ಶಿವಮೊಗ್ಗ, ಡಿಸೆಂಬರ್-04: ಅಸಂಘಟಿತ ವಲಯ ಕಾರ್ಮಿಕರಿಗೆ ಆರ್ಥಿಕ ಭದ್ರತೆ ಒದಗಿಸಲು ಕೇಂದ್ರ ಸರ್ಕಾರ ಪ್ರಧಾನ್ ಮಂತ್ರಿ ಶ್ರಮಯೋಗಿ ಮಾನ್-ಧನ್ ಯೋಜನೆ ಮೂಲಕ ಕಾರ್ಮಿಕರಿಗೆ ಪಿಂಚಾಣಿ ಸೌಲಭ್ಯ ನೀಡಲು ಮುಂದಾಗಿದೆ.
ಬೀದಿ ವ್ಯಾಪಾರಿಗಳು, ಬಿಸಿಯೂಟ ಸಿದ್ಧ ಪಡಿಸುವವರು, ಹಮಾಲಿಗಳು, ಇಟ್ಟಿಗೆ ಭಟ್ಟ ಕಾರ್ಮಿಕರು, ಚಮ್ಮಾರರು, ಮನೆ ಕೆಲಸದವರು, ಆಗಸರು, ರಿಕ್ಷಾ ಚಾಲಕರು, ಭೂರಹಹಿತ ಕಾರ್ಮಿಕರು, ಚರ್ಮೋದ್ಯಮದ ಕಾರ್ಮಿಕರು, ಧ್ವನಿ ಮತ್ತು ದೃಶ್ಯ ಕಾರ್ಮಿಕರು, ಇತರೆ ಉದ್ಯೋಗಗಳ ಕೆಲಸಗಾರರು ಇಂತಹ ಅಸಂಘಟಿತ ವಲಯದ ಕಾರ್ಮಿಕರಿಗೆ ಅವರ ವಯೋವೃದ್ಧ ವೇಳೆಯಲ್ಲಿ ಸಾಮಾಜಿಕ ಭದ್ರತೆ ಕಲ್ಪಿಸಲು ಭಾರತ ಸರ್ಕಾರವು ಪಿಎಂ-ಎಸ್‍ವೈಎಂ ಎಂಬ ಮಹತ್ವಾಕಾಂಕ್ಷಿ ವಂತಿಗೆ ಆಧಾರಿತ ಪಿಂಚಣಿ ಯೋಜನೆ ಜಾರಿಗೊಳಿಸಿದೆ.
ಆರ್ಹತೆಗಳು: ಯೋಜನೆಗೆ ಒಳಪಡುವ ಕಾರ್ಮಿಕ ಅಸಂಘಟಿತ ವಲಯದ ಕಾರ್ಮಿಕರಾಗಿದ್ದು, 18 ರಂದ 40 ವರ್ಷದೊಳಗಿರಬೇಕು. ಅವರ ಮಾಸಿಕ ಆದಾಯ 15,000 ರೂ ಅಥವಾ ಅದಕ್ಕಿಂತ ಕಡಿಮೆ ಇರಬೇಕು ಮತ್ತು ಆದಾಯ ತೆರಿಗೆ ಇಎಸ್‍ಐ, ಪಿಎಫ್, ಎನ್‍ಪಿಎಸ್ ಯೋಜನೆಯ ವ್ಯಾಪ್ತಿಗೆ ಒಳಪಟದವರು ಈ ಯೋಜನೆಗೆ ಆರ್ಹತೆ ಹೊಂದಿದ್ದಾರೆ.
ನೋಂದಣಿ ವಿಧಾನ: ಅರ್ಹ ಅಸಂಘಟಿತ ಕಾರ್ಮಿಕರು ಹತ್ತಿರದ ಕಾಮನ್ ಸರ್ವೀಸ್ ಸೆಂಟರ್‍ಗಳಲ್ಲಿ ನಂತರ ಆರಂಭಿಕ ವಂತಿಕೆ ಮೊತ್ತ, ಆಧಾರ್‍ಕಾರ್ಡ್, ಖಾತೆ ಹೊಂದಿದ ಬ್ಯಾಂಕ್ ಖಾತೆ ಪ್ರತಿ ವಿವರÀಗಳೊಂದಿಗೆ ಯೋಜನೆಯಡಿ ಫಲಾನುಭವಿಗಳಾಗಿ ನೋಂದಾಯಿಸ ಬಹುದಾಗಿರುತ್ತದೆ. ಸಿಎಸ್‍ಸಿಗಳ ವಿವರಗಳನ್ನು ಎಲ್‍ಐಸಿ ಶಾಖೆಗಳು, ಕಾರ್ಮಿಕ ಇಲಾಖೆ, ಕೇಂದ್ರ ಸರ್ಕಾರದ ಕಾರ್ಮಿಕ ಇಲಾಖೆ, ಇಎಸೈ ಕಾರ್ಪೋರೇóನ್ ಹಾಗೂ ಭವಿಷ್ಯನಿಧಿ ಸಂಘಟನೆ ಕಛೇರಿ ಮತ್ತು ಇಲಾಖೆ ವೆಬ್ ವಿಳಾಸ hಣಣಠಿ://ಟoಛಿಚಿಣoಡಿ.ಛಿsಛಿಟouಜ.iಟಿ ಗಳಲ್ಲಿ ಪಡೆಯ ಬಹುವುದು.
ಯೋಜನೆಯ ಸೌಲಭ್ಯ: ಕೇಂದ್ರ ಸರ್ಕಾರವು ಚಂದಾದಾರರು ಪಾವತಿಸುವ ವಂತಿಕೆ ಸಮಾನಾಂತರ ವಂತಿಕೆಯನ್ನು ಪಿಂಚಣಿ ಖಾತೆಗೆ ಪಾವತಿಸುತ್ತದೆ. ಫಲಾನುಭವಿಯ ವಯಸ್ಸು 60 ವರ್ಷ ಪೂರ್ಣಗೊಂಡ ನಂತರ ತಿಂಗಳಿಗೆ 3,000ರೂ,ಗಳ ಖಚಿತ ಕನಿಷ್ಠ ಮಾಸಿಕ ಪಿಂಚಣಿಯನ್ನು ಪಡೆಯಲು ಅರ್ಹರು.
ಕಾರ್ಮಿಕರು 10 ವರ್ಷದೊಳಗಾಗಿ ಯೋಜನೆಯಿಂದ ನಿರ್ಗಮಿಸಿದಲ್ಲಿ ಅವರು ಪಾವತಿಸಿರುವ ವಂತಿಕೆಯನ್ನು ಮಾತ್ರ ಆ ಅವಾಧಿಗೆ ಉಳಿತಾಯ ಖಾತೆಗೆ ಪಾವತಿಸಲಾಗುವ ಬಡ್ಡಿಯೊಂದಿಗೆ ಹಿಂದಿರುಗಿಸಲಾಗುತ್ತದೆ. 10 ವರ್ಷ ಅಥವ ಅದಕ್ಕಿಂತ ಹೆಚ್ಚು ಅವಧಿಯ ನಂತರ ನಿರ್ಗಮಿಸಿ ಪಾವತಿಸಿರುವ ವಂತಿಕೆಯೊಂದಿಗೆ ಪಿಂಚಾಣಿ ಖಾತೆಗೆ ಜಮೆಯಾಗಿರುವ ಬಡ್ಡಿ ಅಥವಾ ಉಳಿತಾಯ ಖಾತೆಗೆ ಪಾವತಿಸಲಾಗುವ ಬಡ್ಡಿ ಇವುಗಳಲ್ಲಿ ಯಾವುದು ಹೆಚ್ಚೋ ಅದನ್ನು ಪಾವತಿಸಲಾಗುವುದು.
ಕಾರ್ಮಿಕರು ನಿರಂತ ವಂತಿಕೆಯನ್ನು ಪಾವತಿಸಿದ್ದು, ಅವರು 60 ವರ್ಷದ ಒಳಗೆ ಮೃತಪಟ್ಟಲ್ಲಿ ಅಥವಾ ಶಾಶ್ವತ ಅಂಗ ವೈಪಲ್ಯತೆಯಿಂದ ವಂತಿಕೆಯನ್ನು ಪಾವತಿಸಲು ಸಾಧ್ಯವಾಗದಿದಲ್ಲಿ ಅವನ/ಅವಳ ಸಂಗಾತಿಯುತದ ನಂತರ ಈ ಯೋಜನೆಗೆ ಸೇರಬಹುದಾಗಿದ್ದು, ವಂತಿಕೆ ಪಾವತಿಸಿ ಮುಂದುವರಿಸಬಹುದು. ಅವರ ವಂತಿಕೆಯ ಬಡ್ಡಿ ಹಾಗೂ ಪಿಂಚಣಿ ಶೇ.50 ರಷ್ಟು ಪಡೆಯಲು ಅರ್ಹರು.
ಯೋಜನೆಯ ವಿದ್ಯುನ್ಮಾನ ಆಧಾರಿತವಾಗಿದ್ದು ಎಸ್.ಎಂ.ಎಸ್ ಮೂಲಕ ಎಲ್ಲಾ ವ್ಯವಹಾರ, ಮಾಹಿತಿ ಕಾಲ ಕಾಲಕ್ಕೆ ತಿಳಿಸಲಾಗುವುದು.
ಹೆಚ್ಚಿನ ಮಾಹಿತಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಾರ್ಮಿಕ ಇಲಾಖೆ ಕಛೇರಿ, ಎಲ್‍ಐಸಿಯ ಶಾಖೆ ಕಛೇರಿ, ಇಪಿಎಫ್‍ಒ ಮತ್ತು ಇಎಸ್‍ಐಸಿ ಕಛೇರಿಗಳು ಹಾಗೂ ಟೋಲ್ ಫ್ರೀಕಾಲ್ ಸೆಂಟರ್ ಸಂಖ್ಯೆ- 1800-267-6888, ಎಲ್.ಐ.ಸಿ.ಯು ವೆಬ್‍ಸೈಟ್ ತಿತಿತಿ.ಟiಛಿiಟಿಜiಚಿ.iಟಿ ಸಂಪರ್ಕಿಸಬಹುದು.

error: Content is protected !!