ಶಿವಮೊಗ್ಗ, ಜ19 – ಜನವರಿ 23ರಿಂದ 27ರವರೆಗೆ ನಡೆಯಲಿರುವ ಸಹ್ಯಾದ್ರಿ ಉತ್ಸವದಲ್ಲಿ ಐದು ದಿನಗಳ ಕಾಲ ವೈವಿಧ್ಯಮ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದ್ದು, ಖ್ಯಾತ ಗಾಯಕ ರಘು ದೀಕ್ಷಿತ್ ಮತ್ತು ತಂಡ ಸಂಗೀತ ಸಂಜೆ ಕಾರ್ಯಕ್ರಮ ನೀಡಲಿದ್ದಾರೆ ಎಂದು ಜಿಲ್ಲಾಧಿಕಾರಿ ಕೆ.ಎ.ದಯಾನಂದ್ ಅವರು ತಿಳಿಸಿದರು.
ಅವರು ಶನಿವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಹ್ಯಾದ್ರಿ ಉತ್ಸವದ ಆಮಂತ್ರಣ ಪತ್ರಿಕೆ ಹಾಗೂ ಪ್ರಚಾರ ಸಾಮಾಗ್ರಿಗಳ ಬಿಡುಗಡೆ ಬಳಿಕ ಮಾತನಾಡಿದರು.
ಜನವರಿ23ರಂದು ಖ್ಯಾತ ಸಾಹಿತಿ ನಾ.ಡಿಸೋಜ ಅವರು ಸಂಜೆ 5.30ಕ್ಕೆ ಹಳೆ ಜೈಲು ಆವರಣದಲ್ಲಿರುವ ರಾಷ್ಟ್ರಕವಿ ಕುವೆಂಪು ವೇದಿಕೆಯಲ್ಲಿ ಸಹ್ಯಾದ್ರಿ ಉತ್ಸವಕ್ಕೆ ಚಾಲನೆ ನೀಡುವರು. ಜಿಲ್ಲಾ ಉಸ್ತುವಾರಿ ಸಚಿವ ಡಿ.ಸಿ.ತಮ್ಮಣ್ಣ ಅವರು ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು. ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದು ಅವರು ಹೇಳಿದರು.
ಸಾಂಸ್ಕøತಿಕ ಕಲಾ ವೈಭವ: ಪ್ರತಿ ದಿನ ಸಂಜೆ 6ಗಂಟೆಯಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ಆರಂಭವಾಗಲಿವೆ. ಜ. 23ರಂದು ದೇಶದ ವಿವಿಧ ರಾಜ್ಯಗಳ 223 ಜಾನಪದ ಹಾಗೂ ಬುಡಕಟ್ಟು ಕಲಾವಿದರು ಜಾನಪದ ಭಾರತ’ ಎಂಬ ಕಾರ್ಯಕ್ರಮವನ್ನು ಸಾದರಪಡಿಸುವರು. ಜ.24ರಂದು ಜಿಲ್ಲೆಯ 23 ವಾದ್ಯ ಪ್ರಾಕಾರ ಕಲಾವಿದರಿಂದವಾದ್ಯ ನಾದ ವೈಭವ ಹಾಗೂ ಕರ್ನಾಟಕ ಮತ್ತು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಜುಗಲ್ ಬಂಧಿ ನಡೆಯಲಿದೆ. ಜ.25ರಂದು ಜಿಲ್ಲೆಯ 200 ನೃತ್ಯ ಕಲಾವಿದರಿಂದ ಕವಿ-ಗೀತ-ನೃತ್ಯ ಸಂಭ್ರಮ’ ಕಾರ್ಯಕ್ರಮ, ಯಕ್ಷಗಾನೋತ್ಸವ ನಡೆಯಲಿದೆ. ಐಗಿನಬೈಲು ಪರಮೇಶ್ವರ ಹೆಗಡೆ ಮತ್ತು ತಂಡದವರಿಂದ ಗೋವರ್ಧನ ಗಿರಿಧಾರಿ ಪ್ರಸಂಗ ಮತ್ತು ನಾಗಭೂಷಣ ಹೆಗ್ಗೋಡು ತಂಡದಿಂದ ದ್ರುಪದ ಗರ್ವಭಂಗ ಪ್ರಸಂಗ ಯಕ್ಷಗಾನ ನಡೆಯಲಿದೆ. ಜ.26ರಂದು ಜಿಲ್ಲೆಯ ವಿವಿಧ ಶಾಲಾ ಕಾಲೇಜುಗಳ 300ಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ಮಕ್ಕಳ ಜಾನಪದ ಮೇಳ, ಜಿಲ್ಲೆಯ 75ಕ್ಕೂ ಹೆಚ್ಚು ಸುಗಮ ಸಂಗೀತ ಕಲಾವಿದರಿಂದಗಾನ ಸುಧೆ’ ಹರಿಯಲಿದೆ. ಜ.27ರಂದು ಎಚ್.ಎಸ್.ಗೋಪಾಲ್ ಮತ್ತು ಎಂ.ಎಸ್ ಅನಂತ ನಾರಾಯಣ ಅವರಿಂದ ಗಮಕ, ಶಿವಾನಂದಸ್ವಾಮಿ ಮತ್ತು ತಂಡದಿಂದ ಕೀರ್ತನೆ, ಹಾಗೂ ರಘು ದೀಕ್ಷಿತ್ ತಂಡದಿಂದ ಸಹ್ಯಾದ್ರಿ ಸಂಗೀತ ಸಂಜೆ ಕಾರ್ಯಕ್ರಮ ನಡೆಯಲಿದೆ ಎಂದು ಅವರು ಹೇಳಿದರು.
ಸಹ್ಯಾದ್ರಿ ಉತ್ಸವದ ಅಂಗವಾಗಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಮಹಿಳಾ ಸಂಸ್ಕøತಿ ಉತ್ಸವ, ಕವಿಗೋಷ್ಟಿ, ಕೃಷಿ ಗೋಷ್ಟಿಗಳು, ಸಾಹಿತ್ಯ ಗೋಷ್ಟಿ, ಉದ್ಯಮ ಗೋಷ್ಟಿಗಳನ್ನು ಆಯೋಜಿಸಲಾಗಿದ್ದು ಕುವೆಂಪು ರಂಗ ಮಂದಿರದಲ್ಲಿ ಈ ಕಾರ್ಯಕ್ರಮಗಳು ನಡೆಯಲಿವೆ.
ಮಹಾತ್ಮಾ ಗಾಂಧಿ ಪಾರ್ಕ್‍ನಲ್ಲಿ ಸಾಹಸ ಕ್ರೀಡೆಗಳು, ನಿದಿಗೆ ಕೆರೆಯಲ್ಲಿ ವಾಟರ್ ಸ್ಪೋಟ್ರ್ಸ್, ಸಾಹಸಿಗರಿಗಾಗಿ ಪ್ಯಾರಾ ಗ್ಲೈಡಿಂಗ್, ಹಳೆ ಜೈಲು ಆವರಣದಲ್ಲಿ ಚಿತ್ರ ಸಂತೆ, ಸಾಮೂಹಿಕ ಯೋಗಾಭ್ಯಾಸ ಹಾಗೂ ಯೋಗ ಪ್ರತಿಭಾ ಸಿರಿ ಪ್ರದರ್ಶನ, ನೆಹರು ಕ್ರೀಡಾಂಗಣದಿಂದ ವಾಕಥಾನ್, ಗಾಂಧಿ ಪಾರ್ಕ್‍ನಿಂದ ಪಾರಂಪರಿಕ ನಡಿಗೆ, ಸಿನೆಮೋತ್ಸವ, ರಂಗ ಸಹ್ಯಾದ್ರಿ ನಾಟಕೋತ್ಸವ ಸೇರಿದಂತೆ ಹತ್ತು ಹಲವು ವೈವಿಧ್ಯಮಯ ಕಾರ್ಯಕ್ರಮಗಳನ್ನು ಐದು ದಿನಗಳ ಕಾಲ ಆಯೋಜಿಸಲಾಗುತ್ತಿದೆ ಎಂದು ಹೇಳಿದರು.
ಸಂಸದ ಬಿ.ವೈ.ರಾಘವೇಂದ್ರ, ವಿಧಾನ ಪರಿಷತ್ ಸದಸ್ಯ ರುದ್ರೇಗೌಡ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜ್ಯೋತಿ ಎಸ್.ಕುಮಾರ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವರಾಮೇ ಗೌಡ, ಅಪರ ಜಿಲ್ಲಾಧಿಕಾರಿ ಅನುರಾಧ ಜಿ ಮತ್ತಿತರರು ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ,
ಶಿವಮೊಗ್ಗ.

error: Content is protected !!