News Next

ಶಿವಮೊಗ್ಗ : ಆಗಸ್ಟ್ 12 : ಪ್ರಸಕ್ತ ಸಾಲಿನ ಶೈಕ್ಷಣಿಕ ಸ್ನಾತಕ ಪದವಿಗಳಿಗೆ ಕೃಷಿಕರ ಕೋಟಾದಡಿಯಲ್ಲಿ ಪ್ರವೇಶಾತಿ ಬಯಸುವ ಅಭ್ಯರ್ಥಿಗಳು ಸಲ್ಲಿಸುವ ದಾಖಲಾತಿಗಳನ್ನು ಭೌತಿಕವಾಗಿ ಪರಿಶೀಲಿಸುವ ಬದಲಾಗಿ, ಆನ್‍ಲೈನ್ ಪರೀಶೀಲನೆ ಕೈಗೊಳ್ಳುತ್ತಿದ್ದು, ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಅರ್ಜಿಯನ್ನು ಸಲ್ಲಿಸುವಾಗ ಯಾವ ಕೇಂದ್ರದಲ್ಲಿ ದಾಖಲಾತಿ ಪರಿಶೀಲನೆಗೆ ಆಯ್ಕೆ ಮಾಡಿರುವರೋ ಅದೇ ಕೇಂದ್ರದಲ್ಲಿ ಸಂಬಂಧಿತ ವಿಶ್ವವಿದ್ಯಾಲಯಗಳಿಂದ ನಿಯೋಜಿಸಿದ ಸಮಿತಿ ಪರಿಶೀಲನೆ ಮಾಡುವುದು.
ಆನ್‍ಲೈನ್ ಪರಿಶೀಲನೆಗೆ ಸಿ.ಇ.ಟಿ.ಪರೀಕ್ಷಾ ಪ್ರವೇಶ ಪತ್ರ, ವ್ಯವಸಾಯಗಾರರ ಪ್ರಮಾಣ ಪತ್ರ-3, ವ್ಯವಸಾಯದ/ಕೃಷಿ ಆದಾಯದ ಪ್ರಮಾಣ ಪತ್ರ-3, ವೇತನ ದೃಢೀಕರಣ ಪ್ರಮಾಣ ಪತ್ರ-4, ಖಾಸಗಿ ವೃತ್ತಿಯಿಂದ ಆದಾಯದ ಪತ್ರ-5, ಅಫಿಡವಿಟ್ (ಕೇವಲ 8ಇ, 8ಈ ಮತ್ತು 8ಉ ಒಟ್ಟು ಆದಾಯಕ್ಕೆ ಸಂಬಂಧಿಸಿದಂತೆ ಮಾತ್ರ) ದಾಖಲಾತಿಗಳನ್ನು ಆಗಸ್ಟ್-18 ರೊಳಗಾಗಿ ಎಲ್ಲಾ ವಿಶ್ವವಿದ್ಯಾಲಯಗಳ ಹಾಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಜಾಲತಾಣಗಳಲ್ಲಿ ಕಾಣಿಸಿರುವ ಕೊಂಡಿಗಳಲ್ಲಿ ಲಾಗ್‍ಇನ್ ಮಾಡಿ ಸಲ್ಲಿಸುವುದು.
ಅಭ್ಯರ್ಥಿಗಳು ಅನ್‍ಲೈನ್ ಪರಿಶೀಲನೆಗೆ ಸಲ್ಲಿಸಬೇಕಾದ ಶುಲ್ಕ ಸಾಮಾನ್ಯ ರೂ. 200/- ಮತ್ತು ಇತರೆ (ಪ.ಜಾ/ಪ.ಪ/ಪ್ರವರ್ಗ-1) ರೂ. 100/- ಗಳನ್ನು ಜಾಲತಾಣದಲ್ಲಿ ನೀಡಿರುವ ಆನ್‍ಲೈನ್ ಸೌಲಭ್ಯ ಮೂಲಕ ತುಂಬಬಹುದಾಗಿದೆ. ಶುಲ್ಕ ತುಂಬಿದ ನಂತರವೇ ಶುಲ್ಕ ರಶೀದಿ ಹಾಗೂ ದಾಖಲಾತಿಗಳನ್ನು ಒದಗಿಸಿದ ಮಾಹಿತಿಯನ್ನು ಅಭ್ಯರ್ಥಿಗಳು ಡೌನ್‍ಲೋಡ್ ಮಾಡಿಕೊಳ್ಳಲು ಸಾಧ್ಯವಾಗುವುದು ಎಂದು ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

error: Content is protected !!