ನಮ್ಮ ಆಹಾರದಲ್ಲಿ ಇರುವ ಮುಖ್ಯ ಪೋಷಕಾಂಶಗಳಾದ ಶಕ್ತಿ ಸಾರಜನಕ ಹಾಗೂ ಶರ್ಕರಪಿಷ್ಟ ದೈನಂದಿನ ಚಟುವಟಿಕೆಗಳಿಗೆ ಶಕ್ತಿ ನೀಡಿಉತ್ತಮ ಬೆಳವಣಿಗೆಗೆ ಅನುವುಮಾಡಿಕೊಡುತ್ತವೆ ಜೀವಸತ್ವ ಮತ್ತು ಖನಿಜಾಂಶಗಳು ರೋಗನಿರೋಧಕ ಶಕ್ತಿ ಮತ್ತು ಆರೋಗ್ಯದ ನಿರ್ವಹಣೆಗೆ ಸಹಾಯಮಾಡುತ್ತವೆ. ಹಣ್ಣು ಮತ್ತು ತರಕಾರಿಗಳಲ್ಲಿ ಇವು ಅಧಿಕ ಪ್ರಮಾಣದಲ್ಲಿರುತ್ತವೆ.ಮುಖ್ಯವಾಗಿ ನಾವು ಆಹಾರವನ್ನು ಮೂರು ಭಾಗಗಳನ್ನಾಗಿ ವಿಂಗಡಿಸಿ ಮಾಡಲಾಗಿದೆ. ಅವುಗಳೆಂದರೆ1.ಶಕ್ತಿ ನೀಡುವ ಆಹಾರ ಪದಾರ್ಥಗಳು – (ಧಾನ್ಯಗಳು ಬೇಳೆಕಾಳುಗಳು ಮತ್ತು ಎಣ್ಣೆಬೀಜಗಳು)2. ಬೆಳವಣಿಗೆಗೆ ಬೇಕಾಗುವ ಆಹಾರ ಪದಾರ್ಥಗಳು (ಬೇಳೆಕಾಳುಗಳು,ಮೀನು,ಮಾಂಸ,ಮೊಟ್ಟೆ, ಹಾಲಿನ ಉತ್ಪನ್ನಗಳು)3. ಜೀವರಕ್ಷಕ ಆಹಾರ ಪದಾರ್ಥಗಳು – ಎಲ್ಲ ರೀತಿಯ ಹಣ್ಣು ಮತ್ತು ತರಕಾರಿಗಳು ಅತಿ ಹೆಚ್ಚು ಜೀವಸತ್ವ ಮತ್ತು ಲವಣಾಂಶಗಳನ್ನು ಹೊಂದಿರುತ್ತದೆ.ಆದ್ದರಿಂದ ಇವುಗಳನ್ನು ಜೀವರಕ್ಷಕ ಆಹಾರಪದಾರ್ಥಗಳು ಎಂದು ಕರೆಯುತ್ತಾರೆ
ರೋಗನಿರೋಧಕ ಶಕ್ತಿ ಹೆಚ್ಚಿಸುವ ಹಣ್ಣು ಮತ್ತು ತರಕಾರಿಗಳು1.ಪ್ರತಿ ವಯಸ್ಕ ವ್ಯಕ್ತಿಯು ತಮಗೆ ದಿನನಿತ್ಯದ ಅವಶ್ಯವಿರುವ ಪೋಷಕಾಂಶಗಳನ್ನು ವಿಶ್ವ ಆರೋಗ್ಯ ಸಂಸ್ಥೆಯು ನಿಗದಿಪಡಿಸುತ್ತದೆ ಅದರಂತೆ ಪ್ರತಿಯೊಬ್ಬ ವ್ಯಕ್ತಿಯು 300 ಗ್ರಾಂ ತರಕಾರಿಗಳು ಹಾಗೂ 100 ಗ್ರಾಂನಷ್ಟು ಹಣ್ಣುಗಳನ್ನು ಸೇವಿಸಲು ತಿಳಿಸಿದೆ.
2. 300 ಗ್ರಾಂ ತರಕಾರಿಯಲ್ಲಿ 100ಗ್ರಾಂ ಸೊಪ್ಪು ಹಾಗೂ 200ಗ್ರಾಂ ಇತರ ತರಕಾರಿಗಳನ್ನು ಸೇವಿಸಲು ತಿಳಿಸಿರುತ್ತಾರೆ ಹಾಗೂ 100ಗ್ರಾಂ ಹಣ್ಣುಗಳನ್ನು ಸೇವಿಸಲು ತಿಳಿಸಿರುತ್ತಾರೆ.
3.ದಿನನಿತ್ಯ ಹಣ್ಣು ಮತ್ತು ತರಕಾರಿಗಳನ್ನು ಸೇವಿಸುವುದರಿಂದ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಬಹುದು.
4. ಹಣ್ಣು ಮತ್ತು ತರಕಾರಿಗಳು ಕಡಿಮೆ ಶಕ್ತಿ ಮತ್ತು ಕೊಬ್ಬನ್ನು ಹೊಂದಿರುವುದರಿಂದ ಮಧುಮೇಹ, ಬೊಜ್ಜು ಹಾಗೂ ಕ್ಯಾನ್ಸರ್ ನಂತಹ ರೋಗಗಳನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿರುತ್ತವೆ.
5.ಹಣ್ಣು ಮತ್ತು ತರಕಾರಿಗಳು ಅತಿ ಹೆಚ್ಚು ನೀರು ಮತ್ತು ನಾರಿನಂಶವನ್ನು ಹೊಂದಿರುವುದರಿಂದ ಆಹಾರ ಪಚನ ಗೊಳಿಸಲು ಸಹಾಯ ಮಾಡುತ್ತವೆ.
6. ಹಣ್ಣು ಮತ್ತು ತರಕಾರಿಗಳು ಅತಿಹೆಚ್ಚು ಆಂಟಿ ಆಕ್ಸಿಡೆಂಟ್ ಗುಣಗಳನ್ನು ಹೊಂದಿರುವುದರಿಂದ ಕ್ಯಾನ್ಸರ್ನಂತಹ ಕಾಯಿಲೆಗಳನ್ನು ಗುಣಪಡಿಸಬಹುದು.
7.ಹಣ್ಣು ಮತ್ತು ತರಕಾರಿಗಳ ಸೇವನೆ ಯಿಂದ ಮೂತ್ರಪಿಂಡದ ಸಮಸ್ಯೆಗಳನ್ನು ಕಡಿಮೆಗೊಳಿಸಬಹುದು.
8. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಕೆಲವು ಪ್ರಮುಖ ಹಣ್ಣು ಮತ್ತು ತರಕಾರಿಗಳು – 1.ಗ್ರೇಪ್ ಫ್ರೂಟ್2.ಕಿತ್ತಳೆ3.ಕಲ್ಲಂಗಡಿ4.ಲಿಂಬು5.ಬ್ರೊಕೋಲಿ6. ಬಳ್ಳೊಳ್ಳಿ7.ಶುಂಠಿ8.ಪಾಲಕ್ ಸೊಪ್ಪು9.ಅರಿಸಿನ10.ಪಪ್ಪಾಯಿ11.ಕಿವಿ ಹಣ್ಣು12. ಬೆಟ್ಟದನೆಲ್ಲಿ13.ಗಜ್ಜರಿ
ರೋಗನಿರೋಧಕ ಶಕ್ತಿ ಹೆಚ್ಚಿಸಲು ಉತ್ತಮ ಪೋಷಣಾ ಸಲಹೆಗಳು
1.ದಿನವೂ ಸಮತೋಲನ ಆಹಾರ ಸೇವಿಸಬೇಕು
2. ಕುರುಕಲು ಹಾಗೂ ಬೀದಿ ಬದಿಯ ತಿಂಡಿಗಳನ್ನು ಕಡಿಮೆ ತಿನ್ನುವುದು
3. ಪೋಷಕಾಂಶ ಭರಿತ ಆಹಾರಗಳಾದ ತರಕಾರಿ, ಸೊಪ್ಪುಗಳು,ಮೊಳಕೆಯೊಡೆದ ಧಾನ್ಯಗಳನ್ನು ಹೆಚ್ಚಾಗಿ ಸೇವಿಸುವುದು.
4. ಕಿರುಧಾನ್ಯಗಳನ್ನು ಒಳಗೊಂಡ ಆಹಾರಗಳನ್ನು ಯಥೇಚ್ಛವಾಗಿ ಬಳಸುವುದು.
5. ನಿತ್ಯವೂ ವ್ಯಾಯಾಮ ಯೋಗ ಬಿರುಸಿನ ನಡಿಗೆ ಯುಳ್ಳ ದೈಹಿಕ ಚಟುವಟಿಕೆಗಳನ್ನು ರೂಢಿಸಿಕೊಳ್ಳುವುದು.
6. ಆಹಾರಕ್ರಮ ತಪ್ಪಿಸಬಾರದು, ಹಸಿವಿನಿಂದ ಇರಬಾರದು ಮತ್ತು ಭಾರೀ ಭೋಜನ ಮಾಡಬಾರದು.
7. ಮಕ್ಕಳು,ಗರ್ಭಿಣಿ, ಬಾಣಂತಿಯರಿಗೆ ವಿಶೇಷ ಕಾಳಜಿ ಹಾಗೂ ಉತ್ತಮ ಆಹಾರ ಒದಗಿಸುವುದು
ಡಾ. ಜ್ಯೋತಿ ಎಂ. ರಾಠೋಡ್, ವಿಜ್ಞಾನಿ (ಗೃಹ ವಿಜ್ಞಾನ), ಕೆ.ವಿ.ಕೆ., ಶಿವಮೊಗ್ಗ , 93539 78995