News Next

ಕೋವಿಡ್-19 ಹಿನ್ನೆಲೆಯಲ್ಲಿ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕಲಾವಿದರು ಹಾಗೂ ಸಾಹಿತಿಗಳಿಗೆ ಆರ್ಥಿಕ ನೆರವು ಒದಗಿಸಲಾಗುತ್ತಿದ್ದು ಅರ್ಜಿ ಆಹ್ವಾನಿಸಲಾಗಿದೆ.
ಆರ್ಥಿಕವಾಗಿ ಸಂಕಷ್ಟದಲ್ಲಿರುವ ಎಲ್ಲಾ ಕಲಾ ಪ್ರಕಾರದ ಕಲಾವಿದರು ಹಾಗೂ ಸಾಹಿತಿಗಳು ಅರ್ಜಿ ಸಲ್ಲಿಸಬಹುದು. ವೃತ್ತಿನಿರತ ಕಲಾವಿದರಾಗಿದ್ದು, ಕನಿಷ್ಠ 10 ವರ್ಷ ಕಲಾ ಸೇವೆ ಮಾಡಿರಬೇಕು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಮಾಸಾಶನ ಪಡೆಯುತ್ತಿರಬಾರದು ಮತ್ತು ಸರ್ಕಾರಿ ನೌಕರರಾಗಿರಬಾರದು.
ಹೆಸರು, ವಿಳಾಸ, ಕಲಾ ಪ್ರಕಾರ, ಆಧಾರ ಸಂಖ್ಯೆ, ವರ್ಗ, ದೂರವಾಣಿ ಸಂಖ್ಯೆ ಮತ್ತು ಬ್ಯಾಂಕ್ ಖಾತೆ ವಿವರಗಳನ್ನೊಂಡ ಅರ್ಜಿಯನ್ನು ಸ್ವ ವಿವರಗಳೊಂದಿಗೆ ಇಲಾಖೆಯ ಜಞಛಿ.shivಚಿmoggಚಿ@gmಚಿiಟ.ಛಿom ವಿಳಾಸಕ್ಕೆ ಅರ್ಜಿಯನ್ನು ಏಪ್ರಿಲ್ 27 ರ ಒಳಗಾಗಿ ಸಲ್ಲಿಸುವುದು.
ಹೆಚ್ಚಿನ ವಿವರಕ್ಕಾಗಿ ಜಿಲ್ಲಾ ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ದೂ.ಸಂ.: 08182 223354 ಇವರನ್ನು ಸಂಪರ್ಕಿಸಬಹುದಾಗಿದೆ.

error: Content is protected !!