ಶಿವಮೊಗ್ಗ, ಜನವರಿ 16 : ಕನ್ನಡ ಮತ್ತು ಸಂಸ್ಕøತಿ ಇಲಾಖೆಯು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘದ ಸಹಯೋಗದೊಂದಿಗೆ ಜನವರಿ 17ರಂದು ಸಂಜೆ 6ಗಂಟೆಗೆ ನಗರದ ನೆಹರೂ ಕ್ರೀಡಾಂಗಣದಲ್ಲಿ ವಿಶೇಷ ಕಲಾಪ್ರಕಾರಗಳ ಅತ್ಯಪರೂಪದ ಜಾನಪದ ಜಾತ್ರೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಈ ಜಾನಪದ ಜಾತ್ರೆಯಲ್ಲಿ ನಾಡಿನ ಭವ್ಯ ಶ್ರೀಮಂತಿಕೆಯ ಪ್ರತೀಕವಾಗಿರುವ ಹಲವು ಜಾನಪದ ಕಲಾವಿದರು ಆಗಮಿಸಿ ತಮ್ಮ ಕಲಾ ಶ್ರೀಮಂತಿಕೆಯನ್ನು ಪ್ರದರ್ಶಿಸಲಿದ್ದಾರೆ. ವಿಶೇಷವಾಗಿ ಕೋಟೇಶ್ವರದ ಶಿವಾನಂದ್ ಮತ್ತು ಬಳಗದವರಿಂದ ಸ್ಯಾಕ್ಸೋಫೋನ್ ವಾದನ, ಹೆಗ್ಗೋಡಿನ ಪಿ.ಟಿ.ಸುಮಿತ್ರಾ ಮತ್ತು ತಂಡದವರಿಂದ ಡೊಳ್ಳುಕುಣಿತ, ಗೋಣಿಬೀಡಿನ ಶಿವರಾಜ ಮತ್ತು ತಂಡದವರಿಂದ ವೀರಭದ್ರಕುಣಿತ, ಸಾಗರದ ಶೃತಿ ಮತ್ತು ತಂಡದವರಿಂದ ಲಂಬಾಣಿ ನ್ಯತ್ಯ, ಪಿರಿಯಾಪಟ್ಟಣದ ಕುಮಾರ್ ಎಂ. ಮತ್ತು ತಂಡದವರಿಂದ ಕಂಸಾಳೆ, ಉಡುಪಿಯ ರೇವತಿ ಮತ್ತು ತಂಡದವರಿಂದ ಚಂಡೆವಾದನ, ತುಮಕೂರಿನ ಮಾರುತಿ ಮತ್ತು ತಂಡದವರಿಂದ ಗೊರವರ ಕುಣಿತ, ಕಾರವಾರದ ಪುರುಷೋತ್ತಮ ಮತ್ತು ತಂಡದವರಿಂದ ಹಾಲಕ್ಕಿ ಸುಗ್ಗಿಕುಣಿತ, ಶಿವಮೊಗ್ಗದ ಕಾವ್ಯಶ್ರೀ ಎಂ.ಎಸ್. ಮತ್ತು ತಂಡದವರಿಂದ ಪೂಜಾಕುಣಿತ, ಚಾಮರಾಜನಗರದ ಬಸವರಾಜು ವiತ್ತು ತಂಡದವರಿಂದ ಗೋರುಕನ ನೃತ್ಯ, ಹಳಿಯಾಳದ ಜೂಲಿಯಾನ ಫರ್ನಾಂಡಿಸ್ ಸಿದ್ದಿ ಮತ್ತು ತಂಡದವರಿಂದ ಡಮಾಮಿ ನೃತ್ಯ, ಗದಗದ ಶಂಕರಪ್ಪ ಸಂಕಣ್ಣನವರ ಕೊತಬಾಳ ಮತ್ತು ತಂಡದವರಿಂದ ಜೋಗತಿ ನೃತ್ಯ ಮುಂತಾದ ಅಪರೂಪದ ಜಾನಪದ ನೃತ್ಯಪ್ರದರ್ಶನ ಕಾರ್ಯಕ್ರಮ ನಡೆಯಲಿದೆ.
ಈ ಎಲ್ಲಾ ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ನೌಕರರು ಹಾಗೂ ನಗರದ ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಸಂಭ್ರಮಿಸುವಂತೆ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!