ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಕೇಂದ್ರ ಸರ್ಕಾರದ ಆತ್ಮ ನಿರ್ಭರ್ ಯೋಜನೆಯಡಿ ರಾಷ್ಟ್ರೀಯ ಆಹಾರ ಭದ್ರತಾ ಹಾಗೂ ರಾಜ್ಯದ ಸಾರ್ವಜನಿಕ ವಿತರಣಾ ಪದ್ದತಿಯಡಿ ಪಡಿತರ ಚಿಟಿಯನ್ನು ಪಡೆಯದೇ ಇರುವ ವಲಸಿಗರಿಗೆ ಮೇ ಮತ್ತು ಜೂನ್-2020ರ ತಿಂಗಳಿಗೆ ಪ್ರತಿ ಫಲಾನುಭವಿಗೆ ತಲಾ 5ಕೆ.ಜಿ. ಅಕ್ಕಿಯನ್ನು ಹಾಗೂ ಕೇಂದ್ರ ಸರ್ಕಾರದ ಹಂಚಿಕೆಗೆ ಅನುಗುಣವಾಗಿ ಕಡಲೆಕಾಳನ್ನು ಉಚಿತವಾಗಿ ವಿತರಿಸಲಿದೆ.
ವಲಸಿಗೆ ಫಲಾನುಭವಿಗಳು ಮೇ ತಿಂಗಳಲ್ಲಿ 5ಕೆ.ಜಿ. ಅಕ್ಕಿಯನ್ನು ಮೇ 26ರಿಂದ 31ರವರೆಗೆ ಹಾಗೂ ಜೂನ್ ಮಾಹೆಯಲ್ಲಿ ಜೂನ್ 01ರಿಂದ 10ರವರೆಗೆ 5ಕೆ.ಜಿ. ಅಕ್ಕಿ ಹಾಗೂ ಕೇಂದ್ರ ಸರ್ಕಾರ ಹಂಚಿಕೆ ಮಾಡಲು ಕಡಲೆಕಾಳನ್ನು ಪಡೆಯಬಹುದಾಗಿದೆ. ಮೇ ತಿಂಗಳಲ್ಲಿ ಆಹಾರಧಾನ್ಯವನ್ನು ಪಡೆಯದ ವಲಸೆ ಫಲಾನುಭವಿಗಳು ಜೂನ್ ತಿಂಗಳಲ್ಲಿ ಒಟ್ಟಿಗೆ 10ಕೆ.ಜಿ. ಅಕ್ಕಿ ಮತ್ತು ಕೇಂದ್ರ ಸರ್ಕಾರದ ಹಂಚಿಕೆಯಂತೆ 2ಕೆ.ಜಿ. ಕಡಲೆಕಾಳನ್ನು ಪಡೆಯಬಹುದಾಗಿದೆ. ಈ ಯೋಜನೆಯಡಿ ಫಲಾನುಭವಿಗಳು ತಮ್ಮ ಸಮೀಪದ ನ್ಯಾಯಬೆಲೆ ಅಂಗಡಿಗಳಲ್ಲಿ ಆಧಾರ್ ಸಂಖ್ಯೆ ನೀಡಿ ಅವರ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿಯನ್ನು ನ್ಯಾಯಬೆಲೆ ಅಂಗಡಿಯವರಿಗೆ ನೀಡಿ ಪಡಿತರ ಪಡೆಯಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಅನೌಪಚಾರಿಕ ಪಡಿತರ ಪ್ರದೇಶ, ಶಿವಮೊಗ್ಗ ಹಾಗೂ ಆಯಾ ತಾಲೂಕಿನ ತಹಶೀಲ್ದರರನ್ನು ಸಂಪರ್ಕಿಸಬಹುದಾಗಿದೆ. ಸಹಾಯಕ ನಿರ್ದೇಶಕರು ಅನೌಪಚಾರಿಕ ಪಡಿತರ ಪ್ರದೇಶ ಶಿವಮೊಗ್ಗ-ದೂ.ಸಂ.08182-250110, ತಹಶೀಲ್ದಾರ್ ಶಿವಮೊಗ್ಗ-ದೂ.ಸಂ.08182-279312, ತಹಶೀಲ್ದಾರ್ ಭದ್ರಾವತಿ-ದೂ.ಸಂ.08282-267283, ತಹಶೀಲ್ದಾರ್ ತೀರ್ಥಹಳ್ಳಿ-ದೂ.ಸಂ.08181-228239, ತಹಶೀಲ್ದಾರ್ ಸಾಗರ-ದೂ.ಸಂ.08183-226074, ತಹಶೀಲ್ದಾರ್ ಶಿಕಾರಿಪುರ-ದೂ.ಸಂ.08187-222239, ತಹಶೀಲ್ದಾರ್ ಸೊರಬ-ದೂ.ಸಂ.08184-272241 ಹಾಗೂ ತಹಶೀಲ್ದಾರ್ ಹೊಸನಗರ-ದೂ.ಸಂ.08185-221235ನ್ನು ಸಂಪರ್ಕಿಸಬಹುದಾಗಿದೆ.