿರ್ದೇಶಕರಾದ ಡಾ| ಕಿರಣ್ ಕುಮಾರ್ ರವರು ದಿವಂಗತ ಶ್ರೀ. ಚೌದರಿ ಚರಣ್ ಸಿಂಗ್, ಮಾಜಿ ಪ್ರಧಾನ ಮಂತ್ರಿಗಳು, ಇವರು ರೈತ ಸಮುದಾಯಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸುವ ಸಲುವಾಗಿ ಅವರ ಜನ್ಮ ದಿನವನ್ನು ರೈತ ದಿನಾಚರಣೆ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು. ಕೃಷಿ ಹಾಗೂ ತೋಟಗಾರಿಕಾ ವಿಶ್ವವಿದ್ಯಾಲಯದ ವಿಜ್ಞಾನಿಗಳಾದ ಡಾ| ನಾಗರಾಜ್ ಅಡಿವೆಪ್ಪನವರ್, ಡಾ| ಶರಣಬಸಪ್ಪ ದೇಶಮುಖ್ ಹಾಗೂ ಡಾ| ಬಸವರಾಜ್ ರವರು ಅಡಿಕೆ ಹಾಗು ಭತ್ತದ ಬೆಳೆಗಳಲ್ಲಿ ಸುಸ್ಥಿರ ಇಳುವರಿಗಾಗಿ ಸಮಗ್ರ ಕೃಷಿ ಪದ್ದತಿ ಹಾಗೂ ಸಮಗ್ರ ಪೀಡೆ ನಿರ್ವಹಣೆ ಬಗ್ಗೆ ತಾಂತ್ರಿಕ ಮಾಹಿತಿ ನೀಡಿ ಚರ್ಚಾ ಗೋಷ್ಠಿ ನೆಡೆಸಿಕೊಟ್ಟರು. ಇದೇ ಸಮಯದಲ್ಲಿ ಸೂಕ್ಷಾಣು ಜೀವಿಗಳ ಸಂಕೀರ್ಣ ಬಳಸಿ ಅಡಿಕೆ ಸಿಪ್ಪೆಯಿಂದ ಸಂಪದ್ಭರಿತ ಕಾಂಪೋಸ್ಟ್ ತಯಾರಿಕಾ ವಿಧಾನದ ಬಗ್ಗೆ ಪದ್ದತಿ ಪ್ರಾತ್ಯಕ್ಷಿಕೆಯನ್ನು ಏರ್ಪಡಿಸಿ ತೋರಿಸಲಾಯಿತು.

error: Content is protected !!