ಶಿವಮೊಗ್ಗ, ಡಿಸೆಂಬರ್ 03 : ನಗರದ ಮಹಾನಗರ ಪಾಲಿಕೆ ವತಿಯಿಂದ ಬೊಮ್ಮನಕಟ್ಟೆ ಆಶ್ರಯ ಬಡಾವಣೆಯ ಎ ಮತ್ತು ಹೆಚ್ ಬ್ಲಾಕ್ನವರೆಗೆ ಮತ್ತು ವಿರುಪಿನಕೊಪ್ಪ ಗ್ರಾಮದಲ್ಲಿ ಫಲಾನುಭವಿಗಳನ್ನು ನಿಯಮಾನುಸಾರ ಆಯ್ಕೆ ಮಾಡಿ ನಿವೇಶನಗಳನ್ನು ಹಂಚಿಕೆ ಮಾಡಲಾಗಿದ್ದು, ಹಂಚಿಕೆಯಾದ ಕೆಲ ನಿವೇಶನಗಳನ್ನು ಅರ್ಹ ಫಲಾನುಭವಿಗಳು ಹಕ್ಕುಪತ್ರ ಉಲ್ಲಂಘಿಸಿ, ಮನೆಗಳನ್ನು ನಿರ್ಮಿಸದೆ ಖಾಲಿ ಬಿಟ್ಟಿರುವ ಜಾಗಗಳಲ್ಲಿ ಅನ್ಯರು ಅನಧಿಕೃತವಾಗಿ ಬೇರೆಯವರ ನಿವೇಶನದಲ್ಲಿ ಮನೆ ನಿರ್ಮಿಸಿ ಮಾರಾಟ ಮಾಡಿ ಪ್ರಕರಣಗಳು ಬೆಳಕಿಗೆ ಬಂದಿವೆ.
ಸಂಬಂಧ ಪಟ್ಟ ಫಲಾನುಭವಿಗಳ ಪಟ್ಟಿಯನ್ನು ಆಶ್ರಯ ಕಛೇರಿಯ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ. ಫಲಾನುಭವಿಗಳು ಮಂಜೂರಾಗಿರುವ ನಿವೇಶನದ ಬಗ್ಗೆ ಖಾತರಿಪಡಿಸಿಕೊಳ್ಳಬಹುದು. ಸಂಬಂಧಪಟ್ಟವರು ಅಕ್ಷೇಪಣೆ ಅಥವಾ ಇತರೆ ದೂರುಗಳಿದ್ದಲ್ಲಿ ಲಿಖಿತವಾಗಿ ಸೂಕ್ತ ದಾಖಲೆಗಳೊಂದಿಗೆ ಆಯುಕ್ತರು ಹಾಗೂ ಸದಸ್ಯ ಕಾರ್ಯದರ್ಶಿ ನಗರ ಆಶ್ರಯ ಸಮಿತಿ, ಮಹಾನಗರ ಪಾಲಿಕೆಗೆ ಸಲ್ಲಿಸ ಬಹುದು. ಬೊಮ್ಮನಕಟ್ಟೆ ಆಶ್ರಯ ಬಡಾವಣೆಯಲ್ಲಿ ಅನಧಿಕೃತವಾಗಿ ಮನೆ ನಿರ್ಮಾಣ, ಜಾಗಗಳ ಒತ್ತುವರಿ ಪ್ರಕರಣ ಹಾಗೂ ಇತರೆ ಕಾನೂನು ಉಲ್ಲಂಘಿಸಿದ ಪ್ರಕರಣಗಳು ಕಂಡು ಬಂದಲ್ಲಿ ಕರ್ನಾಟಕ ಭೂಕಬಳಿಕೆ ನಿವೇಷನ ಕಾಯ್ದೆಯಂತೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮಹಾನಗರ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.