ಶಿವಮೊಗ್ಗ, ಮಾರ್ಚ್ 26 : ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹೊಟೇಲ್ ವ್ಯವಸ್ಥೆ ಅಸ್ತವ್ಯಸ್ತವಾಗಿರುವ ಹಿನ್ನೆಲೆಯಲ್ಲಿ, ಪಾಲಿಕೆ ವತಿಯಿಂದ ನೇರವಾಗಿ ಗ್ರಾಹಕರ ಮನೆ ಬಾಗಿಲಿಗೆ ಮಾ.27ರಿಂದ ಆಹಾರ ಸರಬರಾಜು ಮಾಡಲು ವ್ಯವಸ್ಥೆ ಮಾಡಲಾಗಿದೆ.
ಗ್ರಾಹಕರು ದೂರವಾಣಿ ಮೂಲಕ ಆರ್ಡರ್ ಮಾಡಿದರೆ ಒಂದು ಗಂಟೆಯ ಒಳಗಾಗಿ ಬೆಳಗ್ಗಿನ ಉಪಾಹಾರ, ಮಧ್ಯಾಹ್ನದ ಊಟ ಮತ್ತು ರಾತ್ರಿ ಊಟ ಮನೆ ಬಾಗಿಲಿಗೆ ಬರಲಿದೆ. ಮೆನು ಇಂತಿದೆ.
ಬೆಳಗಿನ ಉಪಾಹಾರ: 2ಇಡ್ಲಿ-1 ವಡೆ ರೂ. 40, ಉಪ್ಪಿಟ್ಟು-ರೂ.30, ಸೆಟ್‍ದೋಸೆ(1 ಪ್ಲೇಟ್) ರೂ.50, ರೈಸ್‍ಬಾತ್ ವಿತ್ ಚಟ್ನಿ ರೂ. 50.
ಮಧ್ಯಾಹ್ನದ ಊಟ: ಚಪಾತಿ, ಪಲ್ಯ, ವೈಟ್‍ರೈಸ್, ಸಾಂಬಾರ್, ಪಾಪಡ್, ಮಜ್ಜಿಗೆ- ರೂ. 80, ಮಿನಿಮೀಲ್ಸ್ ರೂ. 40, ರೈಸ್ ಬಾತ್ ವಿತ್ ಸಾಗು ಹಾಗೂ ಮೊಸರನ್ನ ವಿತ್ ಉಪ್ಪಿನಕಾಯಿ ರೂ.60.
ರಾತ್ರಿ ಊಟ: 2 ಚಪಾತಿ ವಿತ್ ಸಾಗು ರೂ. 50, ರೈಸ್ ಬಾತ್ ವಿತ್ ಸಾಗು ಹಾಗೂ ಮೊಸರನ್ನ ವಿತ್ ಉಪ್ಪಿನಕಾಯಿ ರೂ.60.
ಆಸಕ್ತ ಗ್ರಾಹಕರು ತಮ್ಮ ಅವಶ್ಯಕತೆಗನುಗುಣವಾಗಿ ಬೇಡಿಕೆಯನ್ನು ಕನಿಷ್ಠ 1 ಗಂಟೆ ಮೊದಲು ನೀಡಿದಲ್ಲಿ ತಮ್ಮ ಮನೆಗಳಿಗೆ ಸರಬರಾಜು ಮಾಡಲಾಗುವುದು. ಬೆಳಗ್ಗಿನ ಉಪಾಹಾರದ ಅವಧಿ ಬೆಳಿಗ್ಗೆ 7.30ರಿಂದ 10ರವರೆಗೆ, ಮಧ್ಯಾಹ್ನದ ಊಟ 12.30ರಿಂದ 3ರವರೆಗೆ ಮತ್ತು ರಾತ್ರಿ ಊಟ 7.30ರಿಂದ 8.30ರವರೆಗೆ ಲಭ್ಯವಿರುತ್ತದೆ. ಬಿಲ್‍ನ ಮೊತ್ತವನ್ನು ಪೇಟಿಯಂ, ಗೂಗಲ್‍ಪೇ ಅಥವಾ ನಗದು ರೂಪದಲ್ಲಿ ಸಂದಾಯ ಮಾಡಬಹುದಾಗಿದೆ.
ಆರ್ಡರ್ ನೀಡಲು 9972593256 ಅಥವಾ 7829678298 ಸಂಪರ್ಕಿಸುವಂತೆ ಮಹಾನಗರ ಪಾಲಿಕೆ ಆಯುಕ್ತ ಚಿದಾನಂದ ವಟಾರೆ ತಿಳಿಸಿದ್ದಾರೆ.