ರಾಜೇಂದ್ರನಗರದಲ್ಲಿ ರೋಟರಿ ಶಿವಮೊಗ್ಗ ಪೂರ್ವ, ಜಿಲ್ಲಾಡಳಿತ ಮತ್ತು ಜಿಪಂ, ಆರೋಗ್ಯ ಇಲಾಖೆ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಪಲ್ಸ್ ಪೊಲಿಯೋ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಪಾಲಕರು 5 ವರ್ಷದ ಒಳಗಿನ ಮಕ್ಕಳಿಗೆ ಕಡ್ಡಾಯವಾಗಿ ಪಲ್ಸ್ ಪೊಲಿಯೋ ಹಾಕಿಸಬೇಕು ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಜಿ.ಅನುರಾಧಾ ಮಾತನಾಡಿ, 25 ವರ್ಷಗಳ ಪಲ್ಸ್ ಪೊಲಿಯೋ ಅಭಿಯಾನದಲ್ಲಿ ಭಾರತ ದೇಶ ಯಶಸ್ಸು ಕಂಡಿದೆ. ನೆರೆರಾಷ್ಟ್ರಗಳಲ್ಲಿ ಪೊಲಿಯೋ ಪ್ರಕರಣ ಇನ್ನೂ ಇರುವುದರಿಂದ ಮುನ್ನೆಚ್ಚರಿಕೆ ದೃಷ್ಠಿಯಿಂದ ಅಭಿಯಾನ ಮುಂದುವರೆಸಬೇಕಿದೆ ಎಂದು ಹೇಳಿದರು.
ಲಸಿಕೆ ಹಾಕಿಸುವುದರಿಂದ ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ. ರೋಟರಿ ಸಂಸ್ಥೆಯು ಪಲ್ಸ್ ಪೊಲಿಯೋ ಅಭಿಯಾನದಲ್ಲಿ ತನ್ನದೇ ಆದ ಸೇವೆಯನ್ನು ದಶಕಗಳಿಂದಲೂ ಸಲ್ಲಿಸುತ್ತಿರುವುದು ಅಭಿನಂದನೀಯ ಎಂದು ತಿಳಿಸಿದರು.
ಜಿಪಂ ಸಿಇಒ ಎಂ.ಎಲ್.ವೈಶಾಲಿ ಮಾತನಾಡಿ, ರಾಷ್ಟ್ರೀಯ ಲಸಿಕಾ ಅಭಿಯಾನ ಹಾಗೂ ಆರೋಗ್ಯಕ್ಕೆ ಸಂಬಂಧಿಸಿ ಕಾರ್ಯಕ್ರಮಗಳಲ್ಲಿ ಜನತೆ ಕೈಜೋಡಿಸಬೇಕು. ಮಕ್ಕಳ ಆರೋಗ್ಯ ವೃದ್ಧಿಗೆ ಲಸಿಕೆ ಅತ್ಯಂತ ಅವಶ್ಯಕ ಎಂದು ಹೇಳಿದರು.
ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಎಂ.ಪಿ.ನಾಗರಾಜ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘ ಸಂಸ್ಥೆಗಳ ಪ್ರಮುಖರು ಸೇರಿದಂತೆ ವಿವಿಧ ಸಂಸ್ಥೆಗಳ ಪ್ರತಿನಿಧಿ-ಸ್ವಯಂ ಸೇವಕರು ಪಲ್ಸ್ ಪೊಲಿಯೋ ಕುರಿತು ಜಾಗೃತಿ ಮೂಡಿಸಬೇಕಿದೆ. ಅಂದೋಲನ ರೂಪದಲ್ಲಿ ಮನೆ ಮನೆಗೂ ಪಲ್ಸ್ ಪೊಲಿಯೋ ಬಗ್ಗೆ ತಿಳಿಸಬೇಕು ಎಂದರು.
ರೋಟರಿ ರಾಷ್ಟ್ರೀಯ ಪಲ್ಸ್ ಪೊಲಿಯೋ ಯೋಜನೆ ಉಪಾಧ್ಯಕ್ಷ ಡಾ. ಪಿ.ನಾರಾಯಣ್, ಪ್ರಮುಖರಾದ ನಾಗರಾಜನಾಯ್ಕ, ಡಾ. ಕಿರಣ್, ಡಾ. ರಘುನಂದನ್, ಡಾ. ಗುಡದಪ್ಪ, ಐಎಂಎ ಅಧ್ಯಕ್ಷ ಡಾ. ಪರಮೇಶ್ವರ ಶಿಗ್ಗಾವ್, ರೋಟರಿ ವಲಯ 11ರ ಸಹಾಯಕ ಗವರ್ನರ್ ಜಿ.ವಿಜಯ್ಕುಮಾರ್, ಎಂ.ಮುರಳಿ, ಬಿಂದು ವಿಜಯ್ಕುಮಾರ್, ನಾಗರಾಜ್ ಕಂಕಾರಿ, ವೇದಾ ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.